ನನ್ನ ಪುಟಗಳು

27 ಡಿಸೆಂಬರ್ 2018

8ನೇ ತರಗತಿ ಗದ್ಯ - ನೀರುಕೊಡದ ನಾಡಿನಲ್ಲಿ (8th-Prose Neerukodada nadinalli)




           ಶ್ರೀಮತಿ ನೇಮಿಚಂದ್ರ ಅವರು ಚಿತ್ರದುರ್ಗದಲ್ಲಿ ಜುಲೈ ೧೬, ೧೯೫೯ರಂದು ಜನಿಸಿದರು. ತಂದೆ ಪ್ರೊ. ಜಿ. ಗುಂಡಣ್ಣ, ತಾಯಿ ತಿಮ್ಮಕ್ಕ. ಪ್ರಾರಂಭಿಕ ಶಿಕ್ಷಣ ತುಮಕೂರು, ಮೈಸೂರು. ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್‌ನಿಂದ ಬಿ.ಇ. ಪದವಿ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಎಂ.ಎಸ್. ಪದವಿ. ಬೆಂಗಳೂರಿನ ಎಚ್.ಎ.ಎಲ್ ಸಂಸ್ಥೆಯಲ್ಲಿ ಉನ್ನತ ತಂತ್ರಜ್ಞ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕನ್ನಡದಲ್ಲಿ ಚಿಂತನಪೂರ್ಣ ಲೇಖನ, ಪುಸ್ತಕಗಳನ್ನು ಬರೆಯುತ್ತಿದ್ದಾರೆ.

       ನೇಮಿಚಂದ್ರ ಅವರು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ತಮ್ಮ ವೈಶಿಷ್ಟ್ಯಪೂರ್ಣ ಬರಹಗಳನ್ನು ನೀಡುತ್ತಾ ಬಂದಿದ್ದಾರೆ. ‘ನೇಮಿಚಂದ್ರರ ಕಥೆಗಳು’ ಒಂದು ದೊಡ್ಡ ಸಂಕಲನವಾಗಿ ಹೊರಬಂದಿದೆ. ಹಿಂದೆ ಬಿಡಿ ಸಂಕಲನಗಳಾಗಿ ‘ನಮ್ಮ ಕನಸುಗಳಲ್ಲಿ ನೀವಿದ್ದೀರಿ’, ‘ಮತ್ತೆ ಬರೆದ ಕಥೆಗಳು’, ‘ಕಳೆಯ ಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ’ ಇತ್ಯಾದಿ ರೂಪಗಳಲ್ಲಿ ಬಂದ ಈ ಸಂಕಲನದಲ್ಲಿನ ಕಥೆಗಳು ಓದುಗರನ್ನು ಅಪಾರವಾಗಿ ಸೆಳೆದಿವೆ.
      ನೇಮಿಚಂದ್ರರ ಕಾದಂಬರಿಗಳೂ ಜನಪ್ರಿಯತೆ ಗಳಿಸಿಕೊಂಡಿವೆ. ವಿಜ್ಞಾನದ ವಸ್ತುಗಳನ್ನು ಒಳಗೊಂಡ ಅವರ ಕಥಾ ಹರಹು ಕನ್ನಡ ಸಾಹಿತ್ಯ ಲೋಕಕ್ಕೇ ಒಂದು ಮೆರುಗು ತಂದಿದೆ. ಯಾವುದೇ ಒಂದು ಕಥಾ ವಸ್ತುವನ್ನು ರೂಪಿಸುವಾಗ ಅದರ ಹಿನ್ನೆಲೆಯನ್ನು ಅತ್ಯಂತ ಸನಿಹದಲ್ಲಿ ಅನುಭವಿಸಿ ಬರೆಯುವುದಕ್ಕಾಗಿ ಅವರು ನಡೆಸಿದ ತಿರುಗಾಟ ಮತ್ತು ಅಭಿವ್ಯಕ್ತಿಸಿರುವ ರೀತಿ ಅಚ್ಚರಿ ಹುಟ್ಟಿಸುವಂತದ್ದು. ಮೆಚ್ಚುವಂತದ್ದು. ಇದಕ್ಕೊಂದು ಉದಾಹರಣೆ ಕನ್ನಡಿಗರ ಮಾನಸದಲ್ಲಿ ಭಿತ್ತಿಗೊಂಡಿರುವ ನೇಮಿಚಂದ್ರರ ‘ಯಾದ್ ವಶೇಮ್’. ಮಹಾಯುದ್ಧ ಕಾಲದ ಹಿನ್ನೆಲೆಯನ್ನು ಇಟ್ಟುಕೊಂಡು ಚಿತ್ರಿತವಾಗಿರುವ ಈ ಕಥೆಯಲ್ಲಿನ ಹುಡುಗಿ ಅಂದಿನ ನಾಜಿ ರಕ್ಕಸರ ಕೈಯಿಂದ ತಪ್ಪಿಸಿಕೊಂಡು ನಮ್ಮ ಹಳೆಯ ಬೆಂಗಳೂರಿನಲ್ಲಿ ಬೆಳೆಯುತ್ತಾಳೆ. ತನ್ನ ಕಳೆದುಹೋದ ಕುಟುಂಬವನ್ನು ಅರಸುತ್ತ ಹೊರಟ ಈ ಹುಡುಗಿ ಜರ್ಮನಿ, ಅಮೆರಿಕವನ್ನು ಸುತ್ತಿ, ಕಡೆಗೆ ಯುದ್ಧಗ್ರಸ್ಥವಾದ ಇಸ್ರೇಲ್ - ಪ್ಯಾಲೆಸ್ಟೇನಿನ ವಾತಾವರಣದಲ್ಲಿ ಬಂದಿಳಿಯುವುದು ಚಿಂತನಪೂರ್ಣ ಮತ್ತು ಅದು ಓದಿಸಿಕೊಂಡು ಹೋಗುವ ರೀತಿಯಲ್ಲಿಯೇ ಹೇಳುವುದಾದರೆ ರೋಚಕ ಚಿತ್ರಣವಾಗಿದೆ. ಇದಕ್ಕಾಗಿ ನೇಮಿಚಂದ್ರರು ಸಂಬಂಧಪಟ್ಟ ದೇಶಗಳಿಗೆ, ಸ್ಥಳಗಳಿಗೆ ಅಲೆದಿದ್ದಾರೆ.
      ನೇಮಿಚಂದ್ರರ ವೈಜ್ಞಾನಿಕ ಬರಹಗಳಲ್ಲಿ ಜೀವನ ಚರಿತ್ರೆಗಳು ವಿಶೇಷವೆನಿಸುತ್ತವೆ. ‘ಮೇರಿ ಕ್ಯೂರಿ’, ವೆಲ್ಲೂರು ಆಸ್ಪತ್ರೆಯ ಸಂಸ್ಥಾಪಕರಾದ ‘ಡಾ. ಇದಾಸ್ಕಡರ್’, ‘ಥಾಮಸ್ ಆಲ್ವ ಎಡಿಸನ್’, ‘ನೊಬೆಲ್ ವಿಜೇತ ಮಹಿಳೆಯರು’, ‘ಮಹಿಳಾ ವಿಜ್ಞಾನಿಗಳು’ ಜನಪ್ರಿಯವೆನಿಸಿವೆ.
      ನೇಮಿಚಂದ್ರರ ಚಿಂತನಶೀಲ ಮನಸ್ಸು ವೈವಿಧ್ಯಪೂರ್ಣವಾಗಿದ್ದು ಸಾಮಾಜಿಕ ಚಿಂತನೆಗಳಲ್ಲೂ ಅಪಾರವಾದ ಪಾತ್ರ ನಿರ್ವಹಿಸಿವೆ. ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು’ ಈ ನಿಟ್ಟಿನಲ್ಲಿ ಒಂದು ಗಮನಾರ್ಹ ಕೃತಿ. ‘ನನ್ನ ಕಥೆ-ನಮ್ಮ ಕಥೆ’ ಎಂಬುದು ಮಹಿಳೆಯೊಬ್ಬಳು ಮನೆಯಲ್ಲಿನ ದೌರ್ಜನ್ಯದ ವಿರುದ್ಧ ಬಂಡೇಳುವ ಕಥೆಯೊಂದರ ಅನುವಾದವಾಗಿದೆ.
ಹೇಮಲತಾ ಮಹಿಷಿ ಅವರೊಡನೆ ಅವರು ನಿರೂಪಿಸಿರುವ ‘ನ್ಯಾಯಕ್ಕಾಗಿ ಕಾದ ಭಾಂವ್ರಿ ದೇವಿ’ ಪುಸ್ತಕವು ಬಾಲ್ಯವಿವಾಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾನು ಮಾಡಿದ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಕೆಲಸಕ್ಕಾಗಿ, ರಾಕ್ಷಸೀಯ ದೌರ್ಜನ್ಯಕ್ಕೆ ಬಲಿಯಾದ ಭಾಂವ್ರಿ ದೇವಿ ಅವರು ನ್ಯಾಯಕ್ಕಾಗಿ ಕಾದು ಕುಳಿತ ಕಥೆ. ನಮ್ಮ ಸಮಾಜದ ಹಿತ್ತಲಿನ ಸಾಮ್ರಾಜ್ಯದ ಕರಾಳತೆಯನ್ನು ರಾಚಿಸುವಂತಿದೆ.
        ಸ್ವಾತಂತ್ರ ಪೂರ್ವದ ಕನ್ನಡದ ಮಹಾನ್ ಕವಯತ್ರಿ ‘ಬೆಳೆಗೆರೆ ಜಾನಕಮ್ಮ’, ‘ನೋವಿಗದ್ದಿದ ಕುಂಚ’ ಎಂಬ ಮಹಾನ್ ಡಚ್ ಕಲಾವಿದ ವ್ಯಾನ್ ಗೋನ ಅವರ ಜೀವನ ಚರಿತ್ರೆ ಇವೆಲ್ಲಾ ನೇಮಿಚಂದ್ರ ಇನ್ನಿತರ ವಿಶಾಲ ಆಸಕ್ತಿಗಳನ್ನು ತೋರುತ್ತವೆ.         *‘ಒಂದು ಕನಸಿನ ಪಯಣ’, ‘ಪೆರುವಿನ ಪವಿತ್ರ ಕಣಿವೆಯಲ್ಲಿ’ ಕೃತಿಗಳು ನೇಮಿಚಂದ್ರರ ಪ್ರವಾಸ ಕಥನಗಳಾಗಿವೆ.
ನೇಮಿಚಂದ್ರರ ವಿಚಾರ ಪೂರ್ಣ ಲೇಖನಗಳಾದ ‘ಸಾಹಿತ್ಯ ಮತ್ತು ವಿಜ್ಞಾನ’, ‘ಬದುಕು ಬದಲಿಸಬಹುದು’, ‘ದುಡಿವ ಹಾದಿಯಲ್ಲಿ ಜೊತೆಯಾಗಿ’, ‘ಮಹಿಳಾ ಅಧ್ಯಯನ’, ‘ನಿಮ್ಮ ಮನೆಗೊಂದು ಕಂಪ್ಯೂಟರ್, ‘ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೋಟರ್ಸ್’ , ‘ಮಹಿಳಾ ಲೋಕ’ (ಸಂಪಾದಿತ) ಇವೆಲ್ಲಾ ನೇಮಿಚಂದ್ರರ ಚಿಂತನಪೂರ್ಣ ಬರಹಗಳ ಮತ್ತಷ್ಟು ವಿಶಾಲತೆ, ಆಳ, ಬದುಕಿನ ಕುರಿತಾದ ವಿಶಾಲ ದೃಷ್ಟಿಗಳನ್ನು ಅಭಿವ್ಯಕ್ತಿಸುತ್ತವೆ. ನೇಮಿಚಂದ್ರರು 'ತರಂಗ' ಮುಂತಾದ ನಿಯತಕಾಲಿಕೆಗಳಲ್ಲಿ ಆಗಾಗ ನಡೆಸಿರುವ ಸಂದರ್ಶನ ಲೇಖನಗಳು, ‘ಉದಯವಾಣಿ’ ಮುಂತಾದ ಪತ್ರಿಕೆಗಳಲ್ಲಿ ಮೂಡುತ್ತಿರುವ ಅಂಕಣಗಳು ಕೂಡಾ ಸುದೀರ್ಘ ವ್ಯಾಪ್ತಿಯ ಆಳದ್ದಾಗಿವೆ.

ಸಾಹಿತ್ಯ/ಕೃತಿಗಳು

ಕಾದಂಬರಿಗಳು:
  • ಯಾದ್ ವಶೇಮ್ (ನವಕರ್ನಾಟಕ ಪಬ್ಲಿಕೇಶನ್ಸ್, ೨೦೦೭)
ಕಥಾಸಂಕಲನ:
  • ನಮ್ಮ ಕನಸುಗಳಲ್ಲಿ ನೀವಿದ್ದೀರಿ
  • ಮತ್ತೆ ಬರೆದ ಕಥೆಗಳು
  • ಕಳೆಯ ಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ
  • ನೇಮಿಚಂದ್ರರ ಕಥೆಗಳು
ಜೀವನ ಚರಿತ್ರೆ:
  • ಬೆಳಗೆರೆ ಜಾನಕಮ್ಮ ಬದುಕು-ಬರಹ (ಸಂಪಾದಿತ)
  • ನೋವಿಗದ್ದಿದ ಕುಂಚ - ವ್ಯಾನ್ ಗೋ ಜೀವನ ಚಿತ್ರ
  • ಬೆಳಕಿಗೊಂದು ಕಿರಣ ಮೇರಿ ಕ್ಯೂರಿ
  • ಥಾಮಸ್ ಆಲ್ವಾ ಎಡಿಸನ್
  • ಡಾ.ಈಡಾ ಸ್ಕಡರ್
  • ನೊಬೆಲ್ ಪ್ರಶಸ್ತಿ ವಿಜೇತ ಮಹಿಳಾ ವಿಜ್ಙಾನಿಗಳು
  • ನನ್ನ ಕಥೆ... ನಮ್ಮ ಕಥೆ...
  • ಕಾಲು ಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು
  • ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು
ಪ್ರವಾಸ ಕಥನ:
  • ಒಂದು ಕನಸಿನ ಪಯಣ
  • ಪೆರುವಿನ ಪವಿತ್ರ ಕಣಿವೆಯಲ್ಲಿ
ಇತರೆ:
  • ಸಾಹಿತ್ಯ ಮತ್ತು ವಿಜ್ಞಾನ
  • ಬದುಕು ಬದಲಿಸಬಹುದು (ಅಂಕಣ ಸಂಗ್ರಹ)
  • ದುಡಿವ ಹಾದಿಯಲಿ ಜೊತೆಯಾಗಿ (ದುಡಿವ ದಂಪತಿಗಳಿಗಾಗಿ)
  • ಮಹಿಳಾ ಅಧ್ಯಯನ
  • ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ಸ್
  • ನಿಮ್ಮ ಮನೆಗೊಂದು ಕಂಪ್ಯೂಟರ್
  • ಮಹಿಳಾ ಲೋಕ (ಸಂಪಾದಿತ)
  • ನ್ಯಾಯಕ್ಕಾಗಿ ಕಾದ ಭಾಂವ್ರಿ ದೇವಿ (ಹೇಮಲತಾ ಮಹಿಷಿ ಅವರೊಡನೆ)

ಪ್ರಶಸ್ತಿ ಗೌರವಗಳು:
  • 'ಬೆಳಕಿನೊಂದು ಕಿರಣ ಮೇರಿ ಕ್ಯೂರಿ', 'ಪೆರುವಿನ ಪವಿತ್ರ ಕಣಿವೆಯಲ್ಲಿ' ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ.
  • ‘ಯಾದ್ ವಶೇಮ್’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ 2007ರ ಗೌರವ ಪ್ರಶಸ್ತಿ ಮತ್ತು ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನದ 2009 ‘ಅಕ್ಕ’ ಪ್ರಶಸ್ತಿ.
  • 'ಮತ್ತೆ ಬರೆದ ಕಥೆಗಳು' ಕಥಾಸಂಕಲನಕ್ಕೆ ಆರ್ಯಭಟ ಪ್ರಶಸ್ತಿ, ವಿಜ್ಞಾನ ಸಾಹಿತ್ಯ, ಮಹಿಳಾ ಅಧ್ಯಯನಕ್ಕಾಗಿ 'ಸಂದೇಶ ಪ್ರಶಸ್ತಿ' ದೊರೆತಿದೆ.
  • 'ಒಂದು ಕನಸಿನ ಪಯಣ' ಕೃತಿಗೆ 'ಮಾತೋಶ್ರೀ ರತ್ನಮ್ಮ ಹೆಗ್ಗಡೆ' ಪ್ರಶಸ್ತಿ.
  • ಕನ್ನಡ ಸಾಹಿತ್ಯ ಅಕಾಡೆಮಿ ಜೀವಮಾನದ ಪ್ರಶಸ್ತಿ 
  • ಅತ್ತಿಮಬ್ಬೆ ಪ್ರಶಸ್ತಿ, ೨೦೧೫

***********ಲೇಖಕರ ಪರಿಚಯದ ಮಾಹಿತಿ ಕೃಪೆ: ವಿಕಿಪೀಡಿಯಾ**********

ಪಠ್ಯಾಂಶದಲ್ಲಿರುವ ಕ್ಲಿಷ್ಟಾಂಶಗಳು
(ಸಂಗ್ರಹ: ವಿಶ್ವನಾಥ್ ಕೆ ವಿ. ಸರ್ಕಾರಿ ಪ್ರೌಢಶಾಲೆ, ಶ್ರೀನಿವಾಸಪುರ, ಚನ್ನರಾಯಪಟ್ಟಣ ತಾ, ಹಾಸನ ಜಿಲ್ಲೆ)

೧. ಮ್ಯಾಗ್ಡೊನಾಲ್ಡ್: ೧೯೪೦ ರಲ್ಲಿ  ರಿಚರ್ಡ್‌ ಮತ್ತು ಮುರೈಸ್ ಮ್ಯಾಗ್ಡೊನಾಲ್ಡ್ ಅವರು  ಅಮೇರಿಕದ ಕ್ಯಾಲಿಪೋರ್ನಿಯದಲ್ಲಿ ಸ್ಯಾನ್ ಬರ್ನಾರ‍್ಡಿನೊ ರೆಸ್ಟೋರೆಂಟ್ ತೆರೆದರು. ೩೫೦೦೦ ಕ್ಕೂ ಹೆಚ್ಚು ಕಡೆಗಳಲ್ಲಿ  ಪ್ರಪಂಚದ ಉದ್ದಗಲಕ್ಕೂ ಹರಡಿವೆ. ಇವು ಫಾಸ್ಟ್ ಪುಡ್ ಹೋಟೆಲ್‌ಗಳಾಗಿವೆ. ಇವು ಬಾಗಿದ ಬಿಲ್ಲಿನಾಕಾರದ ಸಂಕೇತಗಳನ್ನು ಇವು ಹೊಂದಿವೆ.ಇಲ್ಲಿ ಎಲ್ಲಾ ತರಹದ ಕುರುಕಲು ತಿಂಡಿಗಳು ಸಿಗುತ್ತವೆ. ಮ್ಯಾಗ್ಡೊನಾಲ್ಡ್ ಸಮೂಹ ಸಂಸ್ಥೆಯಾಗಿ ಸುಮಾರು ೪೪೦೦೦೦ ಉದ್ಯೋಗಿಗಳನ್ನು ಒಳಗೊಂಡಿದೆ.

೨. ಸ್ಯಾಂಡ್‌ವಿಚ್: ಬ್ರೆಡ್‌ನ ಎರಡು ಹೋಳುಗಳ ನಡುವೆ ಹೂರಣಗಳನ್ನು ಒಳಗೊಂಡಿರುವ ಆಹಾರ ಪದಾರ್ಥವೇ ಸ್ಯಾಂಡ್ವಿಚ್. ಈ ಹೂರಣವನ್ನು  ಹಣ್ಣು, ತರಕಾರಿ, ಸೊಪ್ಪು, ಬೆಣ್ಣೆ ಮತ್ತು ಮಾಂಸದಂತಹ ಪದಾರ್ಥಗಳಿಂದ ತಯಾರಿಸುತ್ತಾರೆ. ಸ್ಯಾಂಡ್‌ವಿಚ್ ಕುರಿತು ಮೊದಲಿಗೆ ೧೮ನೇ ಶತಮಾನದಲ್ಲಿ ಇಂಗ್ಲೆಂಡಿನ ಎಡ್ವರ್ಡ್ ಗಿಬ್ಬೊನ್ ಎಂಬಾತ ತಮ್ಮ ನಿಯತಕಾಲಿಕೆಯಲ್ಲಿ  "ಬ್ರೆಡ್ಡು ತುಂಡುಗಳ ನಡುವೆ ಮಾಂಸದ ತುಂಡುಗಳನ್ನು ಹಾಕಿ ತಿನ್ನುವುದು" ಎಂದು ಬರೆದಿದ್ದಾನೆ.

೩.ಬರ್ಗರ್ : ಇದು ಮೂಲತಃ ಅಮೆರಿಕದ ತಿನಿಸಾಗಿದ್ದು ವಿಶ್ವದಾದ್ಯಂತ ಜನಪ್ರಿಯವಾಗಿದೆ. ಉಬ್ಬಿದ  ಬನ್ನುಗಳ ಮಧ್ಯೆ ಹಣ್ಣು, ತರಕಾರಿ, ಸೊಪ್ಪು, ಬೆಣ್ಣೆ ಮತ್ತು ಮಾಂಸದಂತಹ ಪದಾರ್ಥಗಳನ್ನು ಹಾಕಿ ತಯಾರಿಸುತ್ತಾರೆ.

೪. ಫ್ರೆಂಚ್ ಫ್ರೈಸ್ : ಅಮೆರಿಕ ದೇಶದ ಸೈನಿಕರು ಬೆಲ್ಜಿಯಂ ದೇಶದ ಮೇಲೆ ಒಂದನೇ ಮಹಾಯುದ್ದದ ಸಂದರ್ಭದಲ್ಲಿ ಯುದ್ದಕ್ಕೆ ಹೋದಾಗ  ಸೈನಿಕರಿಗೆ ತಿನ್ನಲು ಊಟ ಸಿಗದಿದ್ದಾಗ ಆಲುಗೆಡ್ಡೆಯಿಂದ ತಯಾರಿಸಿದ ಬೆರಳಿನಾಕರದ / ಚೌಕಕಾರದ ರೀತಿಯ ಕುರುಕಲು ತಿಂಡಿಯನ್ನು ತಿಂದರು. ಆ ದೇಶದಲ್ಲಿ ಫ್ರೆಂಚ್ ಭಾಷೆ ಇರುವುದರಿಂದ ಅಮೆರಿಕದ ಸೈನಿಕರು ಆ ಕುರುಕಲು ತಿಂಡಿಗೆ ಫ್ರೆಂಚ್ ಪ್ರೈಸ್ ಎಂದು ಕರೆದರಂತೆ. ಆದ್ದರಿಂದ ಆ ತಿಂಡಿಗೆ ಫ್ರೆಂಚ್ ಫ್ರೈಸ್ ಎಂಬ ಹೆಸರು ಬಂತು

೫. ಕೋಲಾ : ಕೋಲಾ ಎಂಬುದು ಮರ. ಇದು ಪಶ್ಚಿಮ ಆಫ್ರಿಕಾ, ಅಮೆರಿಕ ಮತ್ತು ಭಾರತದ ಅಸ್ಸಾಂ ಕಾಡುಗಳಲ್ಲಿ ಕಂಡುಬರುತ್ತದೆ. ಈ ಮರಗಳು ಸುಮಾರು ೨೫ ಮೀಟರ್ ಎತ್ತರ ಬೆಳೆಯುತ್ತವೆ. ಈ ಮರದ ಕಾಯಿಗಳಿಂದ ಮತ್ತು ಹಣ್ಣುಗಳಿಂದ ರಾಸಾಯನಿಕ ವಸ್ತುಗಳೊಂದಿಗೆ ಕೋಲಾವನ್ನು ತಯಾರಿಸುತ್ತಾರೆ. ೧೯ನೇ ಶತಮಾನದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಜಾನ್ ಪೆಂಬರ್ಟನ್ ಈ ಪಾನೀಯವನ್ನು ಆವಿಷ್ಕರಿಸಿದನು. ಮೊದಲಿಗೆ ಇದೊಂದು ಔಷಧ ನಂತರ ಪಾನೀಯ.

೬. ಸ್ಟಲ್ ವಾಟರ್ : ಸ್ಟಲ್ ವಾಟರ್ ಎಂದರೆ ತೊಟ್ಟಿಯಲ್ಲಿ ತುಂಬಿದ ನೀರು.ಈ ನೀರು ಸಮುದ್ರದ ನೀರನ್ನು ಶುದ್ದೀಕರಿಸಿ ಮಾಡಿದ್ದಾಗಿದೆ. ದಾರಿಯಲ್ಲಿ ಹೋಗುವ ಪ್ರಾಣಿಗಳು(ಕುದುರೆಗಳು)ಕುಡಿಯಲು ಈ ನೀರನ್ನು ಉಪಯೋಗಿಸುತ್ತಾರೆ. ಈ ನೀರನ್ನು ಹಾರ್ರ‍್ಸ‍ ವಾಟರ್ ಎಂದೂ ಕರೆಯುತ್ತಾರೆ.

೭. ಸ್ಪಾರ್ಕ್ಲಿಂಗ್ ವಾಟರ್ : ಹೊಳೆಯುವ ನೀರನ್ನು ಸ್ಪಾರ್ಕ್ಲಿಂಗ್ ವಾಟರ್ ಎಂದು ಕರೆಯುತ್ತಾರೆ. ಇದಕ್ಕೆ ಸೋಡಾ ವಾಟರ್, ಕಾರ್ಬೋನೆಟೆಡ್ ವಾಟರ್ ಎಂದೂ ಕರೆಯುತ್ತಾರೆ. ಉದಾಹರಣೆಗೆ ಕೋಕೋ ಕೋಲಾ, ಸ್ಪ್ರೈಟ್, ಸೆವೆನ್ ಅಪ್.

೮. ಸೈಕಾಲಜಿಕಲ್ ವಾರ್ ಫೇರ್ : ಜನರನ್ನು ಒಂದು ವಿಷಯದ ಅಥವಾ ಒಂದು ವಸ್ತುವಿನ ಕಡೆಗೆ ಮುಗಿ ಬೀಳುವಂತೆ ಮನೋವೈಜ್ಞಾನಿಕವಾಗಿ  ನಂಬಿಕೆ ಉಂಟು ಮಾಡುವುದೇ ಸೈಕಾಲಜಿಕಲ್ ವಾರ್ ಫೇರ್. ವಿವಿಧ ಕಂಪನಿಗಳು ತಾವು ತಯಾರಿಸಿದ ವಸ್ತುಗಳನ್ನು ಜನರು ಕೊಂಡುಕೊಳ್ಳುವ ಹಾಗೆ ಮನಸ್ಸು ಮಾಡಿಸುವುದೇ ಸೈಕಾಲಜಿಕಲ್ ವಾರ್ ಫೇರ್.  ಉದಾಹರಣೆಗೆ  ಜಾಹೀರಾತುಗಳು.

೯.ಜಾಗತೀಕರಣ: ಇಡೀ ಜಗತ್ತೇ ಒಂದು ಎಂದು ಅರ್ಥ. ಜಗತ್ತೇ ಒಂದು ಊರು ಎಂದೂ ಹೇಳಬಹುದು. ಜಾಗತೀಕರಣವೆಂದರೆ ಒಂದು ದೇಶದ ಆರ್ಥಿಕತೆಯನ್ನು ಜಾಗತಿಕ ಆರ್ಥಿಕತೆಯೊಂದಿಗೆ ಸಮನ್ವಯ ಮಾಡುವ ಒಂದು ಪಕ್ರಿಯೆ.


************


23 ಅಕ್ಟೋಬರ್ 2018

ಓ ಹೆಣ್ಣೆ

ಹೆಣ್ಣೆ ಓ ಹೆಣ್ಣೆ ನೀನೇಕೆ ಈ ರೀತಿ ಸೊನ್ನೆ
ನೀನಾದೇ ಸಂಸಾರದ ಕಣ್ಣೇ
ಆದರೂ ನಿನಗೇಕಿಲ್ಲ ಮನ್ನಣೆ.

ನೀ ಹುಟ್ಟಿದ್ದೆ ಒಂದು ಪುಣ್ಯೇ
ನೀ ಬೆಳದಿದ್ದು ಹೆದರಿಕೆಯಲ್ಲಿಲ್ಲವೇನೆ.?
ನೀ ಬೆಳೆಯುತ್ತಿದ್ದಂತೆ
ಸಮಾಜದ ವಕ್ರ ದೃಷ್ಠಿಗೆ ಗುರಿಯಾಗಲಿಲ್ಲವೇನೆ.?

ನಿನಗೇಕಿಲ್ಲ ಸ್ವಾತಂತ್ರ್ಯದ ಬಾಳು?
ನಿನ್ನ ಜೀವನ ಬರಿ ಗೋಳು
ಸಂಸಾರದ ಹಾದಿಯಲ್ಲೇ ನಡೆದೆ ನೀನು
ಕಳೆದೆ ಇದರಲ್ಲಿಯೇ ಜೀವನದ ಅರ್ಧ ಪಾಲು.

ಸಮಾಜದ ಸಂಪ್ರದಾಯಗಳಿಗೆ ಬಲಿಯಾಗಿ ನೀನು
ಬೆಂದು ಬಸವಳಿಯುತ್ತಿರುವೆಯಲ್ಲ ಹಗಲಿರುಳು
ಕೊನೆಗೆ ಬರುವದು ನಿನಗೆ ಮುಪ್ಪು
ನೀನಾಗುವೆ ಆಗ ವೃದ್ಧಾಶ್ರಮದ ತೊತ್ತು..

         ರಚನೆ:- ಮುಸ್ತಾಕಅಹ್ಮದ. ಬಸರೀಕಟ್ಟಿ  
                    ದೂರವಾಣಿ ಸಂಖ್ಯೆ:- 9008978684

ಹೊಲಸು ಮಂದಿಯ ಹೊಲಸಾಟ...!

ಹೊಲಸು ಮಂದಿಯ ದೊಂಬರಾಟ,
ಊರನೇ ಮೆಚ್ಚುವಂತಿತ್ತು,
ಟೊಳ್ಳು ಮಂದಿಯ ಪೊಳ್ಳು ಮಾತಿಗೆ,
ಲೋಕವೇ ಬೆರಗಾಗಿ ಸುಮ್ಮನಿತ್ತು....

ಬಣ್ಣ-ಬಣ್ಣದ ಬುಳ್ಳು ಭಾಷಣ,
ಭರತಸಂತತಿಯ ಬಾಯಿಗೊಷ್ಟು ಮಣ್ಣು ಹಾಕಿತು...

ನೋಟು ಕೊಟ್ಟು ಹೊಡೆದಾಡಿಸುವವನು,
ಎಣ್ಣೆ ಕೊಟ್ಟು ಯಾಮಾರಿಸುವವನು,
ಪ್ರಜಾಪ್ರಭುತ್ವದ ಪಾಲಕನೇ..???

ಬಾಯಿತುಂಬಾ ಸುಳ್ಳನಿಟ್ಟು,
ರಂಗು-ರಂಗಿನ ವೇಷ ತೊಟ್ಟು,
ಸ್ವಾರ್ಥದ ಸೀಮೆ ಸೃಷ್ಠಿಸುವ ಅವನು ಪ್ರಜೆಗಳ
ಪರಿಪಾಲಕನೇ...???

ಹಣದ ಆಸೆಗೆ ಹಂಗು ತೊರೆದು,
ಯೆಂಡಕ್ಕಾಗಿ ಹಿಂದೆ ಸುತ್ತಿ,
ಮೂರನ್ನು ದೂರವಿಟ್ಟು,
ಮತವ ಮಾರಿಕೊಳ್ಳುತ್ತಿರುವ,
ಮತಿಗೇಡಿಗಳಾಗುತಿರುವ ಪ್ರಜೆಗಳು,
ಭರತ ಖಂಡದ ಮಕ್ಕಳೇ...???
ದೇಶ ಕಟ್ಟುವ ದೇಶ ಪ್ರೇಮಿಗಳೇ...???
ದೇಶದ ಬೆನ್ನೆಲುಬುಗಳೇ...???
           ರಚನೆ:-  ಕೆ.ಜೆ.ಕೊಟ್ರೇಶ್ ಗೌಡ, ತೂಲಹಳ್ಳಿ
(ಮೂರನ್ನು=ಮಾನ,ಮರ್ಯಾದೆ,ಅಂಜಿಕೆ)

ಸಂತೇಬೆನ್ನೂರಿನ ರಾಮತೀರ್ಥ ಪುಷ್ಕರಣಿ

ಸಂತೇಬೆನ್ನೂರಿನ ರಾಮತೀರ್ಥ ಪುಷ್ಕರಣಿ

ನಮಗೆಲ್ಲರಿಗೂ ಕಲ್ಯಾಣಿ ಅಥವಾ ಪುಷ್ಕರಣಿ ಎಂದಾಕ್ಷಣ ನೆನಪಾಗುವುದು ಸುತ್ತಲೂ ಮೆಟ್ಟಿಲುಗಳು ಮಧ್ಯೆ ನೀರು ಅದರ ನಡುವೆ ಒಂದು ಗೋಪುರ. ಅದೇ ರೀತಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿರುವ ರಾಮತೀರ್ಥ ಪುಷ್ಕರಣಿಯನ್ನು ನೋಡಲು ಎರಡು ಕಣ್ಣುಗಳು ಸಾಲದು. ಇಲ್ಲಿನ ರಮಣೀಯ ದೃಶ್ಯಗಳು ನೋಡುಗರ ಕಣ್ಣಿಗೆ ತಂಪನ್ನು ನೀಡುತ್ತವೆ. ಸಂಜೆ ವಿಹರಿಸುವುದಕ್ಕೂ ಇದೊಂದು ಸೂಕ್ತ ಮತ್ತು ಸುಂದರ ತಾಣ. ಒಳಗೆ ಹೋಗಿ ಹುಲ್ಲಿನ ಹಾಸಿನ ಮೇಲೆ ಮಲಗಿದರೆ ಎದ್ದು ಬರುವ ಮನಸ್ಸು ಬರುವುದೇ ಇಲ್ಲ. ಊರಿನವರಿಗೂ ಇದು ಒಂದು ಒಳ್ಳೆಯ ತಾಣವಾಗಿ ಮಾರ್ಪಟ್ಟಿದೆ. 

ಇತಿಹಾಸ - 
ಊರಿನ ಇತಿಹಾಸವೇ ರೋಚಕವಾಗಿದೆ . ಇತಿಹಾಸಕಾರರು ತುಂಬಾ ಊಹೆಗಳನ್ನು ಮಾಡಿದ್ದಾರೆ. ಕೆಲವು ಇತಿಹಾಸಕಾರರ ಪ್ರಕಾರ, ಹದಿನಾರನೇ ಶತಮಾನದಲ್ಲಿ ಈ ಊರನ್ನು ಬೆನ್ನೂರು ಈ ಊರು ತದನಂತರ ವ್ಯಾಪಾರ ಕೇಂದ್ರವಾಗಿದ್ದರಿಂದ ಸಂತೇಬೆನ್ನೂರು ಎಂದು ಮರುನಾಮಕರಣ ಹೊಂದಿತು. ಕೆಲವರ ಪ್ರಕಾರ ಈ ಪುಷ್ಕರಣಿಯು ವಿಜಯನಗರ ಅರಸರ ಆಳ್ವಿಕೆಯಲ್ಲಿ ಕಟ್ಟಲಾಯಿತು ಎನ್ನುತ್ತಾರೆ. ದುರದೃಷ್ಟವಶಾತ್ ಇದನ್ನು ಬಿದನೂರು ಸಂಸ್ಥಾನದವರು ಯುದ್ಧದ ಸಮಯದಲ್ಲಿ ಕೆಲವು ಭಾಗಗಳನ್ನು ವಿರೂಪಗೊಳಿಸಿದ್ದರು ಎಂದು ಕೆಲವರ ಅಭಿಪ್ರಾಯ. ಮೈಸೂರು ಸಂಸ್ಥಾನದ ಮಹಾರಾಜರುಗಳು ತಮ್ಮ ರಾಣಿಯರನ್ನು ಕರೆದುಕೊಂಡು ರಾಮತೀರ್ಥ ಪುಷ್ಕರಣಿಗೆ ವಿಶ್ರಾಂತಿಗೆಂದು ಬರುತ್ತಿದ್ದರು ಎಂಬ ದಂತಕಥೆಗಳು ಇನ್ನು ಬಾಯಿಯಲ್ಲಿ ಹರಿದಾಡುತ್ತಿವೆ. 

 ವಿನ್ಯಾಸ ಹಾಗೂ ವಾಸ್ತುಶಿಲ್ಪ -  
ಇಡೀ ಪುಷ್ಕರಣಿಯು ಸಣ್ಣ ಸಣ್ಣ ಗೋಪುರಗಳಿಂದ ಸುತ್ತುವರಿದಿದೆ. ಎಲ್ಲಾ ಗೋಪುರಗಳು ಕಲ್ಲಿನಿಂದ ಮಾಡಿದೆ. ಸುಂದರ ಕಲ್ಲುಗಳಿಂದ ಮಾಡಿದ ಮೆಟ್ಟಿಲುಗಳು ಸುತ್ತಲೂ ಇವೆ . ಪ್ರವಾಸಿಗರು ನಾಲ್ಕು ಕಡೆಯಿಂದಲೂ ನೀರಿಗೆ ಇಳಿಯಬಹುದು. ಇದು ಒಟ್ಟಾರೆ ಎಂಟು ಸಣ್ಣ ಗೋಪುರಗಳು ಮತ್ತು ನೀರಿನ ಮಧ್ಯೆ ಒಂದು ದೊಡ್ಡ ಗೋಪುರವಿದೆ. 
   ಪುಷ್ಕರಣಿಯಲ್ಲಿ ನೀರು ಖಾಲಿಯಾದಾಗ ಮಾತ್ರ ಗೋಪುರವನ್ನು ಪ್ರವೇಶಿಸುವ ಅವಕಾಶವಿರುತ್ತದೆ. ನೀರಿನ ಮಧ್ಯೆ ಇರುವ ಗೋಪುರವನ್ನು ವಸಂತ ಮಂಟಪ ಎಂದು ಕರೆಯುತ್ತಾರೆ . ಗೋಪುರ ನಾಲ್ಕು ಮಹಡಿ ಇದ್ದು ಐವತ್ತು ಅಡಿ ಎತ್ತರ ಇದೆ ಇದರ ತಳಪಾಯ ಮತ್ತು ಕಟ್ಟಡವನ್ನು ಪೂರ್ತಿ ಕಲ್ಲು ಮತ್ತೆ ಗಾರೆಯಿಂದ ಕಟ್ಟಿದ್ದಾರೆ. ಗೋಪುರದ ಮೇಲೆ ಹೋಗಿ ನಿಂತರೆ ಬಾಲ್ಕನಿಯಲ್ಲಿ ನಿಂತ ಅನುಭವವಾಗುತ್ತದೆ. ಎಲ್ಲಾ ಗೋಡೆಗಳ ಮೇಲೆ ಪಕ್ಷಿ ಪ್ರಾಣಿಗಳ ಚಿತ್ರಣವಿದೆ. ಅದು ಗೋಪುರಕ್ಕೆ ಆಕರ್ಷಣೆ ಮತ್ತು ಸೊಬಗನ್ನು ನೀಡುತ್ತದೆ .

 ಮುಸಾಫಿರ್ ಖಾನ :- 
ಪುಷ್ಕರಣಿಯ ಆವರಣದ ಒಳಗೆ ಅದರ ಎದುರು ಒಂದು ದೊಡ್ಡದಾದ ಕೋಣೆ ಇದೆ ಅದನ್ನು ಮುಸಾಫಿರ್ ಖಾನಾ ಎಂದು ಕರೆಯುತ್ತಾರೆ (ಅತಿಥಿ ಗೃಹ ) ಈ ಅತಿಥಿ ಗೃಹವೂ ಬಿಜಾಪುರ ಸುಲ್ತಾನರ ಸೇನಾಧಿಪತಿ ರನದುಲ್ಲಾ ಖಾನ್ ಶತಮಾನದ ಹಿಂದೆಯೇ ಕಟ್ಟಿಸಿದ್ದ ಎನ್ನುತ್ತಾರೆ ಇತಿಹಾಸಕಾರರು . ಈಗ ಇದು ಒಂದು ಖಾಲಿ ಕೋಣೆ ಯಂತಿದೆ ಇದನ್ನು ಪುಷ್ಕರಣಿ ಅಗತ್ಯ ವಸ್ತುಗಳನ್ನು ಇಡಲು ಬಳಸುತ್ತಾರೆ ತುಂಬಾ ಅಚ್ಚುಕಟ್ಟಾದ ವಾಸ್ತುಶಿಲ್ಪ ಇದಕ್ಕಿದೆ. ಹಿಂದೂ ಮತ್ತು ಮುಸ್ಲಿಮರ ಬಾಂಧವ್ಯಕ್ಕೆ ಇದು ಹೆಸರಾಗಿದೆ ಮತ್ತು ಸಂಕೇತವೂ ಆಗಿದೆ.

ಹೋಗುವುದು ಹೇಗೆ :-
ಸಂತೇಬೆನ್ನೂರಿನಿಂದ ಚನ್ನಗಿರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಇದು ಕಾಣಸಿಗುತ್ತದೆ. ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರದಿಂದ ಕ್ರಮವಾಗಿ ನಲವತ್ತು ಮತ್ತು ಇಪ್ಪತ್ತು ಕಿಲೋಮೀಟರುಗಳು. 

ಪ್ರಮುಖ ಆಕರ್ಷಣೆ:- 
ಪುಷ್ಕರಣಿಯು ಅಂದಕ್ಕೆ ಎಷ್ಟು ಜನಪ್ರಿಯವೋ ಅಷ್ಟೇ ಮೀನುಗಳಿಗೂ ಜನಪ್ರಿಯ , ಹಲವಾರು ಪುರವಣಿಗರು ಬಂದು ನಿತ್ಯವೂ ಮೀನುಗಳಿಗೆ ಆಹಾರ ಹಾಕುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮೀನುಗಳೇ ಒಂದು ದೊಡ್ಡ ಆಕರ್ಷಣೆ. ಹುಲ್ಲು ಹಾಸಿಗೆಳನ್ನು ಇಲ್ಲಿ ಮಾಡಿದ್ದಾರೆ ಅಲ್ಲಿ ಕೂತು ವಿರಮಿಸಬಹುದು. ಪುಷ್ಕರಣಿಗೆ ಒಬ್ಬ ನಿರ್ವಾಹಕನನ್ನು ಸರ್ಕಾರವು ನೇಮಿಸಿದೆ ಅವರು ನೀರಿನ ಸುಚಿತ್ವ ಮತ್ತು ನೀರಿಗೆ ಇಳಿದು ಅಪಘಾತ ಮಾಡಿಕೊಳ್ಳದ ಹಾಗೆ ತಡೆಯುತ್ತಾರೆ. ಒಳಗೆ ಪ್ರವೇಶ ಮಾಡಲು ಯಾವುದೇ ಶುಲ್ಕವಿರುವುದಿಲ್ಲ ನೆನಪಿರಲಿ ನೀರಿಗೆ ಇಳಿಯದಿದ್ದರೆ ಒಳ್ಳೆಯದು ಎಲ್ಲರೂ ಒಮ್ಮೆ ನೋಡಲೇಬೇಕಾದ ಸ್ಥಳ ನೀವು ಒಮ್ಮೆ ನೋಡಿ ಬನ್ನಿ. 

            ಲೇಖನ ಕಳುಹಿಸಿದವರು:- ಹರ್ಷ ಆರ್ ಬಿ, ಸಂತೇಬೆನ್ನೂರು.

ಬೆಳಗುತಿರು

 ಬೆಳಗುತಿರು 
ಅವನಂತೆ ನಾನಿಲ್ಲ
ಭವವೆಲ್ಲ ಬದಲಿಹುದು
ಭುವನಾದಿ ಜೀವಿಗಳನಳೆಯಬಹುದೇ??
ಜವರಾಯನೆಳೆದಾಗ
ಭವದೊಳಿಹ ಬವಣೆಗಳು
ಭಯಬೀಳುತಳಿದುಳಿದು ನಿಲಲುಬಹುದೇ?

ಸಂಚರಿಪ ಹಾದಿಯೊಳು
 ಮಿಂಚು ಸಿಡಿಲುಗಳಿರಲಿ
ವಂಚನೆಯ ವಾಸನೆಗೆ ನೀ ಸಿಲುಕದೆ|
ಹೊಂಚು ಹಾಕುವ ಮಂದಿ
ಸಂಚಾರಗೈದಿಹರು
ಚಂಚು ಕುಕ್ಕಿದರೇನು ನಡೆ ಮರುಗದೆ||

ಪರರ ತೆಗಳಿಕೆ ಮಂತ್ರ
ಜರೆದು ನಿಂದಿಪ ತಂತ್ರ
ಸರಿದಾರಿಯೊಳು ನಡೆವ ನಿನಗಲ್ಲವು|
ಹರಕೆಗಳು ನಿನಗುಂಟು
ಹಿರಿದು ಗುರಿ ಮುಂದಿಹುದು
ಚರಿತೆಯಲಿ ಚಿರಕಾಲ ರಾರಾಜಿಸು||

ಆಸೆಗಳ ಕೂಪದೊಳ್
ವಾಸ ಮಾಡುತ ಕಳೆದು
ವೇಷಗಳ ಬದಲಿಸಲು ಫಲವೇನಿದೆ?
ಮೋಸವೆಸಗುವ ಬದಲು
 ಪೂಷನಂತೆಹೆ ಬೆಳಗು
ದೋಷಕಳೆಯತ ಸಾಗು ತಮವ ಕಳೆದು||
                ರಚನೆ:- ನಾಖಾರ್ವಿ
(ಛಂದಸ್ಸು: ಕುಸುಮ ಷಟ್ಪದಿ )
...........................
ಅರ್ಥಗಳು 
ಜರೆ=ಬೈಯು 
ಚಂಚು=ಕೊಕ್ಕು 
ಜವರಾಯ=ಯಮರಾಜ 
ಚರಿತೆ=ಚರಿತ್ರೆ 
ಪೂಷ=ಸೂರ್ಯ 
ತಮ=ಕತ್ತಲು

24. ಚಿಕ್ಕದರಲ್ಲಿಯೇ ದೊಡ್ಡ ಶಕ್ತಿ ಅಡಗಿದೆ

ಚಿಕ್ಕದರಲ್ಲಿಯೇ ದೊಡ್ಡ ಶಕ್ತಿ ಅಡಗಿದೆ

ದೊಡ್ಡದು ಆಲೋಚನೆ ಮಾಡುತ್ತಾ
ದೊಡ್ಡದು ಬಯಸುವ ನಾವುಗಳು
ತೃಪ್ತಿ ಯಾವುದರಲ್ಲಿ ಎಷ್ಟೆಷ್ಟಿರಬೇಕೋ
ಅಷ್ಟರಲ್ಲಿಯೇ ಇರುವುದು
ಅದರಲ್ಲಿಯೇ ನಮಗೆ ಆನಂದ ಸಿಗುವುದು

ಅದರಲ್ಲಿಯೇ ಸಿಗುವುದು ನೆಮ್ಮದಿಗಳು

ಸೂಜಿ ಚಿಕ್ಕದಿರುವುದರಿಂದಲೆ
ತಾಯಾರಾಗುವುದು ನಾವು ಧರಿಸುವ ಬಟ್ಟೆಗಳು
ಕಣ್ಣುಗಳು ಚಿಕ್ಕವು ಇರುವುದರಿಂದಲೆ ಆಗುವುದು
ಜಗವ ನೋಡುವ ನೋಟಗಳು
ಬೆಳಗುವ ದೀಪ ಚಿಕ್ಕವು ಇರುವುದರಿಂದಲೆ
ಕತ್ತಲು ಕಳೆದು ಪಸರಿಸುವುದು ಬೆಳಕುಗಳು

ಅವರವರ ದೃಷ್ಟಿಗೆ ತಕ್ಕಂತೆ
ನಡೆಯುತ್ತಿರುವುದು ಬದುಕುಗಳು
ಸಮಂಜಸವಾಗಿ ನಡೆದುಕೊಳ್ಳುವುದರಿಂದ
ತಿಳಿಯುವುದು ನಮ್ಮ ಇರುವಿಕೆಗಳು
                                -ರಾಮು ಎಚ್

ಬೇಂದ್ರೆ ತಾತನಿಗೊಂದು ನಮನ

ಬೇಂದ್ರೆ ತಾತನಿಗೊಂದು ನಮನ 
 
ಬೆಂದರೆ ಬೇಂದ್ರೆಯಾಗುತಿ ಎಂದೇಳಿದ
ಬೇಂದ್ರೆ ತಾತನಿಗೆ ನಮನಗಳು

ಬದುಕಿನ ಅರಿವನು
ಅಕ್ಕರಗಳಲಿ ಅವಿತಿರಿಸಿದ
ಪದಮಾಂತ್ರಿಕನಿಗೊ ನಮನಗಳು

ಗಂಗಾವತರಣದಿ
ಕನ್ನಡಕೆ ಕಾಣ್ಕೆಯಿತ್ತ
ಆಡುನುಡಿಯ ವರಕವಿಗಿದೊ ನಮನಗಳು

ಹೃದಯ ಸಮುದ್ರದಲಿ
ನಾದಲೀಲೆಯ ನುಡಿಸಿದ
ಸಾಧನಕೇರಿಯ ತಾತನಿಗಿದೋ ನಮನಗಳು

ಚಿತ್ತಿಮಳೆಯ ಸ್ವಾತಿ ಮುತ್ತಾದ
ಜೀವನದ ನಾಕುತಂತಿಗೆ
ಜ್ಞಾನಪೀಠದ ಗರಿಯನು
 ಕನ್ನಡ ದೇವಿಗೆ ಇರಿಸಿದ
 ಅಂಬಿಕಾತನಯರಿಗಿದೊ ನಮನಗಳು

          - ಕೆ.ಪಿ.ರುದ್ರೇಶಮೂರ್ತಿ ಸಹ ಶಿಕ್ಷಕರು ಶ್ರೀ.ಜ.ಜ.ಮು.ಪ್ರೌಢಶಾಲೆ. ದಾವಣಗೆರೆ


****

01 ಸೆಪ್ಟೆಂಬರ್ 2018

ದೈಹಿಕ ಶಿಕ್ಷಣ ಬೋಧನಾ ವಿಧಾನ ಇತ್ಯಾದಿ....

ಸರ್ವಾಂಗಿಣ ವ್ಯಕ್ತಿತ್ವ ವಿಕಸನಕ್ಕೆದೈಹಿಕ ಶಿಕ್ಷಣ

ಶಾರೀರಿಕ ಅಭಿವೃದ್ಧಿಗಾಗಿ: ಸಾಹಸದ ಆಟಗಳು, ದ್ವಂದ್ವಕ್ರೀಡೆಗಳು ಸ್ವರ್ಧಾತ್ಮಕ ಆಟಗಳು  ಕಷ್ಟ ಸಹಿಷ್ಣತೆಯ ಆಟಗಳು, ರಿಲೇ ಓಟಗಳು, ಶಕ್ತಿಯ ಆಟಗಲು ಸೇರಿಕೊಂಡಿವೆ.
ಮಾನಸಿಕ ಅಭಿವೃದ್ಧಿಗಾಗಿ : ಮನರಂಜನೆಯ ಆಟಗಳು, ಸ್ವತಂತ್ರ ಚಲನಾ ಆಟಗಳು, ಏಕಾಗ್ರತೆಯ ಆಟಗಳು, ಶಿಸ್ತಿನ ಆಟಗಳು, ಒಳಾಂಗಣ ಆಟಗಳು, ಪ್ರಾಣಾಯಾಮ ಧ್ಯಾನ, ಪ್ರಾಥನೆ ಮತ್ತು "ಓಂ" ಕಾರ ಧ್ವನಿಯೂ ಸೇರಿಕೊಂಡಿದೆ.
ಬೌದ್ಧಿಕ ಅಭಿವೃದ್ಧಿಗಾಗಿ : ಮಗ್ಗಿ ಸುಗ್ಗಿ ತರ್ಕಬದ್ದ ಆಟಗಳು ಜ್ಞಾಪಕ ಶಕ್ತಿಯ ಆಟಗಳು, ವಿನೋದ, ಗಣಿತ ಸೇರಿದಂತೆ ಶಾರೀರಿಕ ವಲಯದಲ್ಲಿರುವ ದ್ವಂದ್ವ ಕ್ರೀಡೆಗಳು ಸಹ ಇಲ್ಲಿ ಸೇರಿಕೊಂಡಿದೆ.
ಭಾವನಾತ್ಮಕ ಅಭಿವೃದ್ಧಿಗಾಗಿ : ರಾಷ್ಟ್ರಗೀತೆ ಮಾಡಗೀತೆ, ದೇಶಭಕ್ತಿಗೀತೆ , ಸಾಭಿನಯ ನೃತ್ಯಗಳು ಸೇರಿಕೊಂಡಿದೆ. ಮೇಲಿನ ಆಟಗಳು ಸಹ ಇದಕ್ಕೆ ಸೇರಿಕೊಂಡಿದೆ.
ನೈತಿಕ ವಲಯದಲ್ಲಿ ಅಷ್ಠಾಂಗಯೋಗ, ಮೌಲ್ಯ ಶಿಕ್ಷಣ, ವ್ಯಾಯಾಮಗಳು, ಪದ್ ಕವಾಯಿತು, ಇವು ನೈತಿಕ ಶಿಕ್ಷಣಕ್ಕೆ ಸೇರಿವೆ.

ಆಟದ ಪಾಠದ ಬೋಧನಾ ವಿಧಾನ ತಂತ್ರಗಳು

ತರಗತಿ ಕೋಣೆಯಿಂದ ಮಕ್ಕಳು ಪರಿಕರಗಳನ್ನು ಒಂದೆಡೆ ಇರಿಸಿ ಸಾಲಾಗಿ ಕರೆತರುವುದು. ಅವರ ನಿತ್ಯ ಕ್ರಿಯೆಗೆ ಅವಕಾಶ ಮಾಡಿಕೊಡುವುದು. ನಂತರ ಸಾಮರ್ಥ್ಯ ವಿಭಾಗದಲ್ಲಿರುವ ಸಾಮರ್ಥ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಆಟದ ಪಾಠವನ್ನು ಪ್ರಾರಂಭಿಸುವುದು.
  1. ಸಾಮರ್ಥ್ಯ : ಆಟದ ಪಾಠದ ಗುರಿ ಮತ್ತು ಉದ್ದೇಶಗಳೇ ಇದಾಗಿವೆ. ಈ ಭಾಗವು ಕೇವಲ ಮುಖ್ಯ ಚಟುವಟಿಕೆಯಿಂದ ಮಗುವಿನ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶಗಳು ಯಾವ ಅಭಿವೃದ್ಧಿಯಲ್ಲಿ ಎಷ್ಟಿದೆ ಎಂಬುವುದನ್ನು ತಿಳಿಸುವ ಪ್ರಯತ್ನವ್ಕನ್ನು ಇದರಲ್ಲಿ ಮಾಡಿದೆ. ಉಳಿದ ಚಟುವಟಿಕೆಯಿಂದಲೂ (ಸ್ವಾತಂತ್ರ ಪ್ರಾರಂಭಿಕ, ಶಿಸ್ತಿನ ಚಟುವಟಿಕೆಗಳು ಮತ್ತು ವಿಶ್ರಾಂತಿ, ಆರೋಗ್ಯ ಭಾಗದಲ್ಲಿರುವ ಚಟುವಟಿಕೆಗಳು ) ಇನ್ನಷ್ಟು ಅಂಶಗಳು ಮಕ್ಕಳಿಗೆ ಪ್ರಾಯೋಗಿಕ ಅನುಭವಗಳ ಮೂಲಕ ಅನುಕೂಲಗಳು ದೊರೆಯ್ಯುತ್ತದೆ. ಆದರೆ ಇದೊಂದು ಹೊಸ ಪ್ರಯತ್ನವನ್ನು ಇದರಲ್ಲಿ ಮಾಡ್ಲಾಗಿದ್ದು, ಇಲ್ಲಿ ಮುಖ್ಯ ಚಟುವಟಿಕೆಯನ್ನು ಆಟದ ಪಾಠದ ಮುಖ್ಯ ಕೇಂದ್ರ ಬಿಂದುವನ್ನಾಗಿಸಿ ಕೊಂಡಿದೆ. ಆದುದರಿಂದ ಈ ಚಟುವಟಿಕೆಯಿಂದ ಮಗುವಿಗೆ ಇಂತಹ ಕನಿಷ್ಠ ಸಾಮರ್ಥ್ಯವಾದರೂ ದೊರೆತು ತಿಳಿಯುವಂತಾಗಲಿ ಎಂದು ತಿಳಿಸಿದೆ. ಇನ್ನುಳಿದ ಚಟುವಟಿಕೆಗಳಲ್ಲಿ ಶಿಕ್ಷಕರೇ ಅಂತಹ ಸಾಮರ್ಥ್ಯಗಳನ್ನು ಪತ್ತೆ ಹಚ್ಚಿ ಮಕ್ಕಳಲ್ಲಿ ಬೆಳೆಯುವಂತೆ ಮಾಡಬೇಕಾಗಿದೆ. ಈ ಸಾಮರ್ಥ್ಯಗಳು ಭಾಗದಲ್ಲಿ ತಿಳಿಸಿರುವ ಸಾಮರ್ಥ್ಯಗಳಷ್ಟೇ ಅಲ್ಲದೇ ಒಳ್ಳೇಯ ಸಾಮರ್ಥ್ಯಗಳು ಮಕ್ಕಳಲ್ಲಿ ಬೆಳೆಯುವಂತೆ ಮಾಡುವ ಜವಾಬ್ದಾರಿ ಮತ್ತು ಕರ್ತವ್ಯ ಈ ಆಟದ ಪಾಠದ ಶಿಕ್ಷಕನಿಗಿರುತ್ತದೆ.
ಆಟದ ಪಾಠದ ಚಟುವಟಿಕೆಯ ಮುನ್ನ
ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಆಟದ ಬಗ್ಗೆ ತಿಳಿಸುವುದು. ಅನಾರೋಗ್ಯದ ವಿದ್ಯಾರ್ಥಿಗಳನ್ನು ಒಂದೆಡೆ ಕೂರಿಸಿ ಅವರನ್ನು ಆಟ ವಿಕ್ಷೀಸಲು ತಿಳಿಸುವುದು. ಸಮವಸ್ತ್ರದ ಕಡೆ ಗಮನಹರಿಸುವುದು. ಮೂರು/ನಾಲ್ಕನೇ ತರಗತಿ ಮಕ್ಕಳಿದ್ದರೆ ಹಾಜರಾತಿ ತೆಗೆದುಕೊಳ್ಳಬಹುದು.
  1. ಪ್ರಾರಭಿಕ ಚಟುವಟಿಕೆ : ಚಟುವಟಿಕೆಯನ್ನು ಪಾಠದಲ್ಲಿ ತಿಳಿಸಿರುವಂತೆ ಸರಳವಾಗಿ ಸುಲಭವಾಗಿ ಹೇಳಿಕೊಟ್ಟು ಮಕ್ಕಳು ಸೀಟಿಗೆ ಅಜ್ಞೆಗೆ ಸ್ಪಂಧಿಸುವಂತೆ ಮಾಡುವುದು. ಇಂತಹ ಚಟುವಟಿಕೆಗಳೇ ಸ್ವಾತಂತ್ರ್ಯ ಚಲನೆಯ ಚಟುವಟಿಕೆಗಳು ಆಗಿರುತ್ತದೆ. ಇದು ಮುಖ್ಯ ಚಟುವಟಿಕೆಯ  ಕಡೆ ಮಕ್ಕಳನ್ನು ಆಕರ್ಷಿಸಿ ಸಿದ್ಧತೆಗೊಳಿಸುವುದಕ್ಕೋಸ್ಕರವಾಗಿದೆ.
  2. ಉಪಕರಣ : ಆಟದ ಪಾಠಕ್ಕೆ ಬಳಸುವ ಉಪಕರಣಗಳನ್ನು ಆಟದ ಮೈದಾನದಲ್ಲಿ ಜೋಡಿಸಿ ಇಟ್ಟಿರುವುದು ಮತ್ತು ಆಟದ ನಂತರ ಉಪಕರಣಗಳನ್ನು ಮತ್ತೇ ಸಂಬಂಧಿಸಿದ ಪೆಟ್ಟಿಗೆ ಅಥವಾ ಅದರ ಜಾಗದಲ್ಲಿ ಜೋಪಾನವಾಗಿ ಜೋಡಿಸಿಟ್ಟುಕೊಳ್ಳುವುದು.
  3. ಆಟದ ರಚನೆ : ಈ ವಿಭಾಗದಲ್ಲಿ ಮಕ್ಕ್ಳು ಮುಖ್ಯ ಚಟುವಟಿಕೆಗೆ ಪೂರಕವಾಗುವಂತೆ ಹೇಗೆ ತಂಡದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಮತ್ತು ತಂಡದ ರಚನೆಯನ್ನು ಅವಶ್ಯಕವಿದ್ದರೆ ಹೆಣ್ಣು-ಗಂಡಿಗೆ ಬೇರೆ ಬೇರೆಯಾಗಿ ಆಡಿಸುವ ವ್ಯವಸ್ಥೆಯನ್ನು ಸೂಚಿಸುತ್ತದೆ. ಹಾಗೂ ಆಟದ ರಚನೆಯಲ್ಲಿ ಗುರುತುಗಳನ್ನು ಮಾಡಿಕೊಳ್ಳುವ ವ್ಯವಸ್ಥೆಯನ್ನು ಈ ವಿಭಾಗದಲ್ಲಿ ತಿಳಿಸುತ್ತದೆ. ಈ ವಿಭಾಗದಲ್ಲಿರುವ ನಿಯಮದಂತೆ ಆಟದ ರಚನೆಯನ್ನು ಮಾಡಿಕೊಂಡರೆ ಮಾತ್ರ ಮುಖ್ಯ ಆಟವನ್ನು ಆಡಿಸಲೂ ಬರುವುದು.
  4. ಮುಖ್ಯ ಚಟುವಟಿಕೆ : ಈ ಭಾಗವು ಆಟದ ಪಾಠದ ಪ್ರಧಾನ ವಿಷಯವಾಗಿದ್ದೂ, ಇಲ್ಲಿ ಶಿಕ್ಷಕನು ವಿದ್ಯಾರ್ಥಿಗಳಿಗೆ ಆಟದ ಸ್ವರೂಪ ನೀತಿ ನಿಯಮಗಳನ್ನು ತಿಳಿಸಿ, ಒಮ್ಮೆ ಮಾಡಿ ತೋರಿಸಿ ನಂತರ ಮಕ್ಕಳು ಚಟುವಟಿಕೆಯಲ್ಲಿ ತೊಡಗಿಸಿ ತಪ್ಪುಗಳನ್ನು ತಿದ್ದುತ್ತಾ ಸರಿಪಡಿಸಿ ಶಿಸ್ತಿನಿಂದ ಮಕ್ಕಳಿಗೆ ಮನರಂಜನೆ ಸಿಗುವಂತೆ ಮಾಡಿ ಗೆದ್ದವರನ್ನು ಅಭಿನಂಧಿಸಬೇಕಾಗಿದೆ. ಸೋತವರನ್ನು ಸಹ ಮುಂದಿನ ಆಟದಲ್ಲಿ ಗೆಲ್ಲಲು ಪ್ರೋತ್ಸಾಹಿಸಬೇಕಾಗಿದೆ. ವಿಶೇಷ ಅಗತ್ಯವುಳ್ಳ ಮಕ್ಕಳು ಸಹ ಆಟದ ಯಾವುದಾದರೊಂದು ಪಾತ್ರ ವಹಿಸುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂತವರಿಗೆ ಸಹಾಯ ಮಾಡುವಾಗ ಇತರೆ ಮಕ್ಕಳಿಗೆ ತಿಳಿದಿರುವಂತೆಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಶಿಕ್ಷಕನು ಉತ್ತಮ ತೀರ್ಪೂಗಾರನಾಗಿಯೂ ಕೆಲಸ ಮಾಡಿ ತಿಳಿಸಿರುವ ಸಾಮರ್ಥ್ಯಗಳು ಮಕ್ಕಳಲ್ಲಿ ಬೆಳೆಯುವಂತೆ ವ್ಯವಸ್ಥೆ ಮಾಡಬೇಕಾಗಿದೆ. ತರಗತಿ ಶಿಸ್ತಿನಿಂದ ನಡೆಯುವಂತೆ ಆಟದ ನಿಯಮಗಳನ್ನು ಪಾಲಿಸುವಮ್ತೆ ಹೇಳಿಕೊಡಬೇಕು, ಈ ಮುಖ್ಯ ಚಟುವಟಿಕೆಯಲ್ಲಿ ಅನೇಕ ವಿಧದ ಚಟುವಟಿಕೆಗಳು ಅಣ್ದರೆ ಮಾನಸಿಕ ಆಟಗಳು,ಸಾಹಸದ ಆಟಗಳು, ದೈಹಿಕ ಸಾಮರ್ಥ್ಯ ವರ್ಧಿಸುವ ಆಟಗಳು, ಸ್ವಾತಂತ್ರ್ಯ ಚಲನಾ ಆಟಗಳು, ಅನುಕರಣಾ ಆಟಗ್ಳು, ಮನರಂಜನ ಆಟಗಳು, ಶಿಸ್ತಿನ ಆಟಗಳು ಇತ್ಯಾದಿಗಳು ಸೇರಿಕೊಂಡಿರುವಷ್ಟೇ ಅಲ್ಲದೇ ಯೋಗ ಮತ್ತು ಆರೋಗ್ಯ ಶಿಕ್ಷವು ಮೂರು ಮತ್ತು ನಾಲ್ಕನೆಯ ತರಗತಿಯ ಮಕ್ಕಳಿಗೆ ಸೇರಿರುತ್ತದೆ. ಈ ಚಟುವಟಿಕೆಗಳನ್ನು ದಿನಕ್ಕೆ ಹತ್ತರಿಂದ ಹದಿನೈದು ನಿಮಿಷದವರೆವಿಗೆ ಮಾಡಿ ಮುಗಿಸುವುದು. ಹೆಚ್ಚು ವೇಳೆ ಆಡಿಸುವುದರಿಂದ ಆಯಾಸ ಮತ್ತು ಬೇಸರ ಸಹ ಮೂಡಬಹುದು ಅತಿ ಕಡಿಮೆ ವೇಳೆ ಆಡಿಸುವುದರಿಂದ ನಿರಾಸೆ ಹಾಗೂ ಅವಕಾಶಗಳಿಂದ ವಂಚಿತರಾಗಬಹುದು. ಕೆಲವು ಚಟುವಟಿಕೆಗಳನ್ನು ಸಂದರ್ಭಾನುಸಾರ ಕೊಠಡಿಯ ಒಳಗೂ ಸಹ ಆಡಿಸಬಹುದಾಗಿದೆ.
  5. ಸೂಚನೆಗಳು : ಈ ಭಾಗವು ಮುಖ್ಯ ಚಟುವಟಿಕೆಗಳ ಯಶಸ್ವಿಗೆ ಬಹಳ ಮಹತ್ವದ್ದಾಗಿದೆ. ಸೂಚನಾ ವಿಭಾಗದಲ್ಲಿ ತಿಳಿಸಿರುವ ನಿಯಮಗಳ ಹಾಗೂ ಸಲಹೆಗಳನ್ನು ಅಟ ಆಡಿಸುವಾಗ ಬಳಸಿಕೊಳ್ಳಬೇಕಾಗುತ್ತದೆ. ಅದರಂತೆ ತಕ್ಕ ವ್ಯವಸ್ಥೆಯನ್ನು ಸಹ ಮಾಡಿಕೊಳ್ಳ್ಳಬೇಕಾಗುತ್ತದೆ.
  6. ಶಿಸ್ತಿನ ಚಟುವಟಿಕೆ : ಶಾಲೆಯಲ್ಲಿ ಶಿಸ್ತು ಕಲಿಸುವುದು ಬಹಳ ಮುಖ್ಯ ಈ ಚಟುವಟಿಕೆಗಳನ್ನು ನೇರವಾಗಿ ಕಲಿಸುವುದರಿಂದ ಮಕ್ಕಳಲ್ಲಿ ಇದೊಂದು ದಂಡನೆ ಎಂಬ ಭಾವನೆ ಬರಬಾರದು. ಆದುದರಿಂದ ಮುಖ್ಯ ಚಟುವಟಿಕೆಯಾದ (ಸಂತೋಷಗೊಂಡಿರುವ ಸಮಯದ)ನಂತರ ಮಾಡಿಸುವುದರಿಂದ ಉತ್ತನ ಪ್ರತಿಫಲ ದೊರಕುವುದು. ಅದುದರಿಂದಮುಖ್ಯ ಚಟುವಟಿಕೆಯ ನಂತರ ಈ ಚಟುವಟಿಕೆಗಳನ್ನು ಮಾಡಲು ವಿಭಾಗಿಸಲಾಗಿದೆ. ಇದನ್ನು ಏಳರಿಂದ ಹತ್ತು ನಿಮಿಷಗಳರೆಗೆ ಚಟುವಟಿಕೆ ಮಾಡಿ ಮುಗಿಸುವುದು ಬಹಳ ಅನುಕೂಲಕರವಾಗಿರುತ್ತದೆ. ಈ ಚಟುವಟಿಕೆಗಳು ಮೂಲಭೂತ ಚಟುವಟಿಕೆಗಳಾಗಿವೆ. ಹಾಗೂ ತಾಳಬದ್ಧ  ಚಟುವಟಿಕೆಗಳು ಇದರಲ್ಲಿ ಸೇರಿಕೊಂಡಿದೆ.
  7. ಇಲ್ಲಿ  ಶಿಸ್ತಿನ ಚಟುವಟಿಕೆಗಳೆಂದರೆ ಸಾವ್ ...ದಾನ್,ವಿಶ್,,,,ರಾಮ್, ದಹಿನೇ/ಬಾಯೇ/ಪೀಚೆ ಮೂಡ್, ದಹಿನೇ/ಬಾಯೇ/ಹಾಗೆ ಪೀಚೆ ಚಲ್, ಹಾಗೆ ಚಲ್,ಪೀಚ್ ಚಲ್, ಸಲಾಮಿದೇ, ಗಿಂತೀಕರ್, ದಹಿನೇ/ಬಯೇ ದೇಖ್, ಸಾಮ್ನೇ ದೇಖ್, ಕದಂ ಥಾಲ್, ತೇಜ್...ಚಲ್, ಏಕ್ ಲೈನ್ ಬನ್, ತೀನ್ ಲೈನ್ ಬನ್ ಇಂತಹ ಪದ ಕವಾಯಿತುಗಳನ್ನು ಶಿಸ್ತಿನ ಈ ಚಟುವಟಿಕೆಗಳಲ್ಲೂ ಹೇಳುತ್ತ. ಈ ಭಾಗದಲ್ಲಿ ಸೇರಿಸಲಾಗಿದೆ. ಇವುಗಳನ್ನು ಕಲಿತಯುವಲ್ಲಿ ಮಕ್ಕಳಿಗೆ ಭಯ ಆಂತಕ ಬರದೇ ಚಟುವಟಿಕೆಯನ್ನು ಶಿಸ್ತಾಗಿ ಕಲಿಯುವಂತೆ ಮಾಡುವ ಉದ್ದೇಶದಿಂದ ಅವುಗಳನ್ನು ಪ್ರಾರಂಭದಿಂದಲೇ (ಒಂದನೇ ತರಗತಿಯಿಂದಲೇ ) ಶ್ರಮವಿಲ್ಲದೇ ಸ್ವಲ್ಪ ಸ್ವಲ್ಪವಾಗಿ ಹಂತ ಹಂತವಾಗಿ ಹೇಳಿಕೊಡಲು ಮನೆಕೆಲಸ , ಹಾಡು, ನೃತ್ಯ, ಇವುಗಳನ್ನು ಬಳಸಿದ್ದು . ಪಾಠದ ಪ್ರಾರಂಭದಿಂದ ಕೊನೆಯವರೆಗೂ ಕೊಂಡಿಯ ಮಾದರಿಯಲ್ಲಿ ಕಲಿಸುತ್ತಾ ಹೋಗುವ ಯೋಜನೆಯು ಶಿಕ್ಷಕರು ಪಾಠವನ್ನು ಸಂಪೂರ್ಣ ಮುಗಿಸಿದ ನಂತರ ಆದರ ಪ್ರತಿಫಲ ಆಶ್ಚರ್ಯಕರವಾಗಿ ಸಿಗುತ್ತದೆ ಎಂಬ ನಂಬಿಕೆಯೊಂದಿಗೆ ಈ  ತಂತ್ರವನ್ನು ಮಾಡಲಾಗಿದೆ. ಇವುಗಳನ್ನು ಮಾಡಿಸಲು ಕೆಲವೊಮ್ಮೆ ವಿಷಯದಲ್ಲಿ ಸೂಚಿಸಿರುವ ತಂತ್ರಗಳಿಗಿಂತ ಬೇರೆಯ ತಂತ್ರಗಳಿದ್ದರೂ ಬಳಸಲು ಹಿಂಜರಿಯಬೇಕಾಗಿಲ್ಲ. ಈ ಚಟುವಟಿಕೆಗಳು ದಿನನಿತ್ಯ ಶಾಲೆಯಲ್ಲಿ ಮಕ್ಕಳನ್ನು ಶಿಸ್ತಿಗೆ ಒಳಪಡಿಸಲು ಬಳಸುತ್ತಿರುತ್ತೇವೆ. ಹಾಗಾಗಿ ಇದೊಂದು ನಿರಂತರವಾಗಿ ರೂಢಿಯಲ್ಲಿರುವ ಚಟುವಟಿಕೆಗಳಾಗಿವೆ. ಇವುಗಳ ಸಾಮರ್ಥ್ಯಗಳನ್ನು ಗುರುತಿಸಲು ಶಿಕ್ಷಕರು ಪ್ರಯತ್ನಿಸಬೇಕಾಗುತ್ತದೆ.
  8. ವಿಶ್ರಾಂತಿ : ಇದು ಸರಳ ಯೋಗದ ಭಾಗವು ಸಹ ಆಗಿರುತ್ತದೆ. ಅಂದರೆ ಓಂಕಾರ ಧ್ವನಿ ಮಾಡುವುದು. ಸರಳ ಪ್ರಾಣಾಯಾಮಕ್ಕಾಗಿ ದಂಡಾಸನ/ಸುಖಾಸನ/ಪದ್ಮಾಸನದಲ್ಲಿ ಕುಳಿತು ವಿಶ್ರಾಂತಿ ಪಡೆಯುವ ವಿಧಾನವು ಇದಾಗಿದೆ. ಕಾರಣ ಆಟ, ವ್ಯಾಯಾಮಗಳನ್ನು ಮಾಡಿದ ನಂತರ ಮಕ್ಕಳಿಗೆ ವಿಶ್ರಾಂತಿ ಬಹಳ ಅವಶ್ಯಕವಾಗಿರುತ್ತದೆ. ಇಲ್ಲದಿದ್ದರೆ ಪಠ್ಯದ ಪಾಠಕ್ಕೆ ಮಕ್ಕಳು ಪೂರಕವಾಗಿ ಸ್ಪಂಧಿಸಲಾರರು. ಆದಕಾರಣ ಮಕ್ಕಳನ್ನು ಒಂದು ಮರದ ಕೆಳಗೆ/ವರಾಂಡ/ಕೊಠಡಿ ಒಳಗೆ ಸಾವಾಕಾಶವಾಗಿ ಕೂರಿಸಿ ವಿಶ್ರಾಂತಿಯನ್ನು ಕೊಡಿಸಬೇಕಾಗುತ್ತದೆ. ಈ ಸಮಯದಲ್ಲಿ ನಿಶ್ಯಬ್ಧತೆಯನ್ನು ಕಾಯ್ದುಕೊಂಡು ಪ್ರಶಾಂತ ವಾತಾವರಣವನ್ನು ಕಲ್ಪಿಸಿ ಶರೀರದ ಅಂಗಾಂಗಗಳನ್ನು ವಿಶ್ರಾಂತಗೊಳಿಸುವ ತಂತ್ರವನ್ನು ಮಕ್ಕಳಿಗೆ ತಿಳಿಸುವುದು ಅವಶ್ಯಕವಾಗಿದೆ. ಈ ಚಟುವಟಿಕೆಯನ್ನು ನಾಲ್ಕರಿಂದ ಆರು ನಿಮಿಷಗಳವರೆಗೆ ಮಾಡಿದರೆ ಸಾಕಾಗಬಹುದು. ಈ ವಿಭಾಗಕ್ಕೆ ಬಂದಾಗ ಹೊರಗುಳಿದ ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಾಗಿರುತ್ತದೆ.
    ಆರೋಗ್ಯ ಶಿಕ್ಷಣ : ದೈಹಿಕ ಶಿಕ್ಷಣವೆಂದರೆ ಕೇವಲ ಚಟುವಟಿಕೆಯಲ್ಲ. ಮಗುವಿನ ಸಂಪೂರ್ಣ ಆರೋಗ್ಯವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಣದಲ್ಲಿ ಆರೋಗ್ಯ ಶಿಕ್ಷಣ,ನೈತಿಕ ಶಿಕ್ಷಣ, ಪ್ರಥಮ ಚಿಕಿತ್ಸೆ ಇವುಗಳ ಬೌದ್ಧಿಕ ಬೋಧನೆಯು ಸೇರಿಕೊಂಡಿರುತ್ತದೆ. ಆದರೆ ಇವುಗಳನ್ನು ಸೀಮಿತ ಅವಧಿಯಲ್ಲಿ ಪಾಠಮಾಡಿ ಮಕ್ಕಳಿಗೆ ತಿಳಿಸಿದರೆ ಸಾಮಾನ್ಯವಾಗಿ ಮಕ್ಕಳು ಅವುಗಳನ್ನು ಮುಂದೆ ಮರೆಯುವ ಸಾಧ್ಯತೆಗಳಿರುವುದರಿಂದ ಈ ಆರೋಗ್ಯ ಶಿಕ್ಷಣ ಎಂಬುವುದು ನಿರಂತರವಾಗಿ ರೂಢಿಯಲ್ಲಿ ಬರಬೇಕಾಗಿದೆ. ಹಾಗಾದರೆ ಮಾತ್ರ ಆರೋಗ್ಯ ಶಿಕ್ಷಣದ ಗುರಿಯನ್ನು ಶಿಕ್ಷಣದಲ್ಲಿ ಈಡೇರಿಸಲು ಸಾಧ್ಯವಾಗುತ್ತದೆ. ಬೆಳೆಯುವ ಪೈರು ಮೊಳಕೆಯಲ್ಲಿಯೇ ಎಂಬಂತೆ  ಆ ಮಕ್ಕಳನ್ನು ಉತ್ತಮ ಆರೋಗ್ಯದ ರೂಢಿಯಲ್ಲಿ ಬೆಳೆಯುವ ಮ್ತ ವಾತಾವರಣವನ್ನು ನಿರ್ಮಿಸಿಕೊಡುವುದು, ಶಾಲೆ, ಮನೆ, ಪರಿಸರದ ಜವಾಬ್ಧಾರಿ ಆದರೂ ಸಹ ಹೆಚ್ಚಿನ ಜವಾಬ್ಧಾರಿ ಶಾಲೆಯದಾಗಿದೆ. ಆದಕಾರಣ ಮರವಾಗಿ ಬಗ್ಗದ್ದನ್ನು ಗಿಡವಾಗಿಯೇ ಬಗ್ಗಿಸಿ ಸರಿಪಡಿಸುವ ಉದ್ದೇಶದಿಂದ ಆಟದ ಚಟುವಟಿಕೆಗಳು ಮುಗಿದ ನಂತರ ಮಕ್ಕಳಿಗೆ ದಿನಕ್ಕೆ ಒಂದೆರೆಡು ಆರೋಗ್ಯದ ರೂಢಿಗಳನ್ನು ಮಾಡಿಸಿ ಅದರ ಮೇಲ್ವಿಚಾರಣೆಯನ್ನು ಶಿಕ್ಷಕರು ದಿನ ಮಾಡುತ್ತಿರಬೇಕಾಗಿರುತ್ತದೆ. ಇದು ಅನಿವಾರ್ಯವೂ, ಅವಶ್ಯಕತೆಯೂ ಆಗಿರುವುದರಿಂದ ದಿನದ ಐದರಿಂದ ಹತ್ತು ನಿಮಿಷಗಯು ವಿಶ್ರಾಂತಿ ನಂತರ ವಿಷಯದಲ್ಲಿ ತಿಳಿಸಿರುವ ವಿಚಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದರ ಮೂಲಕ ಅಲ್ಲಿಯ ಪರಿಸರಕ್ಕೆ ಹೊಂದಿಕೆಯಾಗುವಂತೆ ಮಕ್ಕಳಿಗೆ ತಿಳಿಸಿ ರೂಢಿಸಬೇಕಾಗುತ್ತದೆ. ದೈಹಿಕ ಚಟುವತಿಕೆಯ ಸಮಯ ಹೆಚ್ಚು ಹಿಡಿದರೆ ಮಾರನೆಯ ದಿನದ ಸಮಯವನ್ನು ಈ ವಿಷಯಕ್ಕೆ ಕಾದಿರಿಸಿಕೊಂಡು ತಿಳಿಸಬೇಕಾಗುತ್ತದೆ. ಹಾಗೂ ಹದಿನೈದು ದಿನಕ್ಕೆ ಒಂದು ಸಾರಿ ಆರೋಗ್ಯದ ವಿಷಯದಲ್ಲಿ ತಿಳಿಸಿರುವ ವಿಷಯಗಳಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ಮಾಡುವುದರ ಜೊತೆಗೆ ಪುನರಾವರ್ತನೆ ಮಾಡುವುದರಿಂದ ಉತ್ತಮ ಫಲ ದೊರೆಯಬಹುದಾಗಿದೆ. ಇದರ ಮೌಲ್ಯ ಮಾಪನವನ್ನು ಈ ಪಠ್ಯದ ಮಾರ್ಗಸೂಚಿಯಲ್ಲಿ ನೋಡುವುದು.
  9. ಆಟದ ಪಾಠ : ಮಕ್ಕಳು ಆಟವಾಡಿದ ನಂತರ ಆಟದಿಂದ ಏನು ಕಲಿತಿದ್ದೀವಿ ಹಾಗೂ ಈ ಆಟದಲ್ಲಿ ಕೆಲವು ಸಂದರ್ಭಗಳು ಜೀವನದಲ್ಲಿ ಯಾವ ರೀತಿ ಉಪಯೋಗಕ್ಕೆ ಬರುತ್ತದೆ.? ಹಾಗೂ ಅಂತಹ ಉತ್ತಮ ವಿಷಯಗಳನ್ನು ಜೀವನದಲ್ಲಿ ಹೇಗೆ ಸಮನ್ವಯ ಗೊಳಿಸಿಕೊಂಡು ಹೋಗುವುದೆಂಬ ಅರಿವು ಮೂಡಿಸಬೇಕಾದದ್ದು ಬಹಳ ಮುಖ್ಯವಾಗಿದೆ. ಹಾಗಾದರೆ ಮಾತ್ರ ಆತವು ಒಂದು ನೈತಿಕ ಪಾಠದಂತೆ ಇತರೆ ಬೋಧನ ವಿಷಯಗಳಿಗೆ ಸರಿ ಸಮಾನವಾದುದ್ದು ಎಂದು ಸಾದರಪಡಿಸುವಲ್ಲಿ ಸಹಕಾರಿಯಾಗಬೇಕಾಗಿದೆ. ಆದುದರಿಂದ ವಿಷಯದಲ್ಲಿ ತಿಳಿಸಿರುವ ಆಟಗಳು ಯಾವ ನೀತಿಯನ್ನು ತಿಳಿಸುತ್ತದೆ. ಎಂದು ಸಾಧ್ಯವಾದಷ್ಟು ಮಟ್ಟಿಗೆ ಹೇಳಲು ಪ್ರಯತ್ನಿಸಿದೆ. ಆದರೆ ಶಿಕ್ಷಕರು ಮತ್ತಷ್ಟು ನೀತಿಗಳನ್ನು ಮಕ್ಕಳಿಗೆ ತಿಳಿಸುವುದು ಅವಶ್ಯಕವಾಗಿದೆ. ಹಾಗೂ ಈ ನೀತಿಗಳನ್ನು ಆಟ ಮುಗಿದ ನಂತರ ಮಕ್ಕಳಿಗೆ ಪ್ರಶ್ನೆ ಕೇಳುವುದರ ಜೊತೆಗೆ ತಿಳಿಸುವುದು ಇಲ್ಲವೇ ಇತರೇ ಯಾವುದಾದರೂ ಉಪಯುಕ್ತ ಸಂದರ್ಭದಲ್ಲಿ ಇಲ್ಲವೇ ಆರೋಗ್ಯ ಶಿಕ್ಷಣ ಬೋಧನೆಯ ನಂತರ ಮಕ್ಕಳಿಗೆ ತಿಳಿಸಿ ಪಾಠದ ಮೌಲ್ಯವನ್ನು ಹೆಚ್ಚಿಸುವುದಾಗಿದೆ.
  10. ಮನೆಕೆಲಸ : ಶಿಕ್ಷಕರು ಕೆಲವೊಮ್ಮೆ ವಿಷಯಗಳನ್ನು ಮಕ್ಕಳಿಗೆ ತಿಳಿಸಿದಾಗ ಮಕ್ಕಳು ಹೆದರಿಕೆ ಇಲ್ಲವೇ ಹಿಂಜರಿಕೆ ಭಾವನೆಯಿಂದ ಕಲಿಯದೇ ಇರಬಹುದು ಅಥವಾ ಹೇಳಿ ಕೊಡುವುದು ಅವ್ರಿಗೆ ಅರ್ಥವಾಗದೇ ಇರಬಹುದು. ಹಾಗಾಗಿ ಕೆಲವು ವಿಚಾರಗಳನ್ನು ಮನೆಯ ವಾತಾವರಣ ಹಾಗೂ ಸ್ನೇಹಿತರೊಂದಿಗೆ ಕೇಳಿ ತಿಳಿದುಕೊಳ್ಳುವುದರಿಂದ ಶಿಕ್ಷಕರು ಚಟುವಟಿಕೆಯನ್ನು ಮಾಡಿಸಲು ಸುಲಭವಾಗುತ್ತದೆ. ಆದ್ದರಿಂದ ಶಿಕ್ಷಕರು ಸಾವದಾನವಾಗಿ ತಮ್ಮ ಚಟುವಟಿಕೆಯನ್ನು ಕಲಿಸಲು ಮಕ್ಕಳಿಗೆ ವಿಶಃಅಯದಲ್ಲಿ ತಿಳಿಸಿರುವ ಸರಳ ಚಟುವಟಿಕೆಯನ್ನು ಕಲಿತು ಬರಲು ತಿಳಿಸುವುದು ಅವಶ್ಯಕವಾಗಿದೆ ಮತ್ತು ತಿಳಿದು ಬಂದದ್ದನ್ನು ಮಕ್ಕಳಿಂದ ಕೇಳಿದರೆ ಉತ್ತರ ಸಗಬಹುದು ಇಲ್ಲವೇ ಮತ್ತಷ್ಟು ಕಾಲಾವಕಾಶ ಬೇಕಾಗುತ್ತದೆ ಎಂಬುದನ್ನು ತಿಳಿದು ಚಟುವಟಿಕೆಯನ್ನು ಮಾಡಿಸಬಹುದು.
  11. ಚಟುವಟಿಕೆ ವಿಭಾಗ : ಇದೊಂದು ಅನೌಪಚಾರಿಕ ಚಟುವಟಿಕೆಯಾದರೂ ಸಹ ಬಿಡುವಿನ ವೇಳೆಯಲ್ಲಿ ಶಿಕ್ಷಕರು ಮಕ್ಕಳಿಗೆ ಕಲಿಸುವುದು ಹಾಗೂ ಅವಕಾಶಗಳನ್ನು ಕಲ್ಪಿಸಿಕೊಡುವುದು ಅವಶ್ಯಕವಾಗಿದೆ. ಇಲ್ಲಿರುವ ಚಟುವಟಿಕೆಗಳು ಪಾಠಕ್ಕೆ, ಆಟಕ್ಕೆ ಪೂರಕವಾಗಿದ್ದು, ಮತ್ತೆ ಕೆಲವು ಪಾಠದಲ್ಲಿ ಕಲಿಸಲಾಗದಿರುವುದನ್ನು ಸ್ವತಂತ್ರವಾಗಿ ಕಲಿತು ಬಿಡುವಿನ ವೇಳೆಯನ್ನು ಸದುಉಪಯೋಗಪಡಿಸಿಕೊಳ್ಳುವಂತಹ  ಚಟುವಟಿಕೆಗಳು ಇದರಲ್ಲಿ ಇರುವುದಾಗಿ. ಅಮ್ತಹುಗಳನ್ನು ಶಿಕ್ಷಕರು ಮಕ್ಕಳು ಮಾಡುವಂತ್ ಪ್ರೇರೇಪಿಸಬೇಕಾಗಿದೆ.
  12. ಮರಳಿ ಕೊಠಡಿಗೆ : ಈ ವಿಭಾಗದಲ್ಲಿ ಅಂದಿನ ಪಾಠಕ್ಕೆ ಸಂಬಂಧಿಸಿದ ಒಂದು ಗಾದೆ ಅಥವಾ ನೀತಿಯನ್ನು ಎಲ್ಲಾ ಮಕ್ಕಳು ಒಟ್ಟಾಗಿ ವಿನೋದವಾಗಿ ಹೇಳುವಂತೆ ಮಾಡಬೇಕು. ಹಾಗೂ ಮಕ್ಕಳು ಕೊಠಡಿಯಿಂದ ಹೊರ ಬರುವಾಗ ಅಥವಾ ಕೊಠಡಿಗೆ ಹೋಗುವಾಗ ಪ್ರತಿದಿನ ಸಾಲಾಗಿ ಹೋಗುವ ರೂಢಿಯನ್ನು ಮಾಡಿಸಬೇಕಾಗುತ್ತದೆ. ಹಾಗೂ ಈ ವೇಳೆಯಲ್ಲಿ ಹಾಜರಾತಿಯನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ.
  13. ಪಠ್ಯಕ್ಕೆ ಪೂರಕವಾದ ಅಂಶಗಳು : ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಮುಖ್ಯ ಚಟುವಟಿಕೆಯಿಂದ ಪಠ್ಯದ ವಿಷಯಗಳಿಗೆ ಪೂರಕವಾದ ಅಂಶಗಳನ್ನು ವಿಷಯವಾರು ಹೊರ ತೆಗೆದು ಈ ಪಠ್ಯ ಪುಸ್ತಕದಲ್ಲಿ ನೀಡಲಾಗಿದೆ. ಇವು ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಬೇರೆ ಆಟಗಳಿಂದಲೂ ಸಹ ಪಠ್ಯಕ್ಕೆ ಪೂರಕವಾದ ಅಂಶಗಳೆಷ್ಟಿದೆ ಎಂಬುವುದನ್ನು ತಿಳಿದು ಪಾಠದಲ್ಲಿ ಅವುಗಳ ಉಪಯೋಗವನ್ನು ಪಡೆದುಕೊಳ್ಳುವುದರಿಂದ ಆಟದ ಪಾಠದ ನಿಜವಾದ ಉದ್ದೇಶವನ್ನು ಈಡೇರಿಸಿದಂತಾಗುವುದು. ಶಿಕ್ಷಕರು ಹಾಗೂ ಮಕ್ಕಳು ಅಲ್ಲಿರುವ ಚಟುವಟಿಕೆಗಳಿಂದ ಪಠ್ಯಕ್ಕೆ ಮತ್ತಷ್ಟು ಪೂರಕ ಅಂಶಗಳನ್ನು ಹೊರತೆಗೆಯಲು ಕ್ರಿಯಾಶೀಲರಾಗುವರು.
  14. ಪ್ರಶ್ನಿ ವಿಭಾಗ : ಒಂದನೇ ತರಗತಿ ಮಕ್ಕಳಿಗೆ ಆಯಾ ಪಾಠದ ಕೊನೆಯಲ್ಲಿ ಪ್ರಶ್ನೆಗಳನ್ನು ನೀಡಲಾಗಿದೆ. ಈ ಪ್ರಶ್ನೆಗಳಿಗೆ ಉತ್ತರವು ಚಟುವಟಿಕೆಯನ್ನು ಮಾದಿ ಕಲಿತಾಗ ಮಾತ್ರ ಮಕ್ಕಳು ಉತ್ತರಿಸಲು ಸಾಧ್ಯವಾಗುವುದು. ಎಲ್ಲಾ ಮಕ್ಕಳು ಆಟದ ಪಾಠದ ಚಟುವಟಿಕೆಯಲ್ಲಿ ವಾಗವಹಿಸುವುದು ಅನಿವಾರ್ಯವಾಗಿದೆ.
  15. ಎರಡೆನೇ ತರಗತಿ ಮಕ್ಕ್ಳಿಗೆ ಪಠ್ಯದ ಕೊನೆಯಲ್ಲಿ ಪ್ರಶ್ನೆಗಳನ್ನು  ನೀಡಲಾಗಿದೆ.
  16. ಮೂರು ಮತ್ತು ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ಆಯಾ ಪಾಠದ ಕೊನೆಯಲ್ಲಿ ಪಾಠಕ್ಕೆ ಸಂಬಂಧಿಸಿದ  ಪ್ರಶ್ನೆಗಳನ್ನು ಕೇಳಲಾಗಿದೆ. ಅವುಗಳಲ್ಲಿ ಕೆಲವು ತಪ್ಪು ಪ್ರದರ್ಶನ ಮಾಡಿ  ತೋರಿಸುವಂತೆ ಮತ್ತು ನಿಯಮಗಳನ್ನು  ಸರಿ, ತಪ್ಪು ಯಾವುದೆಂದು ಗುರುತಿಸುವಂತೆ ಹಾಗೂ ಪ್ರಶ್ನೆಗಳಿಗೆ ಉತ್ತರಿಸುವಂತೆ ಪ್ರಶ್ನಾವಿಭಾಗವನ್ನು ರಚಿಸಲಾಗಿದೆ. ಇವುಗಳನ್ನು ಮಕ್ಕಳು ಪ್ರದರ್ಶನ ಮಾಡಿ ತೋರಿಸಬೇಕಾದರೆ ಮತ್ತು ಪ್ರಶ್ನೆಗಳಿಗೆ ಉತ್ತರವನ್ನು ಹೇಳಬೇಕಾದರೆ ಆಟದ ಪಾಠ ಚಟುವಟಿಕೆಯಲ್ಲಿ ಪಾಲ್ಗೊಂಡಿರಬೇಕಾಗಿರುತ್ತದೆ. 


****************ಮಾಹಿತಿ ಕೃಪೆ: ವಿಕಾಸ್ ಪೀಡಿಯಾ*****************

ಆರೋಗ್ಯ ಮತ್ತು ಮೌಲ್ಯ ಶಿಕ್ಷಣ


ಆರೋಗ್ಯ ಶಿಕ್ಷಣ

     ಶರೀರ ಶಿಕ್ಷಣದ ಮೃದುವಾದ ಅಂಗವೇ ಆರೋಗ್ಯ ಶಿಕ್ಷಣ ಇವೆರಡು ಒಂದಕ್ಕೊಂದು ಒಡಕು ಬಿಟ್ಟು ವರ್ತುಲಗಳು ಇದ್ದಂತೆ ಆದರೂ ಇವೆರಡುಕ್ಕೂ ಸರ್ವಸಾಮಾನ್ಯ ಅದ್ದೇಶಗಳಿವೆ.
    ಆಯುರಾರೋಗ್ಯಭಾಗ್ಯವೇ ಮಾನವ ಮೊದಲ ಗುರಿ. ಇಂತಹ ಗುರಿಯ ಸಾಧನೆಗೆ ಆರೋಗ್ಯ ಶಿಕ್ಷಣ ಬಹಳ ಮುಖ್ಯವಾಗಿದೆ.

ವ್ಯಾಖ್ಯೆ ಎಂಬ ಆಂಗ್ಲಭಾಷೆಯ ಪದ ಸುರಕ್ಷಿತ ಮತ್ತು ಸುಭದ್ರವಾದ ಶರೀರ ಎಂದಾಗುತ್ತದೆ. ಶರೀರದೊಳಗಿನ ಮನಸ್ಸು ಮತ್ತು ಭಾವನೆಗಳೂ ಸಹ ಇದರಲ್ಲಿ ಸೇರಿವೆ.
ಡಾ॥ ಥಾಮಸ್ ಲುಡ್ ಇವರ ಪ್ರಕಾರ "ಮನೆ ಶಾಲೆ ಹಗೂ ಇನ್ನಿತರ ಸಾಮಾಜಿಕ ಸ್ಥಳಗಳಲ್ಲಿ ವೈಯಕ್ತಿಕ ಅಥವಾ ಸಾಮಾಜಿಕ ಆರೋಗ್ಯದ ಬಗ್ಗೆ ಯೋಗ್ಯವಾದ ಮನೋವೃತ್ತಿ ಜ್ಞಾನ ಹಾಗೂ ಒಳ್ಳೇಯ ಅಭ್ಯಾಸಗಳು ನೆಲೆಗೊಳ್ಳುವಂತೆ ಪ್ರಭಾವ ಬೀರುವ ಅನುಭವಗಳ ಒಟ್ಟು ಪರಿಣಾಮವೇ ಆರೋಗ್ಯ ಶಿಕ್ಷಣ".
    ಈ ವ್ಯಾಖ್ಯೆಗಳನ್ನು ಪರಿಶೀಲಿಸಿದಾಗ ಆರೋಗ್ಯ ಶಿಕ್ಷಣವು ಒಟ್ಟು ಮಗುವಿನ ಚಟುವಟಿಕೆಯಲ್ಲಿ ಅಡಕವಾಗಿದೆ. ಇದರ ಮಾರ್ಗದರ್ಶನ ಶಿಕ್ಷಕನಿಂದ ಆಗಬೇಕಾಗಿದೆ.
      ಆರೋಗ್ಯ ಶಿಕ್ಷಣದಲ್ಲಿ ಶಿಕ್ಷಕ, ತಂದೆ ತಾಯಿ, ಸಮಾಜದ ಪಾತ್ರ ಬಹಳವಿದೆ. ಎಂದು ಹೇಳಿದರೂ ಸಹ ಕೊಠಾರಿಯ ವರದಿ ತಾಷ್ಟ್ರದ ಭವಿಷ್ಯವು ನಾಲ್ಕು ಗೋಡೆಯೊಳಗೆ ನಿರ್ಮಾನವಾಗುತ್ತಿದೆ. ಎಂದು ಹೇಳಿರುವುದರಿಂದ ಆರೋಗ್ಯ ಶಿಕ್ಷಣ ನೀಡುವಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದಾಗಿಗಿರುತ್ತದೆ ಎಂದೆನಿಸುತ್ತದೆ.
   ಈ ನಿಟ್ಟಿನಲ್ಲಿ ಶಿಕ್ಷಕನು ದಿನನಿತ್ಯ ಇಲ್ಲಿ ತಿಳಿಸಿರುವ ಆರೋಗ್ಯದ ಅವ್ಯಾಸಗಳನ್ನು ಬೋಧನೆ ತಿಳುವಳಿಕೆಗೆ ಸೀಮಿತಗೊಳಿಸುವುದಕ್ಕಿಂತ ಮುಖ್ಯವಾಗಿ ದಿನನಿತ್ಯ ಅವಿಗಳನ್ನು ರೂಢಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಾಗುತ್ತದೆ. ಹಾಗಾಗಿ ಎಲ್ಲಾ ಆಟದ ಪಾಠಗಳಲ್ಲಿ ಆರೋಗ್ಯದ ರೂಢಿಗಳನ್ನು ಅಳವಡಿಸಿದೆ.

ಆರೋಗ್ಯ ಶಿಕ್ಷಣದ ವಿಷಯಗಳು

  1. ಆಹಾರ
  2. ಆರೋಗ್ಯದ ರೂಢಿಗಳು
  3. ರೋಗಗಳನ್ನು ತಡೆಗಟ್ಟುವುದು
  4. ರೋಗಗಳನ್ನು ಹರಡುವ ಅಂಶಗಳು ಹಾಗೂ ಅವುಗಳಿಂದ ವಿಮುಕ್ತವಾಗುವ ಕ್ರಮ
  5. ತನ್ನಲ್ಲಿ ಆಗುವ ಬದಲಾವಣೆಗಳನ್ನು ತಿಳಿಸಿದೆವೈಯಕ್ತಿಕ ಮತ್ತು ಪರಿಸರದ ಸ್ವಚ್ಛತೆ

ಪ್ರಥಮ ಚಿಕಿತ್ಸೆ ಮತ್ತು ಸುರಕ್ಷತಾ ಶಿಕ್ಷಣ

       ಆರೋಗ್ಯ ಶಿಕ್ಷಣ ಪ್ರಮುಖ ವಿಷಯ ವಸ್ತುವು ಇದಾಗಿದೆ. ಪ್ರಥಮ ಚಿಕಿತ್ಸೆ ಎಂದರೆ ಅಪಘಾತಕ್ಕೀಡಾದಗ ವ್ಯಕ್ತಿಗೆ ಕೂಡಲೆ ತಾತ್ಕಾಲಿಕ ಚಿಕಿತ್ಸೆ ನೀಡುವುದು ಹಾಗೂ ವ್ಯೆದ್ಯರ ಸೇವೆ ದೊರೆಯುವವರೆಗೆ ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳುವುದು ಏರ್ಪಡಿಸುಚುದೇ ಪ್ರಥಮ ಚಿಕಿತ್ಸೆ.
     ಶಾಲಾ ಮೈದಾನ, ಮನೆ, ಮತ್ತು ಪರಿಸರದಲ್ಲಿ ಅಫಃಆತಗಳು ಸಂಭವಿಸುತ್ತ್ದೆ. ಅಲ್ಲಿಯೇ ಆರೋಗ್ಯ ಕೇಂದ್ರಗಳು ಇರುವುದಿಲ್ಲ ಆಗ ಕನಿಷ್ಟ ತಿಳುವಳಿಕೆಯೊಂದಿಗೆ ವ್ಯಕ್ತಿಯು ಸಾವಿನಿಂದ ತಪ್ಪಿಸಿಕೊಳ್ಳಲು ತಕ್ಷಣ ಚಿಕಿತ್ಸೆ ನೀಡಿ ನಂಟರ ಆರೋಗ್ಯ ಕೇಂದ್ರಕ್ಕೆ ತಲುಪಿಸಬಹುದು ಹಾಗೂ ಅಂತಹ ಅವ್ಘಡಗಳು ಆಗದಿರುವ ರೀತಿಯಲ್ಲಿ ಮುನ್ನೆಚ್ಚಿರಿಕೆ ಕ್ರಮವನ್ನು ವಹಿಸುವುದೇ ಸುರಕ್ಷತಾ ಶಿಕ್ಷಣ.
       ಮಕ್ಕಳು ದಿನನಿತ್ಯ ಉಪಯೋಗಿಸುವ ಜಾಮಿಟ್ರಿಬಾಕ್ಸ್ ಅದರಲ್ಲಿ ಚೂಪಾದ ವಸ್ತುಗಳು ಮೈದಾನದಲ್ಲಿರುವ ಕಲ್ಲು ಮುಳ್ಳು ಹಾಗೂ ಶಾಲೆಯಲ್ಲಿ ಉಪಯೋಗಿಸುವ ಬಣ್ಣದ ಡಬ್ಬಗಳು ವಿಜ್ಞಾನ ಪ್ರಯೋಗಾಲಯದಲ್ಲಿ ಉಪಯೋಗಿಸುವ ವಿಷ ಅನಿಲ ಗಾಜು ಇತ್ಯಾದಿಗಳ ವಿಲೇವಾರಿ ಹಾಗೂ ಇವುಗಳಿಂದ ಸುರಕ್ಷತಾ ಕ್ರಮವನ್ನು ಮತ್ತು ವಿಷಜಂತುಗಳಿಂದ ಕಡಿತ, ಆಘಾತಕಾರಿಯಾದ ಬೆಂಕಿ, ನೀರು ಹೀಗೆ ಮುಂತಾದವುಗಳಿಂದ ಸಂಭವಿಸುವ ಅನಾಹುತವನ್ನು ತಡೆಗಟ್ತುವ ಉಪಾಯಗಳನ್ನು ಸರಳವಾಗಿ ಸುಲಭವಾಗಿ ಆರೋಗ್ಯ ಶಿಕ್ಷಣ ಭಾಗದಲ್ಲಿ ತಿಳಿಸಲು ಪ್ರಯತ್ನಿಸಿದೆ ಹಾಗೂ ಅವಗಡದಲ್ಲಿರುವ ವ್ಯಕ್ತಿಗೆ ಚಿಕಿತ್ಸೆ ನೀಡುವ ಕ್ರಮವನ್ನು ಕನಿಷ್ಟ ತಿಳುವಳಿಕೆಗಾಗಿ ಆರೋಗ್ಯ ಶೀಕ್ಷಣ ವಿಭಾಗದಲ್ಲಿ ಕೊಡಲಾಗಿದೆ.

 

ಮೌಲ್ಯ ಶಿಕ್ಷಣ

ರಾಷ್ತ್ರದ ಎಲ್ಲಾ ಸಂಪಮೂಲಗಳೀಇಂತ ಮಾನವ ಸಂಪನ್ಮೂಲವೇ ಅತಿ ಅಮೂಲ್ಯವಾದದ್ದು ರಾಷ್ತ್ರದ ಅಭಿವೃದ್ಧಿಯು ಆಯಾ ರಾಷ್ತ್ರದ ಪ್ರಜೆಗಳಿಂದ ಆಗುತ್ತದೆ. ರಾಷ್ಟ್ರಾಭಿಮಾನವನ್ನು ಮೂಡಿಸುವ ಪ್ರಯತ್ನವೇ ಮೌಲ್ಯ ಶಿಕ್ಷಣವಾಗಿದೆ.ವೈಯಕ್ತಿಕ, ಸಾಮಾಜಿಕ, ರಾಷ್ಟ್ರೀಯ ಅಂತರಾಷ್ಟ್ರೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಪ್ರಯತ್ನವನ್ನು ಈ ಆಟದ ಪಾಠದ, ಪಠ್ಯವಸ್ತುವಿನಲ್ಲಿದೆ.
ನಾಡಗೀತೆ, ತಾಷ್ಟ್ರಗೀತೆ, ದೇಶಭಕ್ತಿಗೀತೆ, ಸಾಭಿನಯಗೀತೆ ನೃತ್ಯ, ರಾಷ್ಟ್ರಧ್ವಜ, ಲಾಂಛನ,, ಪ್ರಾಣಿ, ಪಕ್ಷಿ, ಹೂವು, ಇವುಗಳ ತ್ಳುವಳಿಕೆಯನ್ನು ಆರೋಗ್ಯ ಶಿಕ್ಶಃಅಣ ಮತ್ತು ಮುಖ್ಯ ಚಟುವಟಿಕೆ ವಿಭಾಗದಲ್ಲಿ ಸೇರಿಸಲಾಗಿದೆ.

ನೃತ್ಯ

ಇದು ದೈಹಿಕ ಶಿಕ್ಷಣದ ಒಂದು ಪ್ರಕಾರವಾಗಿದೆ. ನೃತ್ಯವು ಇಂದು ಏರೀಬಿಕ್ಸ್ ವ್ಯಾಯಾಮಗಳೊಂದಿಗೆ ವಿಲೀನಗೊಂಡಿದೆ. ನೃತ್ಯ ಎಂಬುದು ಶರೀರದ ಅಂಗಗಲು ಸಂಗೀತದ ತಾಳಕ್ಕೆ ತಕ್ಕಂತೆ ಚಲನೆಗೊಳಿಸಿ, ದೈಹಿಕ ವ್ಯಾಯಾಮವನ್ನು ಮಾಡಿಸುತ್ತದೆ. ಸಾಭಿನಯ ಗೀತೆ, ಜನಪದ ನೃತ್ಯ ಇತ್ಯಾದಿಗಳನ್ನು ಆಟದ ಪಾಠದಲ್ಲಿ ಸೇರಿಸಲಾಗಿದೆ. ಉದಾ: ಸುಗ್ಗಿ ಕುಣಿತ, ಕುಣಿಯಲು ಕಷ್ಟಸಹಿಷ್ಣತೆ ಹಾಗೂ ನರಸ್ನಾಯು ಸಂಯೋಜನೆಯು ಬಹಳಷ್ಟು ಆಗುತ್ತದೆ. ಇದರಿಂದ ಉತ್ತಮವಾದ ದೈಹಿಕ ವ್ಯಾಯಾಮವಾಗುತ್ತದೆ ಮತ್ತು ಒಳ್ಳೆಯ ಮನರಂಜನೆಯನ್ನು ನೀಡಬಹುದಾಗಿದೆ.

ಆಟದ ಪಾಠದ ಸ್ವರೂಪ ಮತ್ತು ವೈಶಿಷ್ಟ್ಯ

ಈ ಆಟದ ಪಾಠವು ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಸರಳ ಹಾಗೂ ಸುಲಭವೂ ಆಗಿರುತ್ತದೆ. ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿಯಾಗಿದೆ. ಜೀವನ ವಿಜ್ಞಾನ ಮತ್ತು ದೈಹಿಕ ಶಿಕ್ಷಣದ ಮೂಲ ತತ್ವ ಹಾಗೂ ಅದರ ಉದ್ದೇಶವನ್ನು ಈದೇರಿಸುವಂತಿದೆ. ಸರ್ಕಾರದ ಸವಲತ್ತುಗಳಿಗೆ ಅನುಗುಣವಾಗಿ ಅತಿಹೊರೆಯಾಗದಂತೆ ಸ್ಥಳೀಯವಾಗಿ ಈಗಾಗಲೇ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡಿದೆ. ವಿಶೇಷವಾಗಿ ಹೆಣ್ಣು ಮಕ್ಕಳು ಹಾಗೂ ಶಾಲೆ ಬಿಟ್ಟ ಮಕ್ಕಳಿಗೆ ಉತ್ತೇಜನಕಾರಿ ಹಾಗೂ ಮುಖ್ಯವಾಹಿನಿಗೆ ತರುವ ತಂಟ್ರವೂ ಇದರಲ್ಲಿದೆ. ಓದುಗರಿಗೆ ದೈಹಿಕ ಶಿಕ್ಷಣದ ಒಳನೋಟವನ್ನು ತೋರಿಸಿಕೊಡುವಂತಿದೆ. ಇಂದಿನ ಯೋಗವನ್ನು ಕ್ರಮಬದ್ಧವಾಗಿ ದೈಹಿಕ ಶಿಕ್ಷಣದ ಜೀವಾಳದಂತೆ ಸಂಬಂಧ ಕಲ್ಪಿಸಿದೆ. ದೈಹಿಕ ಆರೋಗ್ಯದೊಂದಿಗೆ, ಆರೋಗ್ಯದ ರೂಢಿಗಳನ್ನು ಬಹಳಷ್ಟು ತಿಳಿಸಿದೆ. ಮೌಲ್ಯ ಶೀಕ್ಷಣ, ಪ್ರಥಮ ಚಿಕಿತ್ಸೆಯನ್ನು ಆರೋಗ್ಯ ಶಿಕ್ಷಣದೊಂದಿಗೆ ಬೆಸೆಯಲಾಗಿದೆ ಮಕ್ಕಳ ವಯಸ್ಸು ಮತ್ತು ಶಕ್ತಿಗೆ ಅನುಗುಣವಾಗಿ ಆಟಗಳನ್ನು ಅಳವಡಿಸಿದೆ. ಮತ್ತೆ ಮತ್ತೆ ಆಡಬೇಕೆಂಬ ಆಸಕ್ತಿ ಮೂಡಿಸಲೂ ಹಾಗೂ ಸರಳವಾಗಿ ಪದಕವಾಯಿತು ಕಲಿಸುವ ತಂತ್ರವನ್ನು ಸುಂದರವಾಗಿ ಜೋಡಿಸಲಾಗಿದೆ. ಆಟದಿಂದ ಪಾಠಕ್ಕೆ ಪೂರಕವಾದ ಅಂಶವನ್ನು ಸಾಕಷ್ಟು ಹೊರತೆಗೆಯಲಾಗಿದೆ. ಹೀಗೆ ವೈಶಿಷ್ಟ್ಯಪೂರ್ಣವಾಗಿರುವಂತಿದೆ. ಇದನ್ನು ಶಾಸ್ತ್ರೀಯವಾಗಿ ಬೋಧಿಸಲು ಸಾಧ್ಯ ಎಂದು ತೋರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದೆ.

ಆಟದ ಪಾಠದ ಗುರು ಮತ್ತು ಉದ್ದೇಶಗಳು

  1. ದೈಹಿಕ ಶಿಕ್ಷಣದ ಗುರಿ ಉದ್ದೇಶಗಳನ್ನು ಈಡೇರಿಸುವುದು.
  2. ದೈಹಿಕ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ(ಜೀವನ ವಿಜ್ಞಾನ) ದ ಅವಧಿಗಳನ್ನು ಸದುಪಯೋಗಪಡಿಸಿಕೊಳ್ಳುವುದು
  3. ಕಿರಿಯ ಪ್ರಾಥಮಿಕ ಶಾಲೆಗಳಿಗೆ ದೈಹಿಕ ಮತ್ತು ಆರೋಗ್ಯ ಶಿಕ್ಷಣಕ್ಕೊಂದು ಪಠ್ಯ ವಸ್ತು ಇಲ್ಲ ಎಂಬುದರ ಕೊರತೆಯನ್ನು ದೂರ ಮಾಡುವುದು.
  4. ದೈಹಿಕ ಶಿಕ್ಷಣವನ್ನು ಶಿಕ್ಷಣದ ಪ್ರಧಾನ ಭೂಮಿಕೆಯಲ್ಲಿ ತಂದುಶಾಸ್ತ್ರೀಯವಾಗಿ ಬೋಧಿಸುವುದು.
  5. ಮಕ್ಕಳಿಗೆ ಆಯಾ ಹಂತದಲ್ಲಿ ಆಟಗಳಿಂದ ವಂಚಿತರಾಗುವುದನ್ನು ತಡೆಯುವುದು. ಎಲ್ಲಾ ಮಕ್ಕಳು ಆಟೋಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು.
  6. ದೈಹಿಕ ಶಿಕ್ಷಣದಿಂದ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಬರುವಂತೆ ಮಾಡಿ ಶಾಲಾ ಹಾಜರಾತಿ ಹೆಚ್ಚಿಸುವುದು.
  7. ಹಿಂದುಳಿದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು. ಶಿಕ್ಷಣದಲ್ಲಿ ನಂಬಿಕೆ ಮತ್ತು ಸರಳತೆಯನ್ನು ತರುವುದು.
  8. ವಿಶೇಷವಾಗಿಹೆಣ್ಣು ಮಕ್ಕಳಲ್ಲಿ ಸಾಹಸದ ಪ್ರವೃತ್ತಿ ಬೆಳೆಸಿ, ಅವರು ಸ್ವಾವಲಂಬಿಯಾಗಿ ಬದುಕುವುದಕ್ಕೆ ಸದೃಢವಾದ ದೇಹ ಮತ್ತು ಮನಸ್ಸನ್ನು ನಿರ್ಮಾಣ ಮಾಡುವುದು.(ಅಭಿವೃದ್ಧಿಯಲ್ಲಿ ಲಿಂಗ ತಾರತಮ್ಯವನ್ನು ಇಲ್ಲದಂತೆ ಮಾಡುವುದು)
  9. ವಿಶೇಷ ಅಗತ್ಯವುಳ್ಳ ಮಕ್ಕಳು ಅಗತ್ಯವಿರುವ ಕ್ರೀಡೆಯಲ್ಲಿ ಭಾಗವಹಿಸುವಂತೆ ಮಾಡುವುದು.
  10. ಆರೋಗ್ಯ ಶಿಕ್ಷಣದ ಗುರಿ ಮತ್ತು ಉದ್ದೇಶಗಳನ್ನು ಈಡೇರಿಸುವುದು.

 

 

*******ಮಾಹಿತಿ ಕೃಪೆ: ವಿಕಾಸ್ ಪೀಡಿಯಾ********

 

 

 

ಯೋಗ, ವ್ಯಾಯಾಮ, ಆಜ್ಞೆಗಳು



  • ಯೋಗ
  • ವ್ಯಾಯಾಮ
  • ಆಜ್ಞೆಗಳು



  • ಯೋಗ

    ದೇಹ ಮತ್ತು ಮನಸ್ಸನ್ನು ಒಂದುಗೂಡಿಸಿ ಏಕಾಗ್ರತೆಗೊಳಿಸುವುದೇ ಯೋಗದ ಗುರಿ. ಈ ಗುರಿಯನ್ನು ತಲುಪಲು ಹಲವಾರು ಮಾರ್ಗಗಳಿವೆ. ಇವುಗಳನ್ನು ಯೋಗದ ಪಥಗಳೆಂದು ಕರೆಯುವರು.
    1. ಜ್ಞಾನ ಯೋಗ: ಮನುಷ್ಯನಲ್ಲಿರುವ ಬುದ್ಧಿಶಕ್ತಿ ವಿಚಾರ ಶಕ್ತಿ ಮತ್ತು ತರ್ಕಶಕ್ತಿಯ ಮೂಲಕ ತನ್ನಲ್ಲಿ ತಾನು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವ ಮಾರ್ಗವಾಗಿದೆ. ಉದಾ: ಬುದ್ಧ, ಸ್ವಾಮಿ ವಿವೇಕನಂದರು. ಜ್ಞಾನದೇವ ಮುಂತಾದವರು.
    2. ಭಕ್ತಿ ಕೆಲವು ವ್ಯಕ್ತಿಗಳಲ್ಲಿ ಭಾವನೆಗಳು ಪ್ರಧಾನವಾಗಿರುತ್ತದೆ. ಇದರ ಮೂಲಕ ವ್ಯಕ್ತಿ ಬೆಳೆಯುತ್ತಾನೆ. ಉದಾ:ಅಕ್ಕಮಹದೇವಿ, ಮೀರಾಬಾಯಿ, ಕನಕದಾಸ, ಪುರಂದರದಾಸರು.
    3. ಕರ್ಮ ಯೋಗ: ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನ ಇದಕ್ಕೆ ಸೂಕ್ತ ಉದಾಹರಣೆಯಾಗಿದೆ. ಕೆಲಸವೊಂದೇ ಅವರಿಗೆ ಪ್ರಧಾನ ಆದ್ದರಿಂದಲೇ ತೃಪ್ತಿ ಎಂಬ ತತ್ವ ಸಿದ್ದಾಂತದ ಮೇಲೆ ನಂಬಿಕೆಯಿಟ್ಟು ನಡೆಯುವುದು. ಉದಾ: ಕ್ರಾಂತಿಕಾರಿ ಬಸವಣ್ಣ, ಸಿದ್ಧರಾಮ ಮುಂತಾದವರು.
    ರಾಜಯೋಗ : ಈ ರಾಜಯೋಗವು ಎಂಟು ಮೆಟ್ಟಿಲುಗಳನ್ನು ಹೊಂದಿದೆ. ಅದಕ್ಕಾಗಿ ಇದನ್ನು ಅಷ್ಠಾಂಗ ಯೋಗ ಎನ್ನುವರು. ಇಲ್ಲಿ ಎಂಟು ಮೆಟ್ಟಿನಲ್ಲಿರುವ ವಿಷಯದ ಜ್ಞಾನವನ್ನು ಹೊಂದಿ ಕಾರ್ಯರೂಪಕ್ಕೆ ತರುವುದರಿಂದ ವ್ಯಕ್ತಿಯ ವ್ಯಕ್ತಿತ್ವ ವೀಖಾಆಶಾಣವಾಗುತ್ತದೆ.
    1. ಯಮ
    2. ನಿಯಮ
    3. ಆಸನ
    4. ಪ್ರಾಣಯಾಮ
    5. ಪಥ್ಯಾಹಾರ
    6. ಧಾರಣ
    7. ಧ್ಯಾನ
    8. ಸಮಾಧಿ.
    ಯಮ:ಅಹಿಂಸೆ, ಸತ್ಯ, ಅಸ್ತೆಯ, ಬ್ರಹ್ಮಚರ್ಯ, ಅಸಂಗ್ರಹ ಎಂಬ ಯಮ ಪಂಚಕಗಳನ್ನು ಪಾಲಿಸುವುದರಿಂದ ಸಾಮಾಜಿಕ ವ್ಯಕ್ತಿತ್ವದ ಮೌಲ್ಯವನ್ನು ಬೆಳೆಸಿದಂತಾಗುತ್ತದೆ.
    ನಿಯಮ : ಇದು ಐದು ವೈಯಕ್ತಿಕ ಮೌಲ್ಯಗಳನ್ನು ಹೊಂದಿದೆ. ಶೌವ, ಸಂತೋಷ,ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನ.
    ಆಸನ : ಯೋಗದ ವ್ಯಾಯಾಮಗಳು.ಉದಾ : ಪದ್ಮಾಸನ, ವಜ್ರಾಸನ.
    ಪ್ರಾಣಾಯಾಮ: ದೇಹ ಮತ್ತು ಮನಸ್ಸನ್ನು ಒಂದುಗೂಡಿಸಲು ಕೊಂಡಿಯಂತೆ ಕಾರ್ಯನಿರ್ವಹಿಸುತ್ತದೆ. ಇದು ಒಂದು ಉಸಿರಾಟದ ಕ್ರಮವಾಗಿದೆ. ಇದು ಅನೇಕ ವಿವಿಧ ಉಸಿರಾಟಗಳನ್ನು ಹೊಂದಿದೆ.
    ಪ್ರತ್ಯಾಹಾರ: ಪಂಚೇಂದ್ರಿಯಗಳನ್ನು ಒಳಮುಖವಾಗಿ ಕೇಂದೀಕರಿಸಿ ಮನಸ್ಸನ್ನು ಗಮನಿಸುವ ಕ್ರಮವಾಗಿದೆ.
    ಧಾರಣ: ಮನಸ್ಸನ್ನು ಪ್ರಯತ್ನ ಪೂರ್ವಕವಾಗಿ ಒಂದೆಡೆ ಅಥವಾ ವಸ್ತುವಿನ ಮೇಲೆ ಕೇಂದ್ರೀಕರಿಸುವುದು.
    ಧ್ಯಾನ: ಒಂದು ವಸ್ತುವಿನ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದರೆ, ನಂತರ ಮನಸ್ಸು ನಿರಾಯಾಸವಾಗಿ ಆ ವಸ್ತುವಿನಲ್ಲೇ ನಿಲ್ಲುತ್ತದೆ.  ಆ ವಸ್ತುವಿನಲ್ಲೇ ಅಂತರ್ಗತವಾಗುತ್ತದೆ. ಆಗ ಆನಂದ ಉಂಟಾಗುತ್ತದೆ. ಈ ಸ್ಥಿತಿಯನ್ನು ಜ್ಞಾನ ಸ್ಥಿತಿ ಎನ್ನುವರು.
    ಸಮಾಧಿ: ಇದು ಎಂಟನೆ ಮೆಟ್ಟಿಲು ಧಾನದ ಮುಂದುವರೆದ ಭಾಗದ ಸ್ಥಿತಿ ಈ ಭಾಗದಲ್ಲಿ ವ್ಯಕ್ತಿ ವಸ್ತುವಿನಲ್ಲೇ ತಲ್ಲೀನನಾಗುತ್ತಾನೆ ಹಾಗೂ ಅಮಿತವಾದ ಆನಂದವನ್ನು ಹೊಂದುತ್ತಾನೆ.

    ಯೋಗದ ಫಲಪ್ರಾಪ್ತಿ ಮತ್ತು ಲಕ್ಷಣಗಳು

    ವಪೂಕೃಶತ್ವಂ ವದನೆ ಪ್ರಸನ್ನತಾ ನಾದಸ್ಪಟುತ್ವಂ ನಯನೇ ಸುನಿರ್ಮಲೇ
    ಆರೋಗತಾ ಬಿಂದು ಜಯ ಅಗ್ನಿದೀಪನಂ ನಾಡೀವಿಶುದ್ದಿ ಹಠಯೀಗ ಲಕ್ಷಣಮ್
    ಅರ್ಥ : ಶರೀರದಲ್ಲಿ ಹಗುರತೆ, ಮುಖದಲ್ಲಿ ಪ್ರಸನ್ನತೆ, ಧ್ವನಿಯಲ್ಲಿ ಸ್ಫುಟತೆ, ಕಣ್ಣುಗಳಲ್ಲಿ ಹೊಳಪು, ರೋಗಗಳ ನಾಶ ವಿರ್ಯಜಯ ಪೂರ್ಣ ಜೀರ್ಣಕ ಶಕ್ತಿ, ನಾಡಿ ಶುದ್ಧಿ ಇವೇ ಹಠಯೋಗ ಲಕ್ಷಣವಾಗಿದೆ.
    ಇಂತಹ ಅನೇಕ ಶ್ಲೋಕಗಳು ಯೋಗದ ಅವಶ್ಯಕತೆ ಮತ್ತು ಮಹತ್ವವನ್ನು ತಿಳಿಸುವಂತಹವುಗಳಾಗಿವೆ. ಯೋಗವನ್ನು ಮಾಡಲು ಮೊದಲು ಪಾಲಿಸಬೇಕಾದ ಕ್ರಮಬದ್ಧವಾದ ನಿಯಮಗಳು
    1. ಊಟವಾದ ಎರಡು ಗಂಟೆಯ ನಂತರ ಆಸನಗಳನ್ನು ಮಾಡುವುದು.
    2. ಬರಿ ನೆಲದಲ್ಲಿ ಮಾಡದೆ ಜುಮುಖಾನದಂತಹುಗಳನ್ನುನೆಲಕ್ಕೆ  ಹಾಸಿರಬೇಕು
    3. ಆಸನ ಮಾಡುವ ಸ್ಥಳ ಸ್ವಚ್ಛವಾಗಿ ನಿಶಬ್ಧವಾಗಿ ಪ್ರಶಾಂತತೆಯಿಂದ ಕೂಡಿರಬೇಕು. ಮೇಲೆ ಚಾವಣಿ ಇರಬೇಕಾದುದು ಅವಶ್ಯಕ.
    4. ವ್ಯಾಯಾಮ ಸಮಯದಲ್ಲಿ ಮಾತು ಕಡಿಮೆ ಮಾಡಿ ಆಸನಗಳಿಗೆ ತಕ್ಕಂತೆ ಉಸಿರಾಟದ ಮೇಲೆ ಗಮನಹರಿಸಬೇಕು .
    5. ಆಸನದ ಕ್ರಮವನ್ನು ಅನುಸರಿಸಿ ಆಸನಗಳನ್ನು ಮಾಡುವುದು.
    6. ಸೂರ್‍ಯ ಉದಯಿಸುವ ಮತ್ತು ಸೂರ್‍ಯಾಸ್ತದ ಮೊದಲು ಆಸನ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದು .
    7. ಬಿಗಿಯಾದ ಸಮವಸ್ತ್ರವನ್ನು ಹಾಕಿರಬಾರದು. ಆಸನಕ್ಕೆ ಅಡಚಣೆಯಾಗುವ ಆಭರಣಗಳನ್ನು ಹಾಗಿರಬಾರದು.
    8. ತಜ್ಞರುಗಳ ಪ್ರಕಾರ 8 ವರ್ಷ ಮೀರಿದ ಮಕ್ಕಳಿಗೆ ಯೋಗದ ಆಸನಗಳನ್ನು ಸರಳವಾಗಿ ಯೋಗ ಗುರುಗಳಿಂದ ಕಲಿಸಬೇಕು
    9. ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ  ವಿಶ್ರಾಂತಿ, ಧ್ವನಿ , ಓಂ.ಕಾರ ಹಾಗೂ ಕೆಲವೇ ಸುಲಭ ಆಸನಗಳಿವೆ.
    ಹುಷಾರಿಲ್ಲದಿದ್ದಾಗ ಮತ್ತು ಶಸ್ತ್ರ ಚಿಕಿತ್ಸೆಗೆ ಒಳಗಾದವರು ಯೋಗ ತಜ್ಞರೊಂದಿಗೆ ವಿಚಾರಿಸಿ ಆಸನಗಳನ್ನು ಮಾಡತಕ್ಕದ್ದು ಇತ್ಯಾದಿ ನಿಯಮಗಳನ್ನು ಯೋಗ ಗ್ರಂಥಗಳನ್ನು ಓದಿ ತಿಳಿದುಕೊಂಡು ಆಸನಗಳನ್ನು ಮಾಡತಕ್ಕದ್ದು.



    ವ್ಯಾಯಾಮಗಳು

    ಗ್ರೀಕ್ ಗಾದೆಯೊಂದು ಹೇಳುವಂತೆ Excerciese to the body, music to the soul ಅಂದರೆ ದೇಹಕ್ಕೆ ವ್ಯಾಯಾಮ ಆತ್ಮಕ್ಕೆ ಸಂಗೀತ ಮನುಷ್ಯನಿಗೆ ಬೇಕೆಂಬುದು ಸಾರ್ವಕಾಲಿಕ ಸತ್ಯವಾದುದು. ಆದ್ದರಿಂದ ಯೋಗ ಏರೋಬಿಕ್, ಕ್ಯಾಲಸ್ಥಾನಿಕ್, ಜಿಮ್ನಾಸ್ಟಿಕ್ ನಮ್ತಹ ವ್ಯಾಯಾಮದ ಮಂದಿರಗಳು ಪಟ್ಟಣ ಪ್ರದೇಶದ ಆರೋಗ್ಯ ಕೇಂದ್ರಗಳಾಗಿ ಆರ್ಥಿಕ ಲಾಭವನ್ನು ಪಡೆಯುವ ವ್ಯವಸ್ಥೆಯಾಗಿದೆ. ಇದಕ್ಕೆ ಸಂಗೀತವೂ ಹೊರತಾಗಿಲ್ಲ. ಸದೃಢವಾದ ದೇಹವನ್ನು ನಿರ್ಮಿಸಿ ಅದರಲ್ಲಿ ಸದೃಢ ಮನಸ್ಸನ್ನು ಸ್ಥಿರಗೊಳಿಸುವಲ್ಲಿ ಅನೇಕ ವ್ಯಾಯಾಮ ಪೂರಕವಾಗಿದ್ದು ಇದು ದೈಹಿಕ ಶಿಕ್ಷಣದ ಪ್ರಕಾರಗಳಲ್ಲಿ ಬಹಳ ಮುಖ್ಯವಾದದ್ದು.
    ಇವುಗಳನ್ನು ಅಭ್ಯಾಸಗೊಳಿಸುವ ದೃಷ್ಠಿಯಿಂದ ಹಾಗೂ ಅವುಗಳ ವಿಶೇಷತೆಯನ್ನು ಆದರಿಸಿ ಈ ಕೆಳಗಿನಂತೆ ವ್ಯಾಯಾಮಗಳನ್ನು ವಿಂಗಡಿಸಲಾಗಿದೆ.

    ಪದಕವಾಯಿತು

    ಕ್ರಮಬದ್ಧವಾದ ಪಾದಗಳ ಮತ್ತು ಕೈಗಳ ಚಲನೆಯಲ್ಲಿ ಪಾದದ ಚಲನೆಯನ್ನು ಮುಖ್ಯವಾಗಿ ತೆಗೆದುಕೊಳ್ಳುವುದರಿಂದ ಇದನ್ನು ಅಥವಾ FootDrill ಎಂದು ಹೇಳುವರು .
    ಉದಾ: ಮಾರ್ಚ್ ಫಾಸ್ಟ್ (ತೇಜ್ ಚಲ್) ಇಲ್ಲಿ ಕಾಲಿನ ಚಲನೆಯನ್ನು ಗಣನೆಗೆ ತೆಗೆದುಕೊಂಡು ಅಜ್ಞೆಗಳನ್ನು ಪ್ರತಿಬಾರಿ ಕಾಲುಗಳಿಗೆ ನೀಡುತ್ತಾ ಹೋಗಲಾಗುವುದು ಆದರೆ ಕೈಗಳು ನಡಿಗೆಯಲ್ಲಿ ಶಿಸ್ತು ಬದ್ಧವಾಗಿ ಚಲಿಸುವುದು ಕಡ್ಡಾಯವಾಗಿದೆ.
    ಪದಕವಾಯಿತು ದೈಹಿಕ ಶಿಕ್ಷಣದ ಗುರಿಯನ್ನು ಯಶಸ್ವಿಗೊಳಿಸಲು ಇರುವ ಪ್ರಮುಖವಾದ ಸಾಧನವಾಗಿದೆ. ಇವುಗಳಿಂದ ಶಾಲೆಯಲ್ಲಿ, ಕ್ರೀಡಾ ತರಬೇತಿಯಲ್ಲಿ ಆಟೋಟಗಳಲ್ಲಿ ಶಿಸ್ತು ತರಲು ಈ ಚಟುವಟಿಕೆಯನು ಮಾಡಿಸಲಾಗುವುದು.
    ಈ ಚಟುವಟಿಕಗಳು ಕ್ರೀಡೋತ್ಸವ, ರಾಷ್ಟ್ರೀಯ ಉತ್ಸವ, ಶಾಲಾ ಉತ್ಸವಗಳಲ್ಲಿ ಪ್ರದರ್ಶಿಸಲ್ಪಟ್ಟು ಜನರಿಗೆ ಮನರಂಜನೆ ಹಾಗೂ ಆಥಿತಿಗಳಿಗೆ  ಏಕಮೇಯವಾಗಿ ಗೌರವ ಸಲ್ಲಿಸುತ್ತದೆ. ಇದರಿಂದ ಮಕ್ಕಳಲ್ಲಿ ಸಹಿಷ್ಣತೆಯ ಗುಣದೊಂದಿಗೆ ಒಳ್ಳೆಯ ವ್ಯಾಯಾಮ ಸಿಗುತ್ತದೆ. ಇಂತಹ ಚಟುವಟಿಕೆಗಳು ದೇಶ ಪ್ರೇಮ ವಿನಯ ತ್ಯಾಗಗಳಿಗೆ ಸ್ಪೂರ್ತಿಯನ್ನು ತುಂಬುತ್ತದೆ.


    ಆಜ್ಞೆಗಳು 

    ದೈಹಿಕ ಶಿಕ್ಷಣ ಚಟುವಟಿಕೆ ನದೆಯಬೇಕಾದರೆ .ಅಜ್ಞೆಗಳು ಬಹಳ ಮುಖ್ಯವಾಗಿದೆ. ಅಜ್ಞೆಗಲೇ ಪದಕವಾಯಿಗೆ ಭೂಷಣ ಪ್ರೀಯವಾಗಿದೆ. ಈ ಆಜ್ಞೆಗಳನ್ನು (ಕೊಡುವ)ಉಪಯೋಗಿಸು ಕ್ರಮವನ್ನು ಶಿಕ್ಷಕರು ಹೊಂದಬೇಕಾಗುತ್ತದೆ.
    ಆಜ್ಞೆಗಳಲ್ಲಿ ಎರಡು ವಿಧ
    1. ಪ್ರತಿ ಕ್ರಿಯಾತ್ಮಕ ಆಜ್ಞೆ
    2. ತಾಳ ಬದ್ಧ ಆಜ್ಞೆ
    ಪ್ರತಿಯೊಂದು ಆಜ್ಞೆಯಲ್ಲೂ ಈ ಕೆಳಕಂಡ ಭಾಗಗಳಿರುತ್ತ್ದೆ.
    ಸಂಬೋಧನೆ
    ವಿವರಣಾತ್ಮಕ ಎಚ್ಚರಿಕೆ(ಚೇತನ ಶಬ್ದ)
    ತಡೆ
    ನಿರ್ವಹಣೆ(ಶಾಸನಬ್ದ್ಧ ಶಬ್ದ)
    ಈ ಆಜ್ಞೆಗಳನ್ನು ಉಪಯೋಗಿಸುವಾಗ ಯಾರಿಗೆ ಎನ್ನುವುದು ಸ್ಪಷ್ಟವಾಗಿ ಅದನ್ನು ಪಾಲಿಸುವ ಮೂನ್ಸೂಚನೆ ಕೊಟ್ಟಂತಾಗುತ್ತದೆ.ಈ ಭಾಗ ಗಟ್ಟಿಯಾಗಿ ಹೇಲಿ ಅವರ ಗಮನ ಸೆಳೆಯಬೇಕು. ಈ ಭಾಗವು ಯಾವ ಆಜ್ಞೆ ಬರುವುದಿದೆ ಎಂಬುವುದರ ಬಗ್ಗೆ ಮುನ್ಸುಚನೆ ಕೊಡುತ್ತದೆ. ಈ ಭಾಗವನ್ನು ನಿಧಾನವಾಗಿ ಧ್ವನಿ ಎಳೆದು ಹೇಳಬೇಕು. ಇಲ್ಲಿ ಯಾವ ಆಜ್ಞೆ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಲು ಹಾಗೂ ಮುಂದೆ ಏನು ಮಾಡಬೇಕು ಎಂದು ಸಿದ್ದತೆ ಯಾಗಲು ಸ್ವಲ್ಪ ಮೌನವಿರುತ್ತದೆ. ಆಜ್ಞೆ ಕೇಳಿದ ತಕ್ಷಣ ಎಲ್ಲರೂ ಏಕಕಾಲದಲ್ಲಿ ಹೇಳಿದ ಚಲನೆಯನ್ನು ಮಾಡುವರು.


    ಉದಾ: froup class ಪೆರೇಡ್ Atten stand at ದಹಿನೇ ತೇಜ್
    ತಿಒನ್ ಎಅಸೆ ಮೂಡ್ ಚಲ್

    ಪ್ರತಿಕ್ರಿಯಾತ್ಮಕ ಆಜ್ಞೆ

    ಇದರಲ್ಲಿ ನಾಲ್ಕು ಭಾಗಗಳಿವೆ.
    ಸಂಬೋಧನೆ
    ವಿವರಣಾತ್ಮಕ ಎಚ್ಚರಿಕೆ(ಚೇತನ ಶಬ್ದ)
    ತಡೆ
    ನಿರ್ವಹಣೆ(ಶಾಸನಬ್ದ್ಧ ಶಬ್ದ)
    1)ಸಂಬೋಧನೆ   2)ವಿವರಣಾತ್ಮಕ ಎಚ್ಚರಿಕೆ(ಚೇತನ ಶಬ್ದ)   3)ತಡೆ   4) ನಿರ್ವಹಣೆ(ಶಾಸನಬ್ದ್ಧ ಶಬ್ದ)
    ಪೆರೇಡ್ ಸಾಮ್ನೇ
       ಸಲ್ಯುಟ್
    ಜಾಥಾ ಸನ್ ಮಾನ್ ಸಲಾಮಿಯಾಮ್
       ದೇ
    ಸೆಕ್ಷನ್ ವಿಶ್
       ರಾಮ್
    ಕ್ಲಾಸ್ ಸಾವ್
       ಧಾನ್
    ಪೆರೇಡ್ ದೌಡ್ಕೇ
        ಚಲ್

    ತಾಳ ಬದ್ಧ ಆಜ್ಞೆ (Rhythmic Command)

    ನಿಲ್ಲಿಸದೆ ತಾಳಾ ಬದ್ಧವಾಗಿ ಚಟುವತೀಕೆ ಮಾಡಲು ಈ ಆಜ್ಞೆಗಳನ್ನು ಉಪಯೋಗಿಸುವ ರು, ಉದಾ : ಲೆಜೇಮ್, ಡಂಬಲ್ಸ್, ಮಾಸ್.ಪಿ.ಟಿ. ವ್ಯಾಯಾಮಗಳಲ್ಲಿ ಉಪಯೋಗಿಸಲಾಗುವುದು.
    ಇದರಲ್ಲಿ ಆರು ಭಾಗಗಳಾಗಿ ವಿಂಗಡಿಸಬಹುದು.
    ಸಂಬೋಧನೆ
    ವಿವರಣಾತ್ಮಕ
    ಎಚ್ಚರಿಕೆ
    ತಡೆ
    ನಿರ್ವಹಣೆ ಅಂಕಿ ಎಣಿಸುವುದು 
    ಪೆರೇಡ್
    ವ್ಯಾಯಾಮ ಸಂಖ್ಯೆ ದೋ
    ಕಂಟಿನ್ಯೂಸ್ಲಿ
    -
    ಬಿಗಿನ್             1,2,3,4,5,6,7,8,
    8,7,6,5,4,3 ದಸರಾ (2)
     ಬದಲ್ (1)

    ಕ್ಲಾಸ್
    ವ್ಯಾಯಾಮ ಸಂಖ್ಯೆ ಚಾರ್
    ಸಮಯಕ್ಕೆ ಅಂದಾಜ್/ಬೈ ಕೌಂಟ್

    ಸುರೂಕರ್ 1.2.3.4.5.6.7.8.8.
    7.6.5.4.3 ರೀಪಿಟ್ (2) ಎಗೈನ್(1)

     


    ***********ಮಾಹಿತಿ ಕೃಪೆ: ವಿಕಾಸ್ ಪೀಡಿಯಾ***********

    ಪ್ರಕಾರಗಳು, ಆಟಗಳು ಇತ್ಯಾದಿ...

  • ಪ್ರಕಾರಗಳು
  • ಆಟಗಳು
  • ಮೇಲಾಟಗಳು
  • ಅಥ್ಲೆಟಿಕ್ಸ್

  • ಪ್ರಕಾರಗಳು

    ದೈಹಿಕ ಶಿಕ್ಷಣ ಅನೇಕ ಪ್ರಕಾರದ ವಿವಿಧ ಸ್ಫರ್ಧಾತ್ಮಕವಾದ ಚಟುವಟಿಕೆಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಟ್ಟುಕೊಂಡಿದೆ. ಅವುಗಳೆಂದರೆ:
    1. ಆಟೋಟಗಳು
    2. ಮನರಂಜನಾ ಆಟಗಳು
    3. ವ್ಯಾಯಾಮಗಳು
    4. ಪದ್ ಕವಾಯಿತ್
    5. ಯೋಗ
    6. ನಾಟ್ಯಗಳು
    7. ಕಸರತ್ತುಗಳು
    8. ಸಾಹಸದ ಕ್ರೀಡೆಗಳು
    9. ಸ್ಲೈಕ್ಲಿಂಗ್
    10. ಒಂಳಾಗಣ ಬೌದ್ಧಿಕ ಆಟಗಳು
    11. ಈಜು
    12. ಜೇಮ್ನಾಸ್ಟಿಕ್ ಕ್ರೀಡೆಗಳು
    13. ಪರ್ವತಾರೋಹಣ
    14. ಸ್ಕೇಟಿಂಗ್
    15. ಬಿಲ್ಲುಗಾರಿಕೆ ಇತ್ಯಾದಿ

    ದೈಹಿಕ ಶಿಕ್ಷಣ ಬೋಧನಾ ವಿಷಯಗಳು ಮತ್ತು ರೂಢಿಗಳನ್ನು ಹೊಂದಿದೆ

    1. ಆರೋಗ್ಯ ಶಿಕ್ಷಣ
    2. ಮೌಲ್ಯ ಶಿಕ್ಷಣ
    3. ಪ್ರಥಮ ಚಿಕಿತ್ಸೆ
    4. ಸುರಕ್ಷತಾ ಶಿಕ್ಷಣ
    5. ಆರೋಗ್ಯ ರೂಢಿಗಳು (ಜೀವನದಲ್ಲಿ ಶಿಸ್ತು)
    6. ಸೇವೆ ಮತ್ತು ಸಂರಕ್ಷಣೆ
    7. ಶರೀರ ರಚನೆ ಮತ್ತು ಚಲನಾಶಾಸ್ತ್ರ
    8. ಯೋಗ ಶಿಕ್ಷಣ
    9. ದೈಹಿಕ ಶಿಕ್ಷಣ (ಕ್ರೀಡೆ)





    ಆಟಗಳು

    ಮನುಷ್ಯನ ಮೂಲ ಪ್ರವೃತ್ತಿಗಳಲ್ಲಿ ಆಟವು ಒಂದು ಆಟಗಳು ವ್ಯಕ್ತಿಗೆ ಸ್ವಾತಂತ್ರ್ಯವನ್ನು ಮತ್ತು ಸಂತೋಷವನ್ನು ನೀಡುತ್ತದೆ. ಎಂ.ಸಿ. ಡಾಗಲ್ ರವರ ಪ್ರಕಾರ ಆಟಗಳು ವ್ಯಕ್ತಿಯ ಬೆಳವಣಿಗೆ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಅತಿ ಮುಖ್ಯ ...ಆಟವು ಮನುಷ್ಯನಲ್ಲಿ ಅಷ್ಟೆಯಲ್ಲದೆ ಇತರ ಪ್ರಾಣಿಗಳಲ್ಲಿಯೂ ಕೂಡ ಕಾಣಿಸುವ ಕ್ರಿಯೆಯಾಗಿದೆ. ಆಟಗಳು ಕೇವಲ ದೇಹದ ಹೊರ ಭಾಗಗಳಿಂದ ಪ್ರಕಟಿಸುವ ಭಾವನೆಗಳಾಗಿರದೆ ಅದು ನಮ್ಮ ಅಂತರಾಳದಲ್ಲಿ ಹೊರಡುವ ಭಾವನೆಯಾಗಿದೆ. ಆಟಗಳೂ ತಕ್ಷಣಾ ಸಂತೋಷವನ್ನು ಕೊಡುವಂತಹ ಚಟುವಟಿಕೆಗಳಾಗಿದೆ. ಆದ್ದರಿಂದ ಮಕ್ಕಳು ಹೆಚ್ಚಾಗಿ ಆಟಗಳಲ್ಲಿ ಭಾಗವಹಿಸುತ್ತಾರೆ. ಹಾಗೂ ಜೀವನ ಕೌಶಲ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಆಟಗಳೇ ಮಗುವಿಗೆ ಮೊದಲ ಮೆಟ್ಟಿಲಾಗಿದೆ. ಆಟಗಳು ಎಲ್ಲಾ ವ್ಯಕ್ತಿಗಳ ಮಾನಸಿಕ ಬಿಗಿತನವನ್ನು ಹೋಗಲಾಡಿಸಿ ಸಂತೋಷವನ್ನು ನೀಡುತ್ತದ್ದೆ.
    ಅನೇಕ ಶಿಕ್ಷಣ ತಜ್ಞರುಗಳು ಆಟಗಳು (ದೈಹಿಕ ಶಿಕ್ಷಣ) ಶಿಕ್ಷಣದ ಪ್ರಕ್ರ್ತಿಯೆಯಲ್ಲಿ ಒಂದು ಮಹಾತ್ವದ ಭಾಗ. ಶಿಕ್ಷಣದ ಅವಿಭಾಜ್ಯ ಅಂಗ. ಆದ್ದರಿಂದ ಇದನ್ನು ಕಡ್ಡಾಯ ಶಿಕ್ಷಣವಾಗಿರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.
    ಆಟಗಳು ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಪ್ರಬಲರನ್ನಾಗಿಸುವಲ್ಲಿ ಮಹತ್ವದಾಗಿದೆ. ಆಟಗಳು ದೇಹಕ್ಕೆ ಬಳಶಃಟು ವ್ಯಾಯಮವನ್ನು ಕೊಡುತ್ತದೆ. ಅದುದರಿಂದ ಮಾಂಸಖಂಡಗಳು ಮತ್ತು ನರಗಳು ಶಕ್ತಿಯುತವಾಗಿ ಬೆಳೆದು ಒಂದಕ್ಕೊಂದು ಹೊಂದಾಣಿಕೆಯಿಂದ ಕೆಲಸ ಮಾಡುತ್ತದೆ.
    ಆಟಗಳು ವ್ಯಕ್ತಿಗೆ ಸಮಸ್ಯಾತ್ಮಕ ಸನ್ನಿವೇಶಗಳನ್ನು ಒದಗಿಸಿ ಅವಿಗಳ ಪರಿಹಾರಕ್ಕಾಗಿ ಜಾಣತನದ ನಿರ್ಣಯವನ್ನು ಕೈಗೊಳ್ಳುವಂತೆ ಪ್ರಚೋದಿಸಿ, ಬುದ್ಧಿಶಕ್ತಿಯ ಬೆಳೆವಣಿಗೆ ಬಹಳಷ್ಟು ಸಹಾಯಕವಾಗಿದೆ.
    ಉದಾ:ಕಬಡ್ಡಿ, ಖೋ ಖೋ, ವಾಲೀಬಾಲ್, ಫುಟ್ ಬಾಲ್, ಹಾಕಿ, ಥ್ರೋಬಾಲ್, ಬ್ಯಾಸ್ಕೆಟ್ ಬಾಲ್,

    ದೈಹಿಕ ಶಿಕ್ಷಣದಲ್ಲಿ ಆಟೋಟಗಳು

    “ಆಟೋಟಗಳೆಂದರೆ ಮನರಂಜನೆಯನ್ನು ನೀಡಿ ಸ್ಪರ್ಧಾತ್ಮಕ ಗುಣಗಳನ್ನು ಹೊಂದಿದ್ದು ಪರಿಶುದ್ಧವಾದ ನೀತಿ ನಿಯಮಗಳನ್ನು ಹೊಂದಿ ವಿಹೇತರನ್ನು ನಿರ್ಣಯಿಸಲು ಸುಲಭವಾಗುವ ದೈಹಿಕ ಚಟುವಟಿಕೆಗಳನ್ನು ಆಟೋಟಗಳೆನ್ನುವರು.


    ಮೇಲಾಟಗಳು

    ಈ ಮೇಲಾಟಗಳು ವ್ಯಯಕ್ತಿಕ ಸ್ಪರ್ಧೆಯನ್ನು ಹೊಂದಿರುವುಗಳು ಇವು ಹೊರಾಂಗಣದಲ್ಲಿಯೇ ನಡೆಯುವಂತಹದ್ದೂ ರಿಲೇ ಸ್ಪರ್ಧೆಯೊಂದು ಮಾತ್ರ ಮೇಲಾಟದಲ್ಲಿರುವ ಗುಂಪಿನ ಓಟವು ಸಹ ಆಗಿದೆ.
    ಮೇಲಾಟವು ಅತಿವೇಗ, ಅತಿ ಎತ್ತರ, ಅತಿದೂರ ಎಂಬ ಮೂರು ತತ್ವಗಳನ್ನು ಹೊಂದಿದೆ. ಈ ತತ್ವಗಳ ಆಧಾರದ ಮೇಲೆ ಮೇಲಾಟಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ.

    ಗುಡ್ಡುಗಾಡು ಓಟ(CROSS CONTRY)

    ಗುಡ್ಡಾಗಾಡು ಓಟ ಇದೊಂದು ವಿಶೇಷ ತರಬೇತಿ ವಿಧಾನ ಹಾಗೂ ಸ್ಪರ್ಧೆ ಚಟುವಟಿಕೆಗಳಾಗಿದೆ. ಇದನ್ನು ಮಾಮೂಲಿ ಟ್ರಾಕಿನಲ್ಲಿ ಓಡಿಸದೆ ಹೊರಗೆ ಬಯಲು ಪ್ರದೇಶದ ಹುಲ್ಲುಗಾವಲುರೆಂಟೆ ಹೊಡೆದ ಹೊಂಟೆ ಹಳ್:ಳ ದಿನ್ನೆಗಳು ಸೇರಿರುತ್ತದೆ. ಮೊದಲು ೧೫೦ ಮೀಟರ್ ವರೆಗೆ ಯಾವುದೇ ಆಡವಣೆಯಾಗದಿರುವ ರೀತಿ ವ್ಯವಸ್ಥೆ ಇರುತ್ತದೆ.
    ನಂತರ ಹಾದಿಯಲ್ಲಿ ಪ್ರತಿ ೧೨೦ ಮೀಟರ್ ಗೆ ಒಮ್ಮೆ ಎಡಗಡೆ ಕೆಂಪು ಬಾವುಟ ಮತ್ತು ಬಲಗಡೆ ಬಿಳಿಯ ಬಾವುಟ ನೆಟ್ಟಿರುತ್ತಾರೆ. ಓಟದ ಹಾದಿ ಯಾವುದೇ ಗಂಡಾಂತಕಾರಿ ಯಾಗದಿರುವ ರೀತಿ ವ್ಯವಸ್ಥೆ ಮಾಡಿರುತ್ತದೆ.
    ಶಾಲಾ ಮಕ್ಕಳಿಗೆ ಈ ವ್ಯವಸ್ಥೆ ಇಲ್ಲದಿರುವುದರಿಂದ ಕೆಲವೊಮ್ಮೆ ರಸ್ತೆ ಅಥವಾ ಓಟದ ಮೈದಾನಗಳನ್ನೆ ಉಪಯೋಗಿಸಿ ಸ್ಪರ್ಧೆ ನಡೆಸುವುದುಂಟು. ಜ್ಯೂನಿಯರ್‍ಸಗೆ ೨೦ರಿಂದ ೧೦ ಕಿ.ಮೀ. ಸಬ್ ಜ್ಯೂನಿಯರ್‍ಸಗೆ ೨ ರಿಂದ ೫ ಕಿ.ಮೀ. ಹೆಂಗಸರಿಗೆ ೨ ರಿಂದ ೫ ಕಿ.ಮೀ ದೂರವುರುತ್ತದೆ. ಗೆದ್ದವರಿಗೆ ಸಾಮಾನ್ಯವಾಗಿ ೫ ರಿಂದ ೬ ಜನರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನನೀಡುವ ಪದ್ಧತಿ ಇದೆ ಹಾಗೂ ತಂಡಗಳಿಂದ ಭಾಗವಹಿ9ಸಿದರೆ ತಂಡದ ಬಹುಮಾನ ಸಹ ಸಿಗುತ್ತದೆ. ೧ ರಿಂದ ೪ ನೇ ತರಗತಿ ವಿದ್ಯಾರ್ಥಿಗಳಿಗೆ ಈ ಓಟ ಇರುವುದಿಲ್ಲ.

    ಮೆರೆಥಾನ್ ಓಟ

    ಮೆರಥಾನ್ ಸ್ಪರ್ಧೆಯು ಇತ್ತೀಚಿನ ದಿನಗಳಲ್ಲಿ ವಿಶೇಷ ಪ್ರತಿಷ್ಠೆಯ ಸ್ಪರ್ಧೆಯಾಗಿದೆ. ಇದರ ದೂರ ೪೨ ಸಾವಿರದ ೧೯೫ ಮೀಟರ್‍ಸ್ (೨೬ ಮೈಲಿ ೩೮೫ ಯಾಡ್)ಅನ್ನು ಹೊಂದಿದೆ.
    ಈ ಸ್ಪರ್ಧೆಯನ್ನು ರಸ್ತೆ ಬದಿಯಲ್ಲಿ ಪುಟ್ ಪಾತ್ ನಲ್ಲಿ ಏರ್ಪಡಿಸಿರುತ್ತಾರೆ. ಇದರಲ್ಲಿ ಭಾಗವಹಿಸುವವರು ಮೊದಲೇ ಆರೋಗ್ಯ ತಪಸಣೆಗೆ ಒಳಪಟ್ಟು ಅದರ ನೀತಿ ನಿಯಮಗಳಿಗೆ ಬದ್ಧರಾಗಿರಬೇಕು.
    ಸಂಘಟನಕಾರರು ಓಟಾಗಾರರಿಗೆ ಪ್ರತಿ ೫ ಕಿ.ಮೀ ದೂರದಲ್ಲಿ ಒಂದು ಉಪಹಾರ ಕೇಂದ್ರವನ್ನು ತೆರೆದಿರುತ್ತಾರೆ. ಓಟಾಗಾರರು ಮೊದಲೇ ತಮ್ಮ ಉಪಹಾರದ ಬಗ್ಗೆ ಮಾಹಿತಿ ನೀಡಿರುವಂತೆ ಸುಲಭವಾಗಿ ಆಹಾರ ಪಡೆದು ತಮ್ಮ ಓಟವನ್ನು ಮುಂದುವರೆಸುವರು.ಇದು ೧ ರಿಂದ ೪ ನೇ ತರಗತಿ ಮಕ್ಕಳಿಗೆ ಈ ಓಟ ಇರುವುದಿಲ್ಲ.
    ಇದರ ಹೆಸರೇ ಹೇಳುವಂತೆ ಇದರ ಮುಖ್ಯ ಉದ್ದೇಶವು ಸಹ ಮನರಂಜನೆಯಾಗಿದೆ. ಇದು ಬಹಳ ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಆದರೆ ದೈಹಿಕ ಶಿಕ್ಷಣ ಮತ್ತು ಶಿಕ್ಷಣದ ಮೂಲ ಉದ್ದೇಶವನ್ನು ಈಡೇರಿಸುವ ಆಟಗಳನ್ನು ವಿಂಗಡಿಸಿ ಅವುಗಳ ಅನುಕೂಲವನ್ನು ಅರಿತು ಇಲ್ಲಿ ಜೋಡಿಸಲಾಗಿದೆ.
    ಇವು ಆಟದ ಪಾಠದ ಮೂಲ ವಸ್ತುವಾಗಿದೆ. ದೈಹಿಕ ಶಿಕ್ಷಣದಲ್ಲಿ ಇವುಗಳನ್ನು ಕಿರು ಆಟಗಳು ಮತ್ತು ಮುಖ್ಯ ಆಟಗಳಿಗೆ ಪೂರಕ ಆಟಗಳೆಂದು ಕರೆಯುತ್ತೇವೆ. ಇವುಗಳನ್ನು ತರಬೇತಿ ಹೊಂದಿದ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಸಹ ಶಿಕ್ಷಕರುಗಳೂ ಸಹ ಇದರ ಬಗ್ಗೆ ಸ್ವಲ್ಪ ತರಬೇತಿಯ ನಂತರ ಸರಳವಾಗಿ ಆಡಿಸಿ ಮಕ್ಕಳಲ್ಲಿ ಮನರಂಜನೆ, ಶಿಸ್ತು ಮತ್ತು ದೈಹಿಕ ವ್ಯಾಯಾಮಗಳನ್ನುಂಟು ಮಾಡುವಲ್ಲಿ ಯಶಸ್ವಿಯಾಗಬಹುದಾಗಿದೆ.
    ಇಂತಹ ಸಣ್ಣ ಆಟಗಳು ದೈಹಿಕ ಶಿಕ್ಷಣಕ್ಕೆಷ್ಟೆಯಲ್ಲದೆ ಪಠ್ಯಕ್ಕೆ ಪೂರಕವಾದ ಅಂಶಗಳನ್ನು ನೀಡುವಲ್ಲಿ ಇವುಗಳ ಪ್ರಾತ್ರ ಬಹಳಷ್ಟಿರುವುದರಿಂದಲೇ ಆಟಗಳ ಜೊತೆಯಲ್ಲಿ ಕಲಿಕೆಯಾಗಬೇಕೆಂಬ ಉದ್ದೇಶದಿಂದಲೂ ಸಹ ಇವುಗಳನ್ನು ೧ ರಿಂದ ೪ ನೇ ತರಗತಿ ಮಕ್ಕಳಿಗೆ ಪಠ್ಯದ ರೂಪದಲ್ಲಿ ಹೊರತರಲು ಪ್ರಯತ್ನಿಸಿದೆ.
    ಇಂತಹ ಆಟಗಳನ್ನು ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಠ್ಯದೊಂದಿಗೆ ಬೋಧಿಸುವ ವ್ಯವಸ್ಥೆಯನ್ನು ಪ್ರಸಿದ್ಧ ಶೀಕ್ಷಣ ತಜ್ಞರುಗಳಾದ ಶ್ರೀ ಪ್ರೋಬೆಲ್ಲನು ಕಿಂಡರ್ ಗಾರ್ಡನ್ ಶಿಕ್ಷಣ ಪದ್ಧತಿಯಲ್ಲಿ ಹಾಗೂ ಮಾಂಟಸರಿ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಲಾಗಿತ್ತು. ಇಂತೆಲ್ಲಾ ಮಹತ್ವ ಉಳ್ಳದ್ದಾಗಿರುವುದಿಂದಲೇ ಇದರ ಬೋಧನೆಗೆಂದು ಶಾಲಾ ವೇಳಾಪಟ್ಟಿಯಲ್ಲಿ ವೇಳೆಯನ್ನು (ಅವಧಿಗಳನ್ನು) ಮೀಸಲಿಟ್ಟಿರುವುದನ್ನು ನೋಡುತ್ತೇವೆ. ಕಿರು ಆಟಗಳಿಂದ ಮಕ್ಕಳಲ್ಲಿ ಬೆಳೆಯುವ ಒಳ್ಳೆಯ ಗುಣಗಳು ಮತ್ತು ಪ್ರಯೋಜನ ದೈಹಿಕವಾಗಿಒ ದೇಹಕ್ಕೆ ಶಕ್ತಿ, ಬಲ, ಕಷ್ಟಸಹಿಷ್ಣುತೆ, ನರಸ್ನಾಯು ಹೊಂದಾಣಿಕೆ, ವೇಗ ಮುಂತಾದ ಗುಣಗಳು ಬೆಳೆಯುತ್ತದೆ.
    ಮಾನಸಿಕವಾಗಿ, ಏಕಾಗ್ರತೆ ಸಂಕಲ್ಪ ಶಕ್ತಿ, ಪ್ತಶಾಂತತೆ ಉಂಟಾಗುತ್ತದೆ.
    ಬೌದ್ಧಿಕವಾಗಿ, ತರ್ಕಶಕ್ತಿ ನಾಯಕತ್ವದ ಗುಣ , ತೀರ್ಮಾನ ಕೈಗೊಳ್ಳುವ ಶಕ್ತಿಬರುತ್ತದೆ.
    ಭಾವನಾತ್ಮಕವಾಗಿ, ಪ್ರತಿ,ಸಹಕಾರ, ಸಹೋದರತ್ವ, ನಂಬಿಕೆ ತ್ಯಾಗ ಸ್ನೇಹ,ಸಹನೆ, ವಿನಯದಂತಹ ಗುಣಗಳು ಬೆಳೆಯುತ್ತದೆ.
    ಸಾಮಜಿಕವಾಗಿ, ಸಾಂಗಿಕ ಭಾವನೆ,ಭಾತೃತ್ವ, ಸಹೋದರತ್ವದಂತಹ ಸಾಮಾಜಿಕ ಗುಣಗಳು ಬೆಳೆಯುತ್ತದೆ.
    ನೈತಿಕವಾಗಿ ಕರ್ತವ್ಯ ಪ್ರಜ್ಞೆ, ಪರಿಶ್ರಮ, ಬದ್ಧತೆ, ಪ್ರಮಾಣಿಕತೆ, ಕೃತಜ್ಞತಾಭಾವ, ಸಮಯ ಪ್ರಜ್ಞೆ, ಗೌರವ,ಅತಿಥ್ಯ, ಸರಳತೆ ಸ್ವಾವಲಂಬನೆ, ಸೌಂದರ್ಯೋಪಾಸನೆ, ದಿನಚರಿ, ಉತ್ತಮ ಹವ್ಯಾಸಗಳು ಬೆಳೆಯುತ್ತದೆ ಮತ್ತು ಸಮಾಜದಲ್ಲಿ ಸತ್ಪ್ರಜೆಯಾಗುವ ಗುಣಗಳು ಬೆಳೆಯುತ್ತದೆ.



    ಅಥ್ಲೆಟಿಕ್ಸ್


    ಶಾರೀರಿಕ ಚಟುವಟಿಕೆಗಳಾದ ನಡಿಗೆ, ಓಟ, ಎಸೆತ ಮತ್ತು ನೆಗೆತ ಮಾನವನ ಜೀವನದೊಂದಿಗೆ ಹಾಸುಹೊಕ್ಕಾಗಿ ಉಳಿದುಕೊಂಡುಬಂದಿವೆ. ಆದಿ ಕಾಲದಲ್ಲಿ ಜೀವನಾಧಾರವೆನಿಸಿದ್ದ ಇವುಗಳು ಮುಂದಿನ ಕಾಲ ಘಟ್ಟಗಳಲ್ಲಿ ಸಾಂಘಿಕ ಜೀವನಕ್ಕೆ, ನಂತರ ಸಮಾಜ, ರಾಜ್ಯ-ರಾಷ್ಟ್ರಗಳ ನಿರ್ಮಾಣ ಮತ್ತು ನಿರ್ವಹಣೆಗೆ ನೆರವಾಗಿವೆ.
    ಐತಿಹಾಸಿಕ ಕಾಲದಲ್ಲಿ ಶ್ರೇಷ್ಠ ಮಟ್ಟದ ಶಾರೀರಿಕ ಸಾಮಥ್ರ್ಯವು ಅತ್ಯವಶ್ಯಕವೆನಿಸಿದ್ದು, ಕಠಿಣ ತೆರನಾದ ಶಾರೀರಿಕ ಚಟುವಟಿಕೆಗಳು ಅಂದು ಗೌರವಾದರಗಳಿಗೆ ಪಾತ್ರವಾಗಿದ್ದವು. ವಿಜ್ಞಾನ- ತಂತ್ರಜ್ಞಾನಗಳ ಬೆಳವಣಿಗೆಗಳಿದಾಗ ಪ್ರಸ್ತುತ ಕಾಲದಲ್ಲಿ ಜನರು ಶ್ರಮದಾಯಕ ಶಾರೀರಿಕ ಚಟುವಟಿಕೆಗಳಿಂದ ಬಹುತೇಕ ವಂಚಿತರಾಗಿರುವುದರಿಂದ ತತ್ಫಲವಾದ ಸ್ವಾಸ್ಥ್ಯ ಸಂಬಂಧಿ ಉಪಾದಿಗಳು ಜನರನ್ನು ಕಾಡದಂತೆ ಎಚ್ಚರಿಕೆವಹಿಸಲು ಹಾಗೂ  ಬಾಧಿತರಿಗೆ ಪರಿಹಾರ ಒದಗಿಸಲು ಶಾರೀರಿಕ ಚಟುವಟಿಕೆಗಳು ಇಂದು ಅಗತ್ಯವೆನಿಸಿವೆ.
    ಇಂತಹ ಅಮ್ಯೂಲ್ಯವಾದ ಶಾರೀರಿಕ ಚಟುವಟಿಕೆಗಳನ್ನು ಮಾನವನ ಹಿತದೃಷ್ಟಿಯಿಂದ ಚಿರಂತನವಾಗಿ ಉಳಿಸಿಕೊಂಡು ಹೋಗುವಂತಾಗಲು ದಾರ್ಶನಿಕರು ಅವುಗಳಿಗೆ ಸ್ಪರ್ಧೆಗಳ ರೂಪಕೊಟ್ಟು ಕ್ರೀಡೆಗಳನ್ನಾಗಿ ಪರಿವರ್ತಿಸಿದ್ದಾರೆ.
    ಇವುಗಳಲ್ಲಿ “ಅಥ್ಲೆಟಿಕ್ಸ್” ಅಥವಾ ಬಹಳ ಸ್ಫುಟವಾಗಿ “ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪೋಟ್ರ್ಸ್” ಎಂಬುದು ಕ್ರೀಡೆಗಳಲ್ಲಿಯೇ ಮಾತೃಸದೃಶವಾದದ್ದು. ಶಾರೀರಿಕ ಸಾಮಥ್ರ್ಯ ಬೆಳೆಸಿ-ಉಳಿಸಿಕೊಂಡು ಹೋಗಲು ಮತ್ತು ಆರೋಗ್ಯ ಕಾಪಾಡಿಕೊಂಡು ಹೋಗಲು ಮಾತ್ರವಲ್ಲದೆ ಜೀವನ ಮೌಲ್ಯಗಳನ್ನು ಅರಿತು ನಡೆಯಲು, ಮಾನ-ಸನ್ಮಾನಗಳಿಸಿಕೊಳ್ಳಲು, ರಾಷ್ಟ್ರಗೌರವ ವರ್ಧಿಸಲು, ಸಮಾಜದಲ್ಲಿ ಏಕತೆ-ಐಕ್ಯತೆ ಆವಿರ್ಭವಿಸಲು ಸಹ ಅಥ್ಲೆಟಿಕ್ಸ್ ಕ್ರೀಡೆ ಬಹುವಾಗಿ ನೆರವಾಗುತ್ತದೆ.
    ವಿಶ್ವದಾದ್ಯಂತ ಹಲವಾರು ಕ್ರೀಡಗಳು ಪ್ರಚಲಿತವಿದ್ದು, ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ತೆರನಾದ ಕ್ರೀಡಾ ಚಟುವಟಿಕೆಗಳು ಜನಮನ್ನಣೆಗಳಿಸಿವೆಯಾದರೂ, ಅತಿ ಪುರಾತನವಾದ “ಆಥ್ಲೆಟಿಕ್ಸ್ ಕ್ರೀಡೆ” ಸರ್ವೇ ಸಾಮಾನ್ಯವಾಗಿ ಸರ್ವ ಜನಾಂಗದ ಸಂಪರ್ಕದಲ್ಲಿದೆ. ಮಾನವನ ಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಶಾರೀರಿಕ ಚಟುವಟಿಕೆಗಳನ್ನು ಅಪ್ಯಾಯಮಾನವಾದ ಸ್ಪರ್ಧಾತ್ಮಕ ಕ್ರೀಡೆಗಳನ್ನಾಗಿ ರೂಪಾಂತರಿಸಿದುದರ ಗರಿಮೆ ಪುರಾತನ ಗ್ರೀಕರಿಗೆ ಸಲ್ಲುತ್ತದೆ.
    ಭಾರತ ದೇಶದಲ್ಲಿ ಪರಂಪರಾನುಗತವಾಗಿ ಪುರಾಣ ಪುನ್ಯಪುರುಷರ ಹೆಸರಿನಲ್ಲಿ ವಿವಿಧ ಹಬ್ಬಗಳನ್ನು ಆಚರಿಸಿದಂತೆಯೇ ಪುರಾತನ ಗ್ರೀಕರೂ ಕೂಡ ತಮ್ಮ ನಂಬುಗೆಯ ದೇವತೆ-ದೈವಗಳ ಹೆಸರಿನಲ್ಲಿ ಹಬ್ಬಗಳನ್ನು ಆಚರಿಸುತ್ತಿದ್ದುದುಂಟು. ಅವುಗಳಲ್ಲಿ ಇಸ್ತ್‍ಮಿಯನ್, ನೇಮಿಯನ್, ಪೈಥಿಯನ್ ಮತ್ತು ಒಲಂಪಿಕ್ ಎಂಬ ನಾಲ್ಕು ಹಬ್ಬಗಳು ರಾಷ್ಟ್ರೀಯ ಹಬ್ಬಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದವು.
    ಧಾರ್ಮಿಕ ಚಟುವಟಿಕೆಗಳ ಆಚರಣೆ, ಬಂಧು-ಮಿತ್ರರ ಮಿಲನ, ಉಂಡು-ಉಡುವುದರ ಜೊತೆಗೆ ಮನರಂಜನೆ-ಸ್ಪರ್ಧೆಗಳನ್ನೊಳಗೊಂಡ ಶಾರೀರಿಕ ಚಟುವಟಿಕೆಗಳ ವೀಕ್ಷಣೆ ಮತ್ತು ಅವುಗಳಲ್ಲಿ ಸಮರ್ಥರು ಭಾಗವಹಿಸುವಿಕೆ ಈ ಹಬ್ಬಗಳ ವೈಶಿಷ್ಟ್ಯವಾಗಿದ್ದಿತು.
    ಕಾಲಾನುಕ್ರಮದಲ್ಲಿ ಕ್ರೀಡೆಗಳ ಸ್ವರೂಪ ಪಡೆದ ಶಾರೀರಿಕ ಚಟುವಟಿಕೆಗಳು ಹಬ್ಬಗಳ ಸಂದರ್ಭದ ಇತರ ಚಟುವಟಿಕೆಗಳಿಗಿಂತಲೂ ಅಪ್ಯಾಯಮಾನವೆನಿಸಿದುವು. ಒಂದು ಗಮನಾರ್ಹ ಸಂಗತಿಯೆಂದರೆ ಗ್ರೀಸ್ ದೇಶದ ಎಲಿನ್ ಪ್ರಾಂತ್ಯದಲ್ಲಿನ ಒಲಂಪಿಯಾ ಎಂಬ ಸ್ಥಳದಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಒಲಂಪಿಕ್ ಹಬ್ಬ ಕ್ರಿ.ಪೂ.776ರಲ್ಲು ಮರುಹುಟ್ಟು ಪಡೆದದ್ದು. ಹೀಗೆ ಮರುಹುಟ್ಟು ಪಡೆದ ಪುರಾತನ ಕಾಲದ ಮೊದಲ ಒಲಂಪಿಕ್‍ನಲ್ಲಿ ಒಂದು ಸ್ಟೇಡ್ (606 3/4 ಅಡಿ) ಓಟ ಸ್ವರ್ಧೆ ಮಾತ್ರ ಇದ್ದು, ಕಾಲಾನುಕ್ರಮದಲ್ಲಿ ಇನ್ನಿತರ ದೂರದ ಓಟ ಸ್ಪರ್ಧೆಗಳಲ್ಲದೆ, ನೆಗೆತ, ಎಸೆತ, ಕುಸ್ತಿ, ಬಾಕ್ಸಿಂಗ್, ಇತ್ಯಾದಿಗಳು ಸೇರ್ಪಡೆಗೊಂಡವು. ಸಾಹಿತ್ಯ, ಶಿಲ್ಪಕಲೆ, ವಿನ್ಯಾಸಕಲೆ, ಸಂಗೀತ, ನೃತ್ಯ ಇತ್ಯಾದಿ ಚಟುವಟಿಕೆಗಳಲ್ಲಿಯೂ ಸ್ಪರ್ಧೆಗಳು ನಡೆಯುತ್ತಿದ್ದವಾದರೂ ಒಲಂಪಿಕ್ಸ್‍ನಲ್ಲಿ ಅಥ್ಲೆಟಿಕ್ಸ್ ಕ್ರೀಡೆಗೆ ಅಗ್ರಪೂಜೆ ಸಲ್ಲುತ್ತಿತ್ತು.
    ಗ್ರೀಕರ ಉಳಿದೆಲ್ಲ ರಾಷ್ಟ್ರೀಯ ಕ್ರೀಡೆಗಳನ್ನು ಮೀರಿ ಬೆಳೆದ ಒಲಂಪಿಕ್ ಕ್ರೀಡೆ, ಬಲಿಷ್ಟ ಚಕ್ರಾಧಿಪತ್ಯವಾಗಿ ರೂಪುಗೊಂಡ ರೋಮ್‍ನ ಅವಕೃಪೆಗೆ ಪಾತ್ರವಾಗಿ ಕ್ರಿ.ಪೂ 334ರಲ್ಲಿ ಸ್ಥಗಿತಗೊಂಡಿತಾದರೂ ಜನಮಾನಸದಿಂದ ಸಂಪೂರ್ಣವಾಗಿ ಮರೆಯಾಗಿರಲಿಲ್ಲ.
    ಫ್ರಾನ್ಸ್‍ದೇಶದ ಶಿಕ್ಷಣ ತಜ್ಞ ಹಾಗೂ ದಾರ್ಶನಿಕ ಬೇರನ್ ಡಿ ಕೊಬರ್ಟಿನ್‍ನ ಪ್ರಯತ್ನದ ಫಲವಾಗಿ ಒಲಂಪಿಕ್ ಕ್ರೀಡೆಗಳೂ ಕ್ರಿ.ಶ.1896ರಲ್ಲಿ ಮತ್ತೊಮ್ಮೆ ಪುನರುಜ್ಜೀವನಗೊಂಡು 1916, 1940 ಮತ್ತು 1944ರ ಒಲಂಪಿಕ್ಸ್ ಹೊರತು ಪಡಿಸಿ ನಿರಂತರವಾಗಿ ನಾಲ್ಕು ವರ್ಷಕ್ಕೊಮ್ಮೆ ನಡೆದುಕೊಂಡು ಬರುತ್ತಿವೆ.
    100 ಮೀಟರ್ ಓಟದಿಂದ ಹಿಡಿದು ಮ್ಯಾರಥಾನ್ ಓಟದವರೆಗಿನ ವಿವಿಧ ದೂರದ ಓಟಗಳು, ಅಡೆತಡೆ ಓಟ, ವಿವಿಧ ಎಸೆತದ ಸ್ಪರ್ಧೆಗಳು, ನೆಗೆತದ ಸ್ಪರ್ಧೆಗಳು, ಡೆಕಾಥ್ಲಾನ್ ಮತು ಹೆಪ್ಟಾಥ್ಲಾನ್ ಸ್ಪರ್ಧೆಗಳು, ನೆಗೆತದ ಸ್ಪರ್ಧೆಗಳು, ಥೆಕಾಥ್ಲಾನ್ ಮತ್ತು ಹೆಪ್ಟಾಥ್ಲಾನ್‍ನಂತಹ ಕಂಬೈಂಡ್ ಸ್ಪರ್ಧೆಗಳು, ನಡಿಗೆ ಸ್ಪರ್ಧೆ ಇತ್ಯಾದಿಗಳನ್ನೊಳಗೊಂಡ ಅಥ್ಲೆಟಿಕ್ಸ್ ಸ್ಪರ್ಧೆಗಳು ಒಲಂಪಿಕ್ಸ್‍ನಲ್ಲಿ ಅತಿರಂಜನೀಯ ಮತ್ತು ಹೆಚ್ಚು ಕ್ರೀಡಾಸಕ್ತರ ಗಮನ ಸೆಳೆಯುವ ಚಟುವಟಿಕೆಯಾಗಿದೆ.
    ಅಪೇಕ್ಷಿತ ಮೌಲ್ಯಗಳನ್ನು ಬೆಳೆಸುವ ಹಾಗೂ ಸರಳ ಸ್ಪರ್ಧೆಗಳನ್ನೊಳಗೊಂಡ ಅಥ್ಲೆಟಿಕ್ಸ್‍ನ್ನು ಪ್ರಾಥಮಿಕ ಶಾಲಾ ಮಟ್ಟದಿಂದ ವಿಶ್ವವಿದ್ಯಾನಿಲಯ ಮಟ್ಟದವರೆಗೆ, ತಾಲ್ಲೂಕು ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ವಿಶ್ವದಾದ್ಯಂತ ಆಯೋಜಿಸಲಾಗುತ್ತಿದೆ. ವಿಶೇಷ ಅಗತ್ಯವಿರುವವರು ಹಾಗೂ ವಿಕಲ ಚೇತನರಿಗೂ ಪ್ರತ್ಯೇಕ ಅಥ್ಲೆಟಿಕ್ಸ್ ಸ್ಪರ್ಧೆಗಳಿವೆ.
    ವಯಸ್ಕರು ಮತ್ತು ವಯೋವೃದ್ಧರು ದೈಹಿಕ ಸಾಮಥ್ರ್ಯ ಬೆಳೆಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಹೋಗಲು ನೆರವಾಗುವಂತೆ ಹಿರಿಯರ ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗುತ್ತಿದ್ದು, ಶತಾಯುಷಿಗಳನೇಕರು ಸಹ ಇದರಲ್ಲಿ ಸ್ವಯಂ ಸ್ಫೂರ್ತಿಯಿಂದ ಭಾಗವಹಿಸುತ್ತಿದ್ದಾರೆ. ಒಟ್ಟಾರೆ ವಿವಿಧ ವಯೋಮಾನದ ಮಹಿಳೆಯರು ಮತ್ತು ಪುರುಷರು ಆಸಕ್ತಿಯಿಂದ ಭಾಗವಹಿಸಲಿಚ್ಛಿಸುವ ಅಥ್ಲೆಟಿಕ್ಸ್ ಕ್ರೀಡೆ ಮನುಕುಲದ ಆಸ್ತಿ.
    ಬನ್ನಿ! ನಡೆಯಿರಿ, ಓಡಿ, ಎಸೆಯಿರಿ, ನೆಗೆಯಿರಿ, ನಲಿಯಿರಿ, ಸ್ವಾಸ್ಥ್ಯ ಮತ್ತು ಸಾಮಥ್ರ್ಯವೆಂಬ ಆಸ್ತಿಗಳಿಸಿಕೊಳ್ಳಿ! ಅಥ್ಲೆಟಿಕ್ಸ್ ಕ್ರೀಡೆಯ ಮೂಲಕ ಬಲಿಷ್ಠ ಭಾರತ ಕಟ್ಟೋಣ!

    ದೈಹಿಕ ಶಿಕ್ಷಣ: ಅರ್ಥ-ಮಹತ್ವ-ಮೂಲತತ್ವಗಳು

    ಈ ಕೆಳಗಿನ ಅಂಶಗಳನ್ನು ಆರಿಸಿ....


  • ಶಿಕ್ಷಣ
  • ದೈಹಿಕ ಶಿಕ್ಷಣ
  • ಮಹತ್ವ
  • ಮೂಲ ತತ್ವಗಳು

  •  

     ಶಿಕ್ಷಣ

    ಶರೀರ ಶಿಕ್ಷಣ ಎಂಬ ಶಬ್ದವು ಶರೀರ ಮತ್ತು ಶಿಕ್ಷಣ ಎಂಬ ಎರಡು ಪದಗಳ ಸಮ್ಮಿಲನವಾಗಿದೆ. ಆದುದರಿಂದ ಶರೀರ ಶಿಕ್ಷಣದ ಅರ್ಥ ತಿಳಿಯುವ ಮೊದಲು ಶಿಕ್ಷಣದ ಅರ್ಥವನ್ನು ತಿಳಿಯೋಣ.

    ಶಿಕ್ಷಣ ಎಂಬ ಪದವು ಇಂಗ್ಲೀಷ್ ಅನುವಾದ Education ಎಂಬ ಪದದಿಂದಾಗಿದೆ. ಆಂಗ್ಲಭಾಷೆಯ ಈ Education ಎಂಬ ಪದವು Educe ಎಂಬ ಲ್ಯಾಟಿನ್ ಪದದಿಂದ ಬಂದಿದೆ. Educe ಎಂದರೆ ಹೊರ ತೆಗೆ ಅಥವಾ ಬೆಳೆಸು ಎಂದರ್ಥವಾಗುತ್ತದೆ. ಆದುದರಿಂದ ಶಿಕ್ಷಣವು ಮಾನವನ ಆಂತರಿಕ ಶಕ್ತಿಯನ್ನು ಹೊರ ತರುವುದಲ್ಲದೇ ಅದನ್ನು ಬೇಳೆಸುತ್ತದೆ.

    ಇದನ್ನೇ ಮಹಾತ್ಮ ಗಾಂಧೀಜಿ ಮತ್ತು ಎಡಿಸನ್ ರವರು ಶಿಕ್ಷಣ ಎಂಬ ಪದವು Educare ಎಂಬ ಮೂಲ ಪದದಿಂದ ಉದ್ಭವಿಸಿದೆ ಎಂದಿದ್ದಾರೆ. ಇದರ ಅರ್ಥ ಒಳ್ಳೆಯ ಗುಣವನ್ನು ಹೊರ ತೆಗೆ ಅಥವಾ ಬೆಳೆಸು ಎಂಬುದಾಗಿದೆ. ಅಂದರೆ ವ್ಯಕ್ತಿಯಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುವುದೇ ಶಿಕ್ಷಣವಾಗಿದೆ.

    ಶಿಕ್ಷಣದ ಬಗ್ಗೆ ಹಲವಾರು ಶಿಕ್ಷಣ ತಜ್ಞರುಗಳು, ಧರ್ಮ ಗುರುಗಳು, ತತ್ವಜ್ಞಾನಿಗಳು ತಮ್ಮದೇ ವ್ಯಾಖ್ಯಾನಗಳನ್ನು ನೀಡಿರುವರು. ಅವು ಈ ಕೇಗಿನಂತಿವೆ.

    ಕ್ರೋವ್ ಮತ್ತು ಕ್ರೋವ್ : ಪೀಳಿಗೆಯಿಂದ ಪೀಳಿಗೆಗೆ ಆಗುವ ಜ್ಞಾನದ ವರ್ಗಾವಣೆಯೇ ಶಿಕ್ಷಣ ಎಂದಿದ್ದಾರೆ.
    ಟಿ.ಪಿ.ನನ್ :ಪ್ರತಿ ವ್ಯಕ್ತಿಯೂ ಪರಿಪೂರ್ಣವಾಗಿ ಬೆಳೆಯುವಂತೆ ಯೋಗ್ಯ ಪರಿಸರವನ್ನು ನಿರ್ಮಿಸುವುದೇ ಶಿಕ್ಷಣ ಎನ್ನುತ್ತಾರೆ.
    ಬ್ಯಾನರ್ಜಿ: ಬದಲಾಗಿತ್ತಿರುವ ಸಮಾಜದ ವಾತಾವರಣಕ್ಕೆ ಹೊಂದಿಕೊಂಡು ಹೋಗುವಂತೆ ಮಾಡುವುದೇ ಶಿಕ್ಷಣ ಎನ್ನುತ್ತಾರೆ.
    ಜಾನ್ ಡ್ಯೂಯಿ : ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳ ಪುನರ್ ಪರಿಶಿಲನೆಯೇ ಶಿಕ್ಷಣ ಎಂದಿದ್ದಾರೆ.
    ಮಹಾತ್ಮಗಾಂಧೀಜಿ : ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ, ನೈತಿಕವಾಗಿ ಸಮರ್ಥರನ್ನಾಗಿಸುವುದೇ ಶಿಕ್ಷಣ ಎಂದಿದ್ದಾರೆ.

    ಮೇಲಿನ ಎಲ್ಲಾ ವ್ಯಾಖ್ಯಾನಗಳನ್ನು ಕ್ರೂಢೀಕರಿಸಿದಾಗ ಇಂದಿನ ಪ್ರಗತಿಪರ ಸಮಾಜಕ್ಕೆ ಮಹಾತ್ಮ ಫಾಂಧೀಜಿಯವರ ವ್ಯಾಖ್ಯಾನ ಇಂದಿನ ಕೆಲವು ಸವಾಲುಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ಹೇಳಬಹುದಾಗಿದೆ. ಆದರೆ ಶೈಕ್ಷಣಿಕ ಅನುಭವವು ಮನೆ,ಶಾಲೆ,ಪುಸ್ತಕ ಭಂಡರ,ಪ್ರಯೋಗಶಾಲೆ, ಪ್ರವಾಸ, ಆಟದ ಬಯಲು, ಪೇಟೆ ಹಾಗೂ ಸಮಾಜದ ಎಲ್ಲಾ ಕಡೆಗಳಲ್ಲೂ ನಡೆಯುತ್ತಿರುತ್ತದೆ.

    ಆದರೆ ಅದಲ್ಲವನ್ನು ಕ್ರಮಬದ್ದಗೊಳಿಸಿ ಒಮ್ದು ಮಾರ್ಗದಲ್ಲಿ ನಿರ್ಭಯವಾಗಿ ನಡೆಯುವಂತೆ ಮಾಡುವ ಜವಾಬ್ದಾರಿ ಶಿಕ್ಷಕನಿಗಿದ್ದು, ಅವನ ವ್ಯಕ್ತಿತ್ವದ ಮೇಲೆ ಶಿಕ್ಷಣ ಅವಲಂಬಿತವಾಗಿದೆ ಎಂದರೆ, ತಪ್ಪಾಗಲಾರದು. ಆದರೆ ಅವನಿಗೆ ಒಂದು ವ್ಯಾಪ್ತಿಯಿದ್ದು ಅದರಲ್ಲಿ ಮಗುವಿಗೆ ಅವಶ್ಯಕವಾದುದ್ದನ್ನು ಶಿಕ್ಷಣ ತಜ್ಞರುಗಳು ಸೂಚಿಸಿದ ಪಠ್ಯವಸ್ತುವಿನ ಆಧಾರದ ಮೇಲೆ ಮುಂದಿನ ಸತ್ಪ್ರಜೆಗಳನ್ನು ಶಿಕ್ಷಕ ತಯಾರುಮಾಡುವ ಕೆಲಸದಲ್ಲಿ ಕಾರ್ಯಪ್ರವೃತ್ತನಾಗಿದ್ದಾನೆ.

     

    ದೈಹಿಕ ಶಿಕ್ಷಣ

    ಮಾನವನಿಗೆ ಅತಿ ಹೆಚ್ಚು ಪ್ರಿಯವಾದುದೆಂದರೆ ಆತನ ಶರೀರ. ಈ ಶರೀರವನ್ನು  ಬಿಟ್ಟು ಒಂದು ಕ್ಷಣವು ಅವನಿರುವುದಾದರೆ ಅದು ನಿರ್ಜೀವಿಯಾಗಿ ಮಾತ್ರ. ಶರೀರವೇ ಶ್ರೇಷ್ಠ, ಶರೀರವಿಲ್ಲದ ಮನುಷ್ಯನನ್ನು ಕಲ್ಪಿಸಲು ಅಸಾಧ್ಯ ಈ ಶರೀರದೊಳಗೆ ಅತ್ಮ, ಮನಸ್ಸು, ಬುದ್ಧಿ, ಭಾವನೆಗಳು ಸೇರಿಕೊಂಡಿವೆ. ಇವುಗಳು ಶರೀರದ ಮೂಲಕ ತಮ್ಮ ಚಟುವಟಿಕೆಯನ್ನು ನಿರ್ವಹಿಸುವುದರಿಂದಲೇ ಮಹಾಕವಿ ಕಾಳಿದಾಸನು ಶರೀರ ಮಾಧಂಖಲು ಧರ್ಮಂ ಸಾಧನಂ ಎಂಬ ಉಕ್ತಿಯನ್ನು ಜಗತ್ತಿಗೆ ನೀಡಿದ್ದು ಅದು ಬಹಳ ಮಹತ್ವದ್ದಾಗಿದೆ.
    ದೈಹಿಕ ಶಿಕ್ಷಣವನ್ನು ಶಿಕ್ಷಣದ ಒಂದು ಮೃದುವಾದ ಅಂಗ ಅಥವಾ ಶಿಕ್ಷಣದ ಒಂದು ಜೀವಾಳ ಎಂದೆಲ್ಲಾ ಹೇಳಲಾಗುತ್ತದೆ. ದೈಹಿಕ ಎಂಬ ಪದವು ದೇಹಕ್ಕೆ ಸಂಬಂಧಿಸುವುದಾಗಿದೆ. ಶಿಕ್ಷಣಕ್ಕೆ ಶರೀರ ಒಂದು ಪ್ರಮುಖ ಸಾಧನ. ಈ ಸಾಧನಕ್ಕೂ ಸಹ ಶಿಕ್ಷಣ ಬೇಕು.
    ಶರೀರ ಶಿಕ್ಷಣವು ಶಾರೀರಿಕ ಚಟುವಟಿಕೆಗಳ ಮೂಲಕ ಶಿಕ್ಷಣದ ಪ್ರಗತಿಗೆ ಪೂರಕ ಹಾಗೂ ಮೂಲಭೂತವಾಗಿ ಸ್ಪಂಧಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ.

    ಜೀವನ ಪ್ರಗತಿಗೆ ಬೌದ್ಧಿಕ ಶಿಕ್ಷಣ ಹೇಗೆ ಅವಶ್ಯಕವೋ ಹಾಗೆಯೇ ಶರೀರದ ಆರೋಗ್ಯಕ್ಕೆ ದೈಹಿಕ ಶಿಕ್ಷಣ ಅವಶ್ಯವಾಗಿರುತ್ತದೆ. ದೈಹಿಕ ಶಿಕ್ಷಣದ ಬಗ್ಗೆ ಅನೇಕ ಪ್ರಸಿದ್ದ ಶಿಕ್ಷಣ ತಜ್ಞರುಗಳು ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡಿದ್ದಾರೆ.

    ಸಿ.ಎ. ಬ್ಯೂಕರ್ ಎಂಬ ಶಿಕ್ಷಣ ತಜ್ಞರು, “ದೈಹಿಕ ಶಿಕ್ಷಣವು ಒಟ್ಟು ಶಿಕ್ಷಣ ಕ್ರಿಯೆಯ ಒಂದು ಮಹತ್ವದ ಭಾಗ ಯೋಗ್ಯವಾದ ಶಾರೀರಿಕ ಚಟುವಟಿಕೆಗಳ ಮೂಲಕ, ಶಾರೀರಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ  ಮತ್ತು ಸಾಮಾಜಿಕವಾಗಿ ಯೋಗ್ಯರಾದ ನಾಗರೀಕನನ್ನು ನಿರ್ಮಾಣ ಮಾಡುವುದೆ ದೈಹಿಕ ಶಿಕ್ಷಣವಾಗಿದೆ ಎಂದಿದ್ದಾರೆ.

    .ಎ.ಹೆಚ್.ಪಿ.ಇ.ಆರ್.ಡಿ.(American Association Helth, Physical Education, Recreation and Dance)ರವರು “ವ್ಯಕ್ತಿಯ ಬೆಳವಣಿಗೆ, ಅಭಿವೃದ್ಧಿ, ಮತ್ತು ನಡೆತೆಗಳ ಮೌಲ್ಯಗಳಿಗನುಗುಣವಾಗಿ ಆಯ್ದು ಶಾರೀರಿಕ ಚಟುವಟಿಕೆಗಳ ಮೂಲಕ ಕೊಡುವಂತಹ ಶಿಕ್ಷಣಕ್ಕೆ ದೈಹಿಕ ಶಿಕ್ಷಣ ಎಂದು ಕರೆಯುತ್ತಾರೆ”.

    ಜೆ.ಪಿ.ಥಾಮಸ್ ಎಂಬ ಶಿಕ್ಷಣ ತಜ್ಞರು “ಶರೀರದ ಮೂಲಕ ಶರೀರಕ್ಕೆ ಕೊಡುವ ಶಿಕ್ಷಣವೇ ದೈಹಿಕ ಶಿಕ್ಷಣ “, ಇದು ದೇಹಕ್ಕೆ ಸಂಬಂಧಿಸಿರುವುದಕ್ಕಿಂತ ಹೆಚ್ಚಾಗಿ ಶೀಕ್ಷಣಕ್ಕೆ ಸಂಬಂಧಿಸಿದೆ ಎಂದಿದ್ದಾರೆ.

    ಮೇಲಿನ ಎಲ್ಲಾ ಅಂಶಗಳನ್ನು ಕ್ರೂಡೀಕರಿಸಿದಾಗ ದೈಹಿಕ ಶಿಕ್ಷಣ ಶರೀರದಲ್ಲಿ ರುವ ಮನಸ್ಸು ಬುದ್ಧಿ, ಭಾವನೆಗಳನ್ನು ಶಾರೀರಿಕ ಚಟುವಟಿಕೆಗಳ ಮೂಲಕ ನೈತಿಕವಾಗಿಯೂ ಅಭಿವೃದ್ಧಿ ಹೊಂದುವಂತೆ ಮಾಡಲು ಪ್ರಯತ್ನಿಸುತ್ತದೆ.

     

    ಮಹತ್ವ

    ಪ್ರಗತಿಯ ಹಾದಿಯಲ್ಲಿ ಬುದ್ಧಿಶಕ್ತಿಗೆ ಬಹಳ ಪ್ರಾಮುಖ್ಯತೆ ಇವೆ. ಹಾಗಾಗಿ ಇದರ ಅಭಿವೃದ್ಧಿಗಾಗಿ ಒಂದು ಸುವ್ಯವಸ್ಥಿತವಾಗಿ ಶಿಕ್ಷಣವೆಂಬ ವ್ಯವಸ್ಥೆ ನಮ್ಮಲ್ಲಿದೆ. ಇದು ಕೇವಲ ಬೌದ್ಧಿಕ ಶಕ್ತಿಗಷ್ಟೇ ಸೀಮಿತವಾಗಿರದೆ ವಿವಿಧ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸರ್ವಾಂಗೀಣ ವ್ಯಕ್ತಿತ್ವದ ವಿಕಸನಕ್ಕೆ ದೈಹಿಕ ಶಿಕ್ಷಣ ಸಂಗೀತ, ನೃತ್ಯ, ಚಿತ್ರಕಲೆ ನಾಟಕಗಳಂತಹವುಗಳು ಸಹ ಬಹಳ ಮುಖ್ಯವಾಗಿವೆ. ಇವು ಸಹ ಶಿಕ್ಷಣವೆಂಬ ವ್ಯವಸ್ಥೆಯಲ್ಲಿ ಕಲಿಕೆಯ ವಸ್ತುವಾಗಿದ್ದು, ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ.
    ಜೀವನ ವಿಜ್ಞಾನದ ಪರಿಕಲ್ಪನೆಯ ಪಂಚವಲಯಗಳನ್ನು ಅಭಿವೃದ್ಧಿ ಪಡಿಸುವಲ್ಲಿ ದೈಹಿಕ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತಿದೆ ಎನ್ನಬಹುದಾಗಿದೆ.
    ಶಿಕ್ಷಣವೆಂಬ ಮಹಾ ಸಾಗರದಲ್ಲಿ ದೈಹಿಕ ಶಿಕ್ಷಣ ಶಾಲಾ ಮುಖ ಲಕ್ಷಣವಾಗಿ ಶಾಲಾ ಮೈದಾನ ಇದಕ್ಕೆ ಅಭರಣವಾಗಿ ಶೋಭಿಸುವ ನಿಟ್ಟಿನಲ್ಲಿ ಶಿಕ್ಷಣ ಮತ್ತು ದೈಹಿಕ ಶಿಕ್ಷಣ ಒಂದೇ ನಾಣ್ಯದ ಎರಡು ಮೂಖಗಳಂತೆ ತಾರ್ಯ ನಿರ್ವಹಿಸುತ್ತಿವೆ.
    ಶಿಕ್ಷಣ ದೈಹಿಕ ಶಿಕ್ಷಣಕ್ಕೆ ಸ್ಪೂರ್ತಿಯಾದರೆ, ದೈಹಿಕ ಶಿಕ್ಷಣ ಶಿಕ್ಷಣ ಬೌದ್ಧಿಕ ವಿಷಯಗಳಿಗೆ ಪೂರಕ ಅಂಶಗಳನ್ನು ನೀಡಿ ಕಲಿಕಾ ಪ್ರಗತಿಗೆ ಪೂರಕ ವ್ಯವಸ್ಥೆಯನ್ನು ಮಾಡಿಕೊಡುತ್ತದೆ. ಆದರೆ ಇವೆರೆಡರ ಗುರಿ ಬಹುಶಃ ಉತ್ತಮ ನಾಗರೀಕರನ್ನು ತಯಾರು ಮಾಡುವುದೇ ಆಗಿದ್ದರೂ ಸಹ ಇವು ತಮ್ಮದೇ ಆದ ವಿವಿಧ ಗುರಿ ಉದ್ದೇಶಗಳನ್ನು ಈಡೇರಿಸುತ ತಮ್ಮಗಳ ಗುರಿಯತ್ತ ಸಾಗುತ್ತದೆ. ಆದರೆ ಇವುಗಳ ಈ ಬೋಧನ ತಂತ್ರ ಮತ್ತು ಚಟುವಟಿಕೆಯಲ್ಲಿ ಒಂದಕ್ಕೊಂದು ಸಾಮ್ಯತೆ ಇದ್ದರೂ ಸಹ ವ್ಯತ್ಯಾಸಗಳು ಕಂಡುಬರುತ್ತದೆ.
    ಉದಾ:ಬೌದ್ಧಿಕ ತರಗತಿ ಕೊಠಡಿ ಒಳಗೆ ನಡೆದರೆ, ಕಪ್ಪು ಹಲಗೆ ಹಾಗೂ ಪಠ್ಯ ಪುಸ್ತಕ ಇದರ ಕಲಿಕಾ ಸಾಮಾಗ್ರಿಗಳಾಗುತ್ತವೆ. ಆದರೆ ದೈಹಿಕ ಶಿಕ್ಷಣದ ಚಟುವಟಿಕೆಗಳು ಆಟದ ಮೈದಾನ, ವ್ಯಾಯಾಮ ಮಂದಿರಗಳಲ್ಲಿ ನಡೆದರೆ ಇದಕ್ಕೆ ಕಲಿಕಾ ಸಾಮಾಗ್ರಿಗಳು ಆಟೋಪಕರಣಗಳು ಮತ್ತು ಆತನ ಶರೀರವೆ ಆಗೆದೆ.
    ಶಿಕ್ಷಣದಲ್ಲಿ ದೈಹಿಕ ಶಿಕ್ಷಣದ ಮಹತ್ವವನ್ನು ಅರಿತ ಶ್ರೇಷ್ಠ ಶಿಕ್ಷಣ ತಜ್ಞರಾದ ಪ್ರೊಬೆಲ್ಲನು ಪ್ಲೋಟೋವಿನ ಆದರ್ಶವಾದ ರೋಸೋವಿನ ನಿಸರ್ಗವಾದ ಪೆಸ್ಟಾಲೋಜಿಯಾ ಶಿಶು ಕೇಂದ್ರಿತ ಶಿಕ್ಷಣದ ತತ್ವಗಳನ್ನು ಕ್ರೂಡೀಕರಿಸಿ ಮೂಲ ಶಿಕ್ಷಣದ ಅಂಶಗಳನ್ನು ಪರಿವರ್ತಿಸಿ ಚಟುವಟಿಕೆಯ ಆಂದೋಲನಕ್ಕೆ ಒಂದು ಮೂರ್ತಿ ರೂಪವನ್ನು ಕೊಟ್ಟರು. ಇವರು ಕಿಂಡರ್ ಗಾರ್ಡ್ ನ್ ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದು ಸ್ವಯಂ ಚಟುವಟಿಕೆ ಮತ್ತು ಆಟದ ಮೂಲಕ ಪಾಠ ಕಲಿಸುವುದೇ ಲೇಸು ಎಂದು ತಿಳಿದ ಇವರು ಮನೋವೈಜ್ಞಾನಿಕ ಅಂಶಗಳನ್ನು ಒಳಗೊಂಡು ಆಟಾಗಳನ್ನು ವಿಂಗಡಿಸಿ ಮಕ್ಕಳಿಗೆ ಬೋಧಿಸಿದರು.
    1. ರಚನಾತ್ಮಕ ಚಟುವಟಿಕೆಯನ್ನು ಒಳಗೊಂಡ ಆಟಗಳು.
    2. ಬೌದ್ಧಿಕ ಸಾಮರ್ಥ್ಯ ಮತ್ತು ಕಲ್ಪನಾ ಶಕ್ತಿಯನ್ನು ವರ್ಧಿಸುವ ಆಟಗಳು.
    3. ಸಹಕಾರ ಮತ್ತು ಸಾಂಘಿಕ ಮನೋಭಾವ ಬೇಳೆಸುವ ಆಟಗಲು.
    4. ಚಾರಿತ್ರಿಕ ನಿರ್ಮಾಣದಲ್ಲಿ ಸಹಾಯ ಮಾಡುವ ಆಟಗಳು.
    5. ಕಲಿಕೆಯಲ್ಲಿ ಸುಲಭ ಮಾಡುವ ಆಟಗಳೇ ಆಗಿವೆ
    ಹದಿನೆಂಟನೆಯ ಶತಮಾನದ ಪ್ರಸಿದ್ಧ  ಮತ್ತು ಯಶಸ್ವಿ ಶಿಕ್ಷಣ ತಜ್ಞ ಮೇರಿಯ ಮಾಂಟೇಸರಿ ಶಾಲೆಯಲ್ಲಿ ಚಟುವಟಿಕೆಗಳು ಪೂರ್ವ ನಿಯೋಜಿತವಾಗಿದ್ದರೂ  ಮಕ್ಕಳ ಸ್ವಾತಂತ್ರ್ಯಕ್ಕೆ ಭಂಗ ಬರದಂತೆ ಓದು, ಬರಹ, ಗಣಿತ ಮುಂತಾದುವುಗಳನ್ನು ಆಟ, ಕ್ರೀಡೆಯಂತಹ ಚಟುವಟಿಕೆಗಳ ಮುಖಾಂತರವೇ ಮಕ್ಕಳಿಗೆ ಕಲಿಸುತ್ತಿದ್ದರು ಎಂಬುದನ್ನು ಗಮನಿಸಬಹುದಾಗಿದೆ.

               ಜಾಗತೀಕರಣದಲ್ಲಿ ತಂತ್ರಜ್ಞಾನ ಮುಂದುವರಿದಂತೆ ದೈಹಿಕ ಚಲನೆ ಕಡಿಮೆಯಾಗಿ ಮಧುಮೇಹ, ಹೃದಯಘಾತ, ರಕ್ತದೊತ್ತಡ ಮತ್ತು ಮಾನೋ ದೈಹಿಕ ಖಾಯಿಲೆಗಳಿಗೆ ತೊತ್ತಾಗುತ್ತಿರುವ ವಿಷಯವನ್ನು ಪ್ರಚಾರ ಮಾಧ್ಯಮಗಳಲ್ಲಿ ದಿನನಿತ್ಯ ತಿಳಿಯುತ್ತಿದದ್ದೇವೆ.
            ಈ ನಿಟ್ಟಿನಲ್ಲಿ ಅಪೋಲೋ ಆಸ್ಪತ್ರೆಯ ಪ್ರಸಿದ್ಧ ವೈದ್ಯರಾದ ಡಾ॥ ಭಕ್ತಿಯಾರ್ ಚೌಧರಿ ಯವರು ಮಕ್ಕಳ ಆರೋಗ್ಯ ಕುರಿತು ಸಂಶೋಧನೆ ನಡೆಸಿ ಮುಂದೆ ಮಕ್ಕಳು ಗಾಜಿನ ಗೊಂಬೆಗಳಾಗುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರಗಳನ್ನು ಹೊರ ತಂದಿದ್ದಾರೆ. ಇದಕ್ಕೆ ಕಾರಣಗಳನ್ನು ಈ ರೀತಿ ಹೇಳುತ್ತಾರೆ. ಮನೆಯಲ್ಲಿ ಮಕ್ಕಳನ್ನು ಕಣ್ಣಿನ ರೆಪ್ಪೆಯಂತೆ ಪೋಷಿಸುತ್ತಿರುವುದು.ಶಾಲೆಗಳಲ್ಲಿ ದೈಹಿಕ ಚಟುವಟಿಕೆಗಳು ನಡೇಯದಿರುವುದು ಹಾಗೂ ಮಕ್ಕಳಿಗೆ ಸ್ವತಂತ್ರವಾಗಿ ಆಟವಾಡಲು ಮೈದಾನವಿಲ್ಲದಿರುವುದು ಇಂದಿನ ಟ್ಯೂಷನ್, ಟಿ.ವಿ. ಕಂಪ್ಯೂಟರ್ ಗಳ ಹಾವಳಿ ಹೆಚ್ಚಾಗಿರುವುದೇ ಇದಕ್ಕೆ ಕಾರಣವೆಂದಿದ್ದಾರೆ. ಹಾಗೆಯೇ ಭಾರತದ ಪ್ರಸಿದ್ಧ ಅಥ್ಲೇಟಿಕ್ ತರಬೇತುದಾರರಾದ ಡಾIIಲಕ್ಷ್ಮೀಶ್ರವರು ಕರ್ನಾಟಕದ ಫ್ರೌಢಶಾಲಾ ಮಕ್ಕಳ ಚಟುವಟಿಕೆಯ ಮೇಲೆ ಸಂಶೋಧನೆ ನಡೆಸಿ ಅಮೇರಿಕಾದಲ್ಲಿ ವೃದ್ದಾಪ್ಯದಲ್ಲಿ ಬರುವ ಮುಪ್ಪು ನಮ್ಮ ಫ್ರೌಢಶಾಲಾ ಮಕ್ಕಳ ವಯಸ್ಸಿಗೆ ಬಂದಿರುತ್ತದೆ ಎಂದಿದ್ದಾರೆ. ಇವರ ಸಂಶೋಧನೆಯನ್ನು ನೋಡಿದರೆ ಇಂದಿನ ಒಲಂಪಿಕ್ ನಲ್ಲಿ ನಮ್ಮ ದೇಶದ ಪದಕಗಳು ಎಲ್ಲಿದೆಯೆಂದು ಹುಡುಕಾಡುವ ಸ್ಥಿತಿಯಲ್ಲಿ ನಾವಿರುವಾಗ ಇದೇನು ಅತಿಯೋಕ್ತಿಯೇನಲ್ಲ ಎಂದೆನಿಸುತ್ತ್ದೆ. ಹಾಗೆಯೇ ನೌಕರರ ಒಕ್ಕೂಟ ನಡೆಸಿದ ಸಂಶೋಧನೆಯಲ್ಲಿ ನೌಕರರು ತಮ್ಮ ವೇತನದಲ್ಲಿ ಹಿಂದಿಗಿಮ್ತಲೂ ಸಹ ಇಂದು ಆರೋಗ್ಯ ರಕ್ಷಣೆಗಾಗಿ ಮಾಡುವ ಖರ್ಚು ಅಧಿಕವಗಿದೆ. ಎಂಬ ಅಂಶವನ್ನು ಹೊರತಂದಿರುವುದನ್ನು ನೋಡಿದರೆ ದೈಹಿಕ ಶಿಕ್ಷಣದ ಅವಶ್ಯಕತೆ ಬಹಳವಿದೆ ಎಂದನಿಸುತ್ತದೆ.ಈಗಾಗಲೇ ಜಪಾನಿನ ಆರೋಗ್ಯ ತಜ್ಞರಾದ ಹಿದೆಯುಕಿ ತೋಭೆ ಯವರು ಪ್ರಾಥಮಿಕ ಮತ್ತು ಫ್ರೌಢಶಾಲಾ ಮಕ್ಕಳ ಆರೋಗ್ಯ ಮತ್ತು ದೈಹಿಕ ಶೈಕ್ಷಣಿಕ ಪ್ರಗತಿ ಕುರಿತಾದ ಒಂದು ಸಂಶೋಧನೆ ನಡೆಸಿ ಅವರು ದೈಹಿಕ ಶಿಕ್ಷಣ ಚಟುವಟಿಕೆಯಲ್ಲಿ ಪಾಲ್ಗೊಂಡ ಮಕ್ಕಳು ಚುರುಕಾಗಿಯೂ ಕ್ರಿಯೆಗೆ ಉತ್ತಮ ಪ್ರಕ್ರಿಯೆ ನೀಡುವುದಾಗಿದ್ದೂ, ಅವರ ಕಲಿಕೆಯಲ್ಲಿ ಉತ್ತಮ ಪ್ರಗತಿಯಾಗುತ್ತಿದೆ, ಆದರೆ ಉಳಿದ ಮಕ್ಕಳು ಅವರಿಗಿಂತ ಪ್ರಗತಿಯಲ್ಲಿ ಮತ್ತು ಆರೋಗ್ಯದಲ್ಲಿ ಹಿಂದುಳಿದಿರುವ ವಿಚಾರಗಳನ್ನು ಹೊರತಂದಿರುತ್ತಾರೆ. ಈ ನಿಟ್ಟಿನಲ್ಲಿ ಗಮನಿಸುವುದಾದರೆ ಸಹ ಶಿಕ್ಷಣದಲ್ಲಿ ದೈಹಿಕ ಚಟುವಟಿಕೆಗಳ ಅವಶ್ಯಕತೆ ಕಂಡು ಬರುತ್ತದೆ. ಇಂತೆಲ್ಲಾಚಟುವಟಿಕೆಗಳ ಜೊತೆಯಲ್ಲಿ ಆರೋಗ್ಯಕ್ಕಾಗಿ ಯೋಗ ಶಿಕ್ಷಣ, ನೈತಿಕ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣವನ್ನೊಳ್ಗೊಂಡಂತೆ. ದೈಹಿಕ ಶಿಕ್ಷಣವನ್ನು ಶಾಸ್ತ್ರಿಯವಾಗಿ ಬೋಧಿಸುವ ಅವಶ್ಯಕತೆ ಮತ್ತು ಅನಿವಾರ್ಯತೆಯ ಬಗ್ಗೆ ಚಿಂತಿಸಬೇಕಾಗಿರುವುದು ಕ್ರ್ವಲ ದೈಹಿಕ ಶಿಕ್ಷಣ ವಿಭಾಗ ಮಾತ್ರವಲ್ಲ. ಶಿಕ್ಷಣ ತಜ್ಞ ಥಾಮಸ್ ರವರು ಹೇಳುವಂತೆ ದೈಹಿಕ ಶಿಕ್ಷಣ ದೇಹಕ್ಕೆ ಸಂಬಂಧಿಸಿರುವುದಕ್ಕಿಂತ ಹೆಚ್ಚಾಗಿ ಶಿಕ್ಷಣಕ್ಕೆ ಸಂಬಂಧಿಸಿದೆ ಎಂದಿದ್ದಾರೆ. ಅವರ ಮಾತು ನಿಜವೆಂಬಂತೆ ಇಂದು ಶಿಕ್ಷಣದಲ್ಲಿ ದೈಹಿಕ ಶಿಕ್ಷಣವನ್ನು ಸಮರ್ಪಕವಾಗಿ ಹಾರಿಗೆ ತರದ ಹೊರತು, ಶಿಕ್ಷಣದ ಅನೇಕ ಸಮಸ್ಯೆಗಳು ಸಮಸ್ಯೆಯಾಗಿ ಕಾಡುತ್ತಿರುವುದರ ಬಗ್ಗೆ ಗಂಭೀರವಾಗಿ ಚಿಂತಿಸುವ ಅವಶ್ಯಕತೆ ಕಂಡುಬರುತ್ತದೆ.


     

    ಮೂಲ ತತ್ವಗಳು


  • ಸತತ ಪ್ರಗತಿ ಪರತೆಯ ತತ್ವ ಸುಲಭದಿಂದ ಕಠಿಣತೆಯ ಕಡೆಗೆ(principles of progressive loadinga): ದೈಹಿಕ ಶಿಕ್ಷಣದ ಚಟುವತಿಕೆ ಮತ್ತು ಕೌಶಲ್ಯಗಳನ್ನು ಹೇಳಿ ಕೊಡುವಾಗ ಹಂತ ಹಂತವಾಗಿ ಸುಲಭದಿಂದ ಕಠಿಣದ ವಿಷಯವನ್ನು ಬೋದಿಸಿ ಕಲಿಸಬೇಕು. practice makes man perfect ಎಂಬ ತತ್ವವು ಇದಕ್ಕೆ ಬಿಡಿಸಲಾರದ ಸಂಬಂಧ ಎಂಬುದನ್ನು ಅರಿಯಬೇಕು.
  • ತರಬ್ರ್ತಿಯ ಮಧ್ಯದಲ್ಲಿ ವಿರಾಮದ ತತ್ವ (principles of interval) : ಸತತವಾಗಿ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಂಡಾಗ ಸ್ನಾಯುಗಳು ಆಯಾಸಗೊಂಡಾಗ ಅಗತ್ಯವಿರುವಷ್ಟು ವಿಶ್ರಾಂತಿ ನೀಡಬೇಕು. ಹೆಚ್ಚು ವಿಶ್ರಾಮ್ತಿ ಕೊಟ್ಟಾಗ warm Down ಆಗುತ್ತದೆ.
  • ತರಬೇತಿಯ ವಿಶಿಷ್ಟತೆಯ ತತ್ವ (Principles of specificity) : ಕ್ರೀಡಾ ಕ್ಷೇತ್ರದಲ್ಲಿ ಹತ್ತು ಹಲವಾರು ವರ್ಷಗಳ ಪರಿಶ್ರಮವೇ ಅವನ ಉನ್ನತ ಮಟ್ಟದ ಸಾಧನೆಗೆ ಕಾರಣವಾಗುತ್ತದೆ.ವಿವಿಧ ಹಂತದ ತರಬೇತಿಯೊಂದೇ ಕ್ರೀಡಾ ಪಟುವಿನ ಅಭಿವೃದ್ಧಿಗೆ ಸೂಕ್ತ ಮಾರ್ಗ.
  • ಸರ್ವತೋಮುಖ ಅಭಿವೃದ್ಧಿಯ ಹಂತ : ಈ ಹಂತವೂ ಶಾಲೆಗಳಲ್ಲಿ ಒಂದನೇ ತರಗತಿಯಿಂದ 4,5ನೇ ತರಗತಿ ಮಕ್ಕಳಿಗೆ ಸಂಬಂಧಿಸಿದೆ. ಈ ಹಂತದಲ್ಲಿ ವೈವಿಧ್ಯಮಯವಾದ ದೈಹಿಕ ಚಟುವಟಿಕೆಗಳಲ್ಲಿ ಮಗು ಪಾಲ್ಗೊಳ್ಳುವಂತೆ ಮಾಡಬೇಕು. ಸುಲವ ಮೈನರ್ ಗೇಮ್ಸ್ ಆಟಗಳು ಉತ್ತಮವಾಗಿದೆ. ಇ ಹಂತದಲ್ಲಿ ಕ್ರೀಡಾಪಟುವಿಕೆ ಇಂತಹದೇ ಎಂಬ ಆಟದ ನಿರ್ದಿಷ್ಟತೆಯಿಲ್ಲ.
  • ಪ್ರಾಥಮಿಕ ಪರಿಣಿತಿ ಹಂತ : ಇಲ್ಲಿ ಸುಲಭವಾದ ಆಟದ ಕೌಶಲ್ಯಗಳನ್ನು ತಿಳಿಸಬೇಕು.Shotput ಅನ್ನು ಗ್ಲೈಡಿಂಗ್ ಮಾಡದೇ ನಿಂತು ಎಸೆಯುವುದು. ವಾಲಿಬಾಲ್ ಸರ್ವಿಸ್ ಗಳಲ್ಲಿ Simple ಸರ್ವೀಸ್ ಹೇಗೆ ಹೇಳಿಕೊಡಬೇಕು.ಈ ಹಂತದಲ್ಲಿ ಮಕ್ಕಳು 6 ರಿಂದ 8 ನೇ ತರಗತಿಯ ವಯಸ್ಸಿನವರಾಗಿರುತ್ತಾರೆ. ಈ ಹಂತದಲ್ಲೂ ವೈವಿಧ್ಯಮಯವಾದ ಕ್ರೀಡೆಯಲ್ಲಿ ಭಾಗವಹಿಸಬೇಕು. ಇಚ್ಛಿಸಿದ ಕ್ರೀಡೆಯ ಆಯ್ಕೆಯಲ್ಲಿ ಆತುರ ಪಡಬಾರದು.
  • ಉನ್ನತಿ ಪರಿಣಿತಿ ಹಂತ : ಈ ಹಂತವು 9 ರಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ವಯಸ್ಸಿನವರಿಗೆ ಅನ್ವಯಿಸುತ್ತದೆ. ಈ ಸಂದರ್ಭದಲ್ಲಿ ಕ್ರೀಡಾಪಟುವಿನ ದೈಹಿಕ ಬೆಳವಣಿಗೆಯು ಅಂತಿ9ಮ ಚರಣದಲ್ಲಿದ್ದು, ಇಲ್ಲಿ ಯಾವುದಾದ್ರೊಂದು ಪಂದ್ಯವನ್ನು ಆಯ್ದು ಅದರಲ್ಲಿ ಪರಿಪಕ್ವವಾಗಲು ಉನ್ನತ ಮಟ್ಟದ ತರಬೇತಿಯನ್ನು ನೀಡಬೇಕು. ಈ ಹಂತದಲ್ಲಿ ಕಠಿಣವಾದ ಕೌಶಲ್ಯಗಳನ್ನು ಹೇಳಿಕೊಡಬಹುದು.

  • ತರಗತಿ ತೆಗೆದುಕೊಳ್ಳುವ ಮುನ್ನ ಪೂರ್ವ ತಯಾರಿ

    1. ಆಟದ ಸ್ಥಳದ ಸ್ವಚ್ಛತೆ ಮತ್ತು ಆಟಕ್ಕೆ ಸಂಬಂಧಿಸಿದೆ ಗೆರೆ, ವೃತ್ತ ಹೀಗೆ ಗುರುತುಗಳನ್ನು ಮಾರ್ಕಿಂಗ್ ಪೌಡರ್ ಇಲ್ಲವೇ ಸುಣ್ಣದಿಂದ ಹಾಕಿರಬೇಕು (ಕಡ್ಡಿ ಗೆರೆಯಾದರೂ ಸರಿಯೇ)
    2. ಆಟೋಪಕರಣವನ್ನು ಶಿಕ್ಷಕರ ಮೇಜು ಕುರ್ಚಿಗಳ ಪಕ್ಕದಲ್ಲಿಟ್ಟಿರಬೇಕು.(ಆಟದ ಮೈದಾನದಲ್ಲಿ ಆಟೋಪಕರಣವನ್ನು ಜೋಡಿಸಿಟ್ಟಿರಬೇಕು),
    3. ಶಿಕ್ಷಕರ ಮೈದಾನದಲ್ಲಿರುವ ಮೇಜಿನ ಮೇಲೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತು ಸಾಮರ್ಥ್ಯ ಗುರುತಿಸುವ ಪುಸ್ತಕವಿರಬೇಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು.
    4. ಆಟದ ಉದ್ದೇಶ ಹಾಗೂ ಇಂದಿನ ಪಾಠದ ಯೋಜನೆ ತಯಾರು ಮಾಡಿರಬೇಕು, ಹಿಂದಿನ ದಿನದ ಪಾಠದ ಬಗ್ಗೆ ಪ್ರಶ್ನೆಗಳನ್ನು ಪಾಠ ಟಿಪ್ಪಣಿಯಲ್ಲಿ ಸೇರಿಸಿರಬೇಕು.
    5. ಶಿಕ್ಷಕರು ಸೂಕ್ತ ಸಮವಸ್ತ್ರ ಮತ್ತು ಸೀಟಿಯೊಂದಿಗೆ ತಯಾರಾಗಬೇಕು.
    6. ಮಕ್ಕಳು ಆಯಾ ಆಟಕ್ಕೆ ಸಂಬಂಧಿಸಿದ ಸಮವಸ್ತ್ರ ಧರಿಸುವ ಕಡೆ ಗಮನ ಹರಿಸಬೇಕು.

    ಕ್ರೀಡಾ ತರಬೇತಿಯಲ್ಲಿ ಸದಾ ನೆನಪಿನಲ್ಲಿಟ್ಟುಕೊಳ್ಳುಬೇಕಾದ ವಿಚಾರಗಳು

    1. ಕಿರಿಯ ವಯಸ್ಸಿನ ಕ್ರೀಡಾಪಟುಗಳು ಪುಟ್ಟ ಯುವಕರಲ್ಲ.
    2. ಮಕ್ಕಳ ಬೆಳವಣಿಗೆ ವಯಸ್ಸಿನಲ್ಲಿ ಸಾಮಾನ್ಯವಾಗಿ ಕಂಡುಬರುವ ದೈಹಿಕ ಬೆಳವಣಿಗೆ ಮತ್ತು ವಿಕಾಸಗಳ ಕಡೆಗೆ ಜ್ಞಾನವಿರಬೇಕು. ಮಕ್ಕಳ ಸಾಧನೆಯ ಬಗ್ಗೆ ಅತಿಯಾದ ನಿರೀಕ್ಷೆ ಮಾಡಬಾರದು.
    3. ಬೆಳವಣಿಗೆ ಹಂತದಲ್ಲಿರುವ ಕಿರಿಯ ಕ್ರೀಡಾಪಟುಗಳಿಗೆ ತರಬೇತಿಯನ್ನು ನೀಡುವಾಗ ಹೆಚ್ಚಿನ ಗಮನಹರಿಸಬೇಕು.
    4. ಕ್ರೀಡಪಟುಗಳಿಗೆ ಮೊದಲು ಆಸಕ್ತಿ ಬೆಳೆಸಿ ನಿರಾಶೆಯಾಗದಂತೆ ನೋಡಿಕೊಳ್ಳಬೇಕು.
    5. ಸರ್ವತೋಮುಖ್ ಬೆಳ್ವಣಿಗೆಯ ಹಂತದಲ್ಲಿರುವ 1ರಿಂದ8ನೇ ತರಗತಿ ವಯಸ್ಸಿನ ಮಕ್ಕಳಿಗೆ ಯಾವುದೇ ಒಂದು ನಿರ್ದಿಷ್ಟ ಆಟಕ್ಕೆ ಸೀಮಿತಗೊಳಿಸಬಾರದು.
    6. ಸ್ವರ್ಧೆಗಳಲ್ಲಿ ಸೆಣಸಲು ಆತುರದ ಪರಿಣಿತಿಯನ್ನು ಪಡೆಯಲು ಪ್ರಯತ್ನಿಸಬಾರದು.
    7. ಗಾಬರಿ, ಭಯ, ಆತಂಕವಿರುವಾಗ ಯಾವುದೇ ಕೌಶಲ್ಯಗಳನ್ನು ಹ್ರ್ಳಿಕೊಟ್ಟು ಕಲಿಸಬಾರದು.
    8. ಕಲಿಕೆಯ ಹಂತದಲ್ಲಿ ತಪ್ಪು ಕಲ್ಪನೆಗಳು ನುಸುಳದಂತೆ ನೋಡಿಕೊಳ್ಳಬೇಕು.
    9. ಮಕ್ಕಳ ಮನೋವಿಜ್ಞಾನದ ಬಗ್ಗೆ ತಿಳಿದುಕೊಂಡಿರಬೆಕು.
    10. ಮಾತು ಕಡಿಮೆ ಮಾಡಿ, ಕೆಲಸ ಹೆಚ್ಚು ಮಾಡಬೇಕು.

    ತರಗತಿ ತೆಗೆದುಕೊಂಡ ನಂತರ ಗಮನಿಸಬೇಕಾದ ಅಂಶಗಳು

    1. ತರಗತಿಯನ್ನು ತೆಗೆದುಕೊಂಡ ನಂತರ ಹಾಜರಾತಿಯ ಬಗ್ಗೆ ತಿಳಿದು ಕೊಳ್ಳುವುದು. ಹಾಗೂ ಮಕ್ಕಳ ಸ್ವಚ್ಛತೆ ಆರೋಗ್ಯ, ಸಮವಸ್ತ್ರದ ಕಡೆಗೆ ಗಮನ ಹರಿಸಿ ಅನಾರೋಗ್ಯದ ವಿದ್ಯಾರ್ಥಿಗಳು ಒಂದೆಡೆ ಕುಳಿತು ಚಟುವಟಿಯನ್ನು ವಿಕ್ಷಿಸುವಂತೆ ತಿಳಿಸಬೇಕು.
    2. ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಚಟುವಟಿಕೆಯ ಅವಶ್ಯಕತೆ ಕಂಡುಬಮ್ದರೆ ಅದಕ್ಕೆ ತಕ್ಕಂತೆ ವ್ಯವಸ್ಥೆಯನ್ನು ತಕ್ಷಣ ಮಾಡಿಕೊಳ್ಳಬೇಕಾಗುತ್ತದೆ.
    3. ಶಿಕ್ಷಕನು ಹೇಳಿಕೊಡುವ ಚಟುವಟಿಕೆಯು ಎಲ್ಲಾ ಮಕ್ಕಳಿಗೆ ಕೇಳಿಸುವಂತೆ ಎಲ್ಲಾ ಮಕ್ಕಳು ನೋಡುವಂತೆ ಪ್ರದರ್ಶನ ಮಾಡಿ ಹಾಗೂ ವಿವರಣೆಗಳನ್ನು ನೀಡುತ್ತಾ ಹೇಳಿಕೊಡಬೇಕು.
    4. ಶಿಕ್ಷಕರು ಮೊದಲು ಅಖಂಡ ಖಂಡ ಪದ್ಧತಿಯಲ್ಲಿ ಮಾಡಿ ತೋರಿಸಿ ನಂತರ ಮಕ್ಕಳಿಗೆ ಖಂಡ ಅಖಂಡ ಪದ್ಧತಿಯಲ್ಲಿ ಮಾಡಿಸಬೇಕು.
    5. ಶಿಕ್ಷಕರು ತಪ್ಪುಗಳನ್ನು ತಕ್ಷಣತಿದ್ದುತ್ತ ಚುರುಕಾಗಿ ಓಡಾಡುತ್ತಿರಬೇಕು ಹಾಗೂ ಆಜ್ಞೆಗಳನ್ನು ಸಾವ್ ಧಾನ್ ಸ್ಥಿತಿಯಲ್ಲಿ ಮಕ್ಕಳ ಮುಂದೆ ನಿಂತು ಕೊಡಬೇಕು.
    6. ಆಯಾ ವಿಭಾಗದ ಚಟುವಟಿಕೆಯನ್ನು ಆಯಾ ಸಮಯದಲ್ಲಿ ಮುಗಿಸಲು ಪ್ರಯತ್ನಿಸಬೇಕು.
    7. ಶಿಕ್ಷಕರು ಕೆಲವೊಮ್ಮೆ ಚಟುವಟಿಕೆಗಳನ್ನು ಮಾಡುತ್ತಾ ಮಕ್ಕಳು ಅದನ್ನು ಅನುಸರಿಸುವಂತಯೇ ತಿಳಿಸಿ ಅದರಂತೆಯೂ ಸಹ ಚಟುವಟಿಕೆ ಮಾಡಿಸಬಹುದು.
    8. ತರಗತಿಯಲ್ಲಿ ಸಂತೋಷ, ಮನರಂಜನೆ, ವಿನೋದಗಳಿರಬೇಕು. ಆದರೆ, ಬಿಗಿ ರಹಿತ ತರಗತಿ ಗೊಂದಲ ಮತ್ತು ಅಶಿಸ್ತಿನಿಂದ ಇರುವುದೆಂಬ ಅಂಶವನ್ನು ಸಹ ತಿಳಿದಿರಬೇಕು.
    9. ಆಯಾ ಪರಿಸರಕ್ಕೆ ತಕ್ಕಂತೆ ಬೋಧನೆಯನ್ನು ಮತ್ತು ವಿಷಯಗಳನ್ನು ಸಂದರ್ಭಾನುಸಾರ ಮಾಡಬೇಕು.
    10. ಶಿಕ್ಷಕರು ಚಟುವಟಿಕೆಯನ್ನು ಹೇಲಿಕೊಡುವಾಗ ವಿಶ್ ರಾಮ್ ಕೊಟ್ಟು ಚಟುವಟಿಕೆ ಮಾಡಿಸುವಾಗ ಸಾವ್ ಧಾನ್ ಕೊಟ್ಟು ಮಾಡಿಸಬೇಕು.
    11. ಮಕ್ಕಳೀಗೆ ಸ್ವತಂತ್ರವಾಗಿ ಅಭ್ಯಾಸ ಮಾಡಲು ಕಾಲಾವಕಾಶವನ್ನು ಮಾಡಿಕೊಟ್ಟು ಆ ಸಮಯದಲ್ಲಿ ತಪ್ಪುಗಳನ್ನು ಶಿಕ್ಷಕರು ತಿದ್ದಬಹುದು.
    12. ತರಗತಿಯಲ್ಲಿ ಸೂಕ್ತವಾಗಿ ಚಟುವಟಿಕೆಯನ್ನು ಮಾಡುವ ಹಾಗೂ ಕಾರ್ಯಕ್ರಮವನ್ನು ನಿಭಾಯಿಸುವ ನಾಯಕನನ್ನು ಗುರುತಿಸಿ ಅವನಿಂದ ಚಟುವಟಿಕೆಯನ್ನು ಮಾಡಿಸಬೇಕು.
    13. ಎಲ್ಲಾ ಮಕ್ಕಳು ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದು.
    14. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪರೋಕ್ಷವಾಗಿ ಸಹಾಯ ಮತ್ತು ಪ್ರೋತ್ಸಾಹಗಳು ಅವಶ್ಯಕವಾಗಿರುತ್ತದೆ. ದೈಹಿಕ ಶಿಕ್ಷಣದ ಮೂಲ ಉದ್ದೇಶಗಳಾದ ದೈಹಿಕ ಚಲನೆ ಮನರಂಜನೆ ಶಿಸ್ತು ಈ ಮೂರು ಅಂಶಗಳನ್ನು ಒಳಗೊಂಡ ತರಗತಿಯನ್ನು ಶಿಕ್ಷಕನು ತೆಗೆದುಕೊಳ್ಳುವುದು ಬಹಳ ಮುಖ್ಯ ವಿಶ್ರಾಂತಿ ಮತ್ತು ಆರೋಗ್ಯ ಶಿಕ್ಷಣದ ಬೋದನೆಯಲ್ಲಿ ಅನಾರೋಗ್ಯದಿಂದ ತರಗತಿಯಿಂದ ಹೊರಗುಳಿದ ವಿದ್ಯಾರ್ಥಿಗಳೂ ಸಹ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು.
    15. ಕಲಿಕೆ ನಿಧಾನವಾಗಿದ್ದರೂ ಸಹ ಆತುರಗೊಳ್ಳದೆ ತಾಳ್ಮೆಯಿಂದ ಕಲಿಸಿ ಉತ್ತಮ ವಾದುದನ್ನು ರೂಢಿಸುವುದು ಬಹಳ ಮುಖ್ಯವಾಗಿದೆ.
    16. ಮಕ್ಕಳ ಚಟುವಟಿಕೆಯನ್ನು ಪ್ರೀತಿಯಿಂದ ಗಮನಿಸಿ ಅದರಲ್ಲಿರುವ ವಿಶೇಷತೆಗಳನ್ನು ಮನದಾಳದಲ್ಲಿ ಸವಿಯುವ ಮಾಹಾನ್ ಸಹೃದಯಿ ಬಂಧುವೇ ಈ ಪಾಠದ ಯಶಸ್ವಿ ಶಿಕ್ಷಕನಾಗುವನು.
    17. ತರಗತಿಯ ವಿಸರ್ಜನೆಯಲ್ಲಿ ಒಂದು ವಿಶೇಷವಾದ ಆರೋಗ್ಯ, ದೈಹಿಕ ಶಿಕ್ಷಣ ಇಮ್ತಹ ಚಟುವಟಿಕೆಗಳ ನುಡಿ ಮುತ್ತುಗಳನ್ನು, ಗಾದೆಗಳನ್ನು ಘೋಷಣೆಯ ಮೂಲಕ ಸುಂದರವಾಗಿ ಒಂದೇ ಸಮನೆ ಕೂಗಿಸಿ ಸಂತೋಷದಿಂದ ಮತ್ತೆ ಮಕ್ಕಳು ಆಟದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ವಿಸರ್ಜಿಸುವುದು.
    ******ಮಾಹಿತಿ ಕೃಪೆ: ವಿಕಾಸ್‌ಪೀಡಿಯಾ******

    08 ಆಗಸ್ಟ್ 2018

    books-market




    *ಕನ್ನಡ ದೀವಿಗೆ* ಬ್ಲಾಗ್ ನ ವ್ಯವಸ್ಥಾಪಕರಾದ ಶ್ರೀ ಮಹೇಶ್ ಎಸ್. ಅವರು ಈಗಾಗಲೇ ಹತ್ತನೇ ತರಗತಿಯ ಎಲ್ಲಾ ಅಧ್ಯಾಯಗಳ ನೋಟ್ಸ್ ತಯಾರಿಸಿ ರಾಜ್ಯದ ಎಲ್ಲಾ ಕನ್ನಡ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆಯಬೇಕೆಂಬ ನಿಟ್ಟಿನಲ್ಲಿ ಅವರ ನೋಟ್ಸ್ಅನ್ನು ಪುಸ್ತಕ ರೂಪದಲ್ಲಿ ತರಲಾಗಿದೆ. 

    ಕನ್ನಡ ಪಠ್ಯಪುಸ್ತಕದ ಆಕಾರದಷ್ಟೇ ಇರುವ ಪುಸ್ತಕದ ಬೆಲೆಯು ₹100 ಆಗಿದ್ದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ *ಕೇವಲ ₹60* ಗೆ ನೀಡಲಾಗುತ್ತಿದೆ. 

    ಕರ್ನಾಟಕದ ಯಾವುದೇ ಸ್ಥಳಕ್ಕೂ ತಲುಪಿಸಲಾಗುತ್ತದೆ.

    ಪ್ರತಿಗಳಿಗಾಗಿ ಸಂಪರ್ಕಿಸಿ :
    ನವಿಲುಗರಿ ಪ್ರಕಾಶನ,
    ಹಾಸನ.
    9740053988

    ಸಪ್ನ ಬುಕ್ ಹೌಸ್ ಹಾಗೂ ನವ ಕರ್ನಾಟಕ ಪಬ್ಲಿಕೇಷನ್ಸ್ ನಲ್ಲೂ ಲಭ್ಯವಿದೆ.



    ***********************************************************

    05 ಆಗಸ್ಟ್ 2018

    ಬಾಲಕಾರ್ಮಿಕ ಪದ್ಧತಿ ನಿಷೇಧ

    ಬಾಲದುಡಿಮೆಯನ್ನು ನಿಷೇಧಿಸಲು ಮಾರ್ಗಸೂಚಿಗಳು

    • ಬಾಲದುಡಿಮೆ (ನಿಷೇಧ ಮತ್ತು ನಿಯಂತ್ರಣ ವಿನಿಯಮ) ಅಧಿಸೂಚನೆ 1986 ರಂತೆ 15 ಉದ್ಯೋಗಗಳು ಮತ್ತು 57 ಸಂಸ್ಕರಣಾ ಉದ್ಯಮಗಳಲ್ಲಿ ಬಾಲದುಡಿಮೆಯನ್ನು ನಿಷೇಧ ಮಾಡಲಾಗಿದೆ. ಈ ವಿಷಯವಾಗಿ ಕಾರ್ಮಿಕ ಇಲಾಖೆಯು ಉದ್ಯೋಗ ನೀಡುವ ಎಲ್ಲರಿಗೂ ಹಾಗೂ ಉದ್ಯಮಿಗಳಾಗ ಬಯಸುವವರಿಗೆ ಬಿಗಿಯಾದ ಎಚ್ಚರಿಕೆ ನೀಡಬೇಕು. ಕ್ಷೇತ್ರವಾರು, ಚಲಿಸುವ ಕಾರ್ಮಿಕ ನ್ಯಾಯಾಲಯಗಳ ಮೂಲಕ ಇದನ್ನು ಒಂದು ಆಂದೋಲನದ ರೀತಿಯಲ್ಲಿ ಕೈಗೆತ್ತಿಕೊಳ್ಳಬೇಕು ಮತ್ತು ಈಗಾಗಲೇ ದಾಖಲಿಸಿರುವ ಪ್ರಕರಣಗಳನ್ನು ಸೂಕ್ತವಾಗಿ ಮುನ್ನಡೆಸಲು ಒಂದು ಕಾರ್ಯಯೋಜನೆಯನ್ನು ರೂಪಿಸಬೇಕು.
    • ಬಾಲ ನ್ಯಾಯಾಲಯ ಅಧಿನಿಯಮ 2006 ಒಂದು ಕಲ್ಯಾಣಕಾರಿ ಅಧಿನಿಯಮವಾಗಿದ್ದು ಇವನ್ನು ಅಲಕ್ಷಿತ ಬಾಲಾಪರಾಧಿಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಪುನರ್ವಸತಿಗಳನ್ನು ನೀಡಲು ಜಾರಿಗೊಳಿಸಿದ್ದು ಇದರ ವ್ಯಾಪ್ತಿಯಲ್ಲಿ ಬಾಲಕಾರ್ಮಿಕರೂ ಸೇರುತ್ತಾರೆ.
    • ವಿಭಾಗ 2(d) (ia) ರಂತೆ, ’ದುಡಿಯುವ ಮಗು’, ’ರಕ್ಷಣೆ ಮತ್ತು ಪೋಷೆಯ ಅಗತ್ಯವಿರುವ ಒಂದು ಮಗು’ ವಿನ ಪರಿಭಾಷಯಲ್ಲಿ ಸೇರುತ್ತದೆ. ಜೆ.ಜೆ ಅಧಿನಿಯಮದ ವಿಭಾಗ 2(k) ದಲ್ಲಿ ’ಮಗು’ವನ್ನು ’ 18 ವರ್ಷಗಳನ್ನು ಪೂರೈಸದ ವ್ಯಕ್ತಿ’ ಎಂದು ಪರಿಭಾಷಿಸಲಾಗಿದೆ. ಇದರಿಂದಾಗಿ, 14 ವರ್ಷದವರೆಗಿನ ಮಕ್ಕಳನ್ನು ದುಡಿಮೆಗೆ ನೇಮಿಸಿಕೊಳ್ಳುವುದನ್ನು ನಿಷೇಧಿಸುವ ಬಾಲದುಡಿಮೆ ಅಧಿನಿಯಮಕ್ಕಿಂತ ಈ ನಿಯಮದ ವ್ಯಾಪ್ತಿ ಹೆಚ್ಚಾಗಿದ್ದು 18 ವರ್ಷದ ವರೆಗಿನ ಎಲ್ಲ ಮಕ್ಕಳಿಗೂ ರಕ್ಷಣೆ ಪೋಷಣೆ ನೀಡುವುದನ್ನು ಒಳಗೊಂಡಿದೆ. ಅಂದರೆ ಬಾಲದುಡಿಮೆ ಅಧಿನಿಯಮದಡಿ ನಿಷೇಧಕ್ಕೆ ಒಳಗಾಗದ ಬಾಲದುಡಿಮೆ, ಜೆ.ಜೆ ಅಧಿನಿಯಮದಡಿ ನಿಷೇಧಕ್ಕೆ ಒಳಗಾಗಿದೆ.
    • ಜೀತಪದ್ಧತಿಯ ನಿಷೇಧ ಅಧಿನಿಯಮ 1976 ನ್ನು ಮಕ್ಕಳನ್ನು ದುಡಿಮೆಯೊಳಗೆ ತೊಡಗಿಸಿಕೊಳ್ಳುವ ಉದ್ದಿಮೆದಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಬಳಸಲೇಬೇಕು. ಬಹಳಷ್ಟು ಮಕ್ಕಳನ್ನು ಒತ್ತೆಯಿಟ್ಟು ಅವರ ಕುಟುಂಬಗಳು ಮುಂಗಡ ಪಡೆದಿರುವ ಪ್ರಕರಣಗಳ್ನು ಗಮನಿಸಲಾಗಿದೆ. ಅಂತಹ ಮಕ್ಕಳು ಬಹುತೇಕವಾಗಿ ವಲಸಿಗರಾಗಿ ದುಡಿಯುತ್ತಿದ್ದಾರೆ. ಈ ಅಧಿನಿಯಮದ ಅಡಿಯಲ್ಲಿ ಬರುವ ಕಣ್ಗಾವಲು ಸಮಿತಿಗಳನ್ನು ಕ್ರಿಯಾಶೀಲಗೊಳಿಸಬೇಕಲ್ಲದೆ, ಕಂದಾಯ ಹಾಗೂ ಕಾರ್ಮಿಕ ಇಲಾಖೆಗಳು ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಈ ಅಧಿನಿಯಮದಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ವಯಸ್ಸಿನ ಯಾವುದೇ ನಿರ್ಬಂಧವಿಲ್ಲದಿರುವುದನ್ನು ಗುರುತಿಸಿಕೊಳ್ಳಬೇಕು ಮತ್ತು ಮುಂಗಡವಾಗಿ ಯಾವ ಸಾಲವನ್ನೂ ನೀಡಿಲ್ಲ ಎಂಬ ಪುರಾವೆಯನ್ನು ಒದಗಿಸುವ ಭಾರ ಉದ್ಯಮದಾರನದಾಗಿರುತ್ತದೆ.
    • ಜತೆಗೆ ಒಬ್ಬ ಗುತ್ತಿದೆದಾರನ ಮೂಲಕ ಬಾಲಕರನ್ನು ದುಡಿಮೆಗೆ ಹಚ್ಚಿರುವ ಪ್ರಕರಣಗಳಲ್ಲಿ ಪ್ರಧಾನ ಉದ್ದಿಮೆದಾರನನ್ನು ಬಾಲದುಡಿಮೆಯ ಗುತ್ತಿಗೆ (ನಿಷೇಧ ಮತ್ತು ನಿಯಂತ್ರಣ) ಅಧಿನಿಯಮ 1970 ರ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು. ಗುತ್ತಿಗೆದಾರರ ಮೂಲಕ ಮಕ್ಕಳನ್ನು ದುಡಿಮೆಗೆ ದೂಡುವ ಈ ಚಾಳಿಯು ಸಾಮಾನ್ಯವಾಗಿದ್ದು ಅನೇಕ ಉದ್ಯಮಿ ಸಂಸ್ಥೆಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಈ ಮಾರ್ಗವನ್ನು ಅನುಸರಿಸುತ್ತವೆ. ಈ ಅಧಿನಿಯಮವು ’ಬದಲಿ ಹೊಣೆಗಾರಿಕೆಯ’ ನೀತಿಯನ್ನಾಧರಿಸುತ್ತವೆ ಮತ್ತು ಉದ್ಯಮ ಸಂಸ್ಥೆಗಳು ಮತ್ತು ಗುತ್ತಿದೆದಾರರನ್ನು ಬಾಲದುಡಿಮೆ ಕೈಗೊಳ್ಳದಂತೆ ನಿರ್ಬಂಧಿಸಲು ಈ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಬಳಸಬಹುದು..

             ಈ ಮೇಲೆ ಹೇಳಿದ ಎಲ್ಲ ಅಧಿನಿಯಮಗಳನ್ನು ಒಟ್ಟಾಗಿ ಸೇರಿಸಿ ಗಮನಿಸಿದಾಗ ಬೇಸಾಯ ವೃತ್ತಿ ಮತ್ತು ಸಂಬಂಧಿಸಿದ ಇತರ ಚಟುವಟಿಕೆಗಳನ್ನು ಒಳಗೊಂಡಂತೆ, ಕಾರ್ಮಿಕ ಬಲದಲ್ಲಿರುವ ಬಹುತೇಕ ಮಕ್ಕಳನ್ನು ಆವರಿಸುತ್ತವೆ ಮತ್ತು ಸಂಬಂಧಿಸಿದ ಉದ್ಯಮದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಇವುಗಳನ್ನು ಪ್ರತ್ಯೇಕವಾಗಿ ಅಥವಾ ಒಟ್ಟಾಗಿ ಬಳಸಲೇಬೇಕಾಗುತ್ತದೆ. ನಿಯಮಾವಳಿಗಳನ್ನು ಕಠಿಣವಾಗಿ ಜಾರಿಗೊಳಿಸುವುದೇ ಉದ್ಯಮದಾರರು ಅದರಿಂದ ವಿಮುಖರಾಗಲು ಕಾರಣವಾಗುವುದೆಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ಮಕ್ಕಳು ಅಗ್ಗದ ದುಡಿಮೆಗೆ ಲಭ್ಯರು ಮತ್ತು ಅವರನ್ನು ಹೆಚ್ಚು ಅವಧಿಯವರೆಗೆ ದುಡಿಸಿಕೊಳ್ಳಲು ಸಾಧ್ಯ ಎಂಬ ಅಂಶಗಳೇ ಬಾಲದುಡಿಮೆಗೆ ಕಾರಣವಾಗಿದೆ. ಇದು ಮಕ್ಕಳಿಗೆ ಉದ್ಯಮದಾರರು ಮಾಡುತ್ತಿರುವ ಉಪಕಾರವೇನೂ ಅಲ್ಲ. ಬದಲಿಗೆ ತಮ್ಮ ಖರ್ಚನ್ನು ಕಡಿಮೆ ಮಾಡಿಕೊಳ್ಳುವ ಒಂದು ಮಾರ್ಗ. ಇದಲ್ಲದೆ, ಸಾರ್ವಜನಿಕ ವಲಯದ ಎಲ್ಲ ಸಂಸ್ಥೆಗಳು, ಸರ್ಕಾರದ ಅಧೀನ ಸಂಸ್ಥೆಗಳು, ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳು ತನ್ನೆಲ್ಲ ಸಿಬ್ಬಂದಿಗೆ ಮಕ್ಕಳನ್ನು ಮನೆ ಕೆಲಸಕ್ಕೆ ನೇಮಿಸದಂತೆ ಅಥವಾ ತಮ್ಮ ಕಾರ್ಯಸ್ಥಳದಲ್ಲಿ ಯಾವುದೇ ತರಹದಲ್ಲಿ ಬಾಲದುಡಿಮೆಯನ್ನು ಪ್ರೋತ್ಸಾಹಿಸದಂತೆ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಘೋಷಿಸ ಬೇಕು. ಮೇಲೆ ಹೇಳಿದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲು ಅನುವಾಗುವಂತೆ ನಿರ್ದಿಷ್ಟ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಲು NCPCR ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ದೂರದರ್ಶನ ಕಾರ್ಯಕ್ರಮಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ಭಾಗವಹಿಸುವ ಮಕ್ಕಳ ವಿಷಯಕ್ಕೆ ಸಂಬಂಧಿಸಿದ ಹಾಗೆ NCPCR ಗೆ ಒಂದು ಕಾರ್ಯಸಮೂಹವನ್ನು ನೇಮಕಮಾಡಿದೆ. ಹಿಂದಿನ ಬಾಲತಾರೆ ಸಚಿನ್ ಪಿಲಗಾಂವ್ ಕರ್ ಮತ್ತು ಜಾಹೀರಾತು ತಜ್ಞ ಪ್ರಲ್ಹಾದ ಕಕ್ಕರ್ ಅಲ್ಲದೆ ಮುದ್ರಣ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಂದ ಪ್ರತಿನಿಧಿಗಳು ಈ ಕಾರ್ಯ ಸಮೂಹದಲ್ಲಿ ಸೇರಿದ್ದಾರೆ. ದೂರದರ್ಶನದ ಸರಣಿಗಳು, ರಿಯಾಲಿಟಿಷೋಗಳು ಮತ್ತು ಜಾಹೀರಾತುಗಳಲ್ಲಿ ಪಾಲ್ಗೊಳ್ಳುವ ಮಕ್ಕಳ ಹಕ್ಕುಗಳ ಆಬಾಧಿತ ಉಲ್ಲಂಘನೆಯನ್ನು ನಿಯಂತ್ರಿಸುವ ಅಗತ್ಯವನ್ನು ಈ ಸದಸ್ಯರು ಚರ್ಚಿಸಿದ್ದಾರೆ. NCPCR ನ ಸದಸ್ಯೆ ಸಂಧ್ಯಾ ಬಜಾಜ್ ಇಂತಹ ಮಕ್ಕಳ ಕಾರ್ಯಸ್ಥಿತಿಗಳನ್ನು ನಿಯಂತ್ರಿಸಲು ಮಾರ್ಗಸೂಚಿಕೆಗಳನ್ನು ಸಿದ್ಧಪಡಿಸಲು ಒಂದು ಪ್ರಸ್ತಾಪವನ್ನಿಟ್ಟಿದ್ದಾರೆ. ಎಲ್ಲ ದೂರದರ್ಶನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಪ್ರತೀ ದಿನ ಕೆಲಸಮಾಡಬೇಕಾದ ಒಟ್ಟು ಗಂಟೆಗಳು ಹಾಗೂ ಒಂದು ವರ್ಷದಲ್ಲಿ ಮಾಡಬಹುದಾದ ಒಟ್ಟು ಅವಧಿಯನ್ನು ನಿರ್ದಿಷ್ಟಗೊಳಿಸಬೇಕು. ಮಕ್ಕಳು ಮತ್ತವರ ಕುಟುಂಬಗಳು ದಾಖಲಿಸಿದ ದೂರುಗಳನ್ನು ನಿರ್ವಹಿಸಲು ಒಂದು ವ್ಯವಸ್ಥೆಯನ್ನು ಅಳವಡಿಸಲು ಸಹ ನಿರ್ಧರಿಸಲಾಯಿತು; ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವ ದೂರದರ್ಶನ ಚಾನೆಲ್ ಗಳು / ನಿರ್ಮಾಣ ಸಂಸ್ಥೆಗಳ ವಿರುದ್ಧ ಕ್ರಮಗಳನ್ನು ನಿರೂಪಿಸುವುದು; ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವುದಕ್ಕಾಗಿ ದೂರದರ್ಶನ ಕಾರ್ಯಕ್ರಮಗಳ ಆಯೋಜಕರು ಹಾಗೂ ಮಕ್ಕಳ ಪೋಷಕರ ಜವಾಬ್ದಾರಿಗಳನ್ನು ನಿರೂಪಿಸುವುದು: ಮಕ್ಕಳಿಗೆ ಸಂದಾಯವಾಗ ಬೇಕಾದ ಹಣಕ್ಕೆ ಸೂಕ್ತ ವ್ಯವಸ್ಥೆ – ಉದಾಹರಣೆಗೆ ಶೈಕ್ಷಣಿಕ ಬಾಂಡ್ ಗಳೂ/ ಸರ್ಟಿಫಿಕೇಟ್ ಗಳು ಮತ್ತು ಕೊನೆಯದಾಗಿ ಈ ಮಾರ್ಗಸೂಚಿಕೆಗಳ ಪರಿಷ್ಕರಣೆಗೆ ಒಂದು ವ್ಯವಸ್ಥೆ ರೂಪಿಸುವುದು. ಕಾರ್ಯಪಡೆಯು, ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿಗಳನ್ನು ಮುಂದಿನ ಕ್ರಮಗಳಿಗಾಗಿ ಭೇಟಿಮಾಡುವರು.

    ಬಾಲ ಕಾರ್ಮಿಕತೆ ನಿಷೇಧ

         ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಯುನಿಸೆಫ್ ಮತ್ತು ಐಎಲ್‌ಒ ಸಹಯೋಗದೊಂದಿಗೆ ಎಲ್ಲ ರೀತಿಯ ಬಾಲಕಾರ್ಮಿಕತೆಯನ್ನ್ನುನಿಷೇದಿಸಲು ಮತ್ತು ಪ್ರತಿ ಮಗುವೂ ಶಾಲೆಗೆ ಹೋಗುವುದನ್ನು ಖಾತ್ರಿ ಪಡಿಸಲು ರಾಜ್ಯ ಮಟ್ಟದ ಸಲಹಾ ಸಭೆಗಳ ಸರಣಿಗಳನ್ನು ನಡೆಸಲಿದೆ. ಹಕ್ಕು ಆಧಾರಿತ ದೃಷ್ಟಿಕೋನವನ್ನು ಅಳವಡಿಸಿಕೊಂಡು, ಬಾಲಕಾರ್ಮಿಕತೆಯ ಪೂರ್ಣ ನಿಷೇದ ಮತ್ತು ಔಪಚಾರಿಕ ಶಾಲೆಗಳಲ್ಲಿನ ಪೂರ್ಣಾವಧಿಯ ಶಿಕ್ಷಣದ ನಡುವಿನ ಬಿಡಿಸಿಕೊಳ್ಳಲಾಗದ ಬಂಧವನ್ನು ಎತ್ತಿ ಹಿಡಿದಿವೆ.
         ಅದು ಬಾಲ ಕಾರ್ಮಿಕತೆ ವ್ಯಾಖ್ಯೆಯಲ್ಲಿ ಬಾಲಕಾರ್ಮಿಕತೆ ಮತ್ತು ಮಕ್ಕಳ ಕೆಲಸ, ಅಪಾಯಕಾರಿ ಮತ್ತು ಅಪಾಯಕಾರಿಯಲ್ಲದ ಬಾಲಕಾರ್ಮಿಕತೆಯ ನಡುವೆ ಔಪಚಾರಿಕವಾಗಿ ವ್ಯತ್ಯಾಸ ಮಾಡದಿರುವ ಅಂಶವನ್ನು ಒತ್ತಿ ಹೇಳಿತು. ಅದು ಮಕ್ಕಳು ಮನೆಯಲ್ಲಿ ಮಾಡುವ ಕೆಲಸವನ್ನು, ಕೃಷಿ ಕೆಲಸವನ್ನು ಮತ್ತು ಅವರನ್ನು ಶಾಲೆಯಿಂದ ದೂರವಿಡುವ ಎಲ್ಲ ಚಟುವಟಿಕೆಗಳನ್ನು ಬಾಲ ಕಾರ್ಮಿಕತೆ ಎಂದೆ ಗುರುತಿಸಲು ಬಯಸಿತು. ಇದು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶ (UNCRC) ದ ನಿರ್ಧಾರ ಮತ್ತು 18 ವರ್ಷದ ಒಳಗಿನ ಎಲ್ಲರೂ ಮಕ್ಕಳೇ ಎಂಬ ನಿರ್ಣಯಕ್ಕೆ ಅನುಗುಣವಾಗಿರಬೇಕು.
           ಈ ವರೆಗೆ ಜೈಪುರ, ಲಕ್ನೋ ಮತ್ತು ಬೆಂಗಳೂರುಗಳಲ್ಲಿ ಮೂರು ಸಮಾಲೋಚನೆಗಳನ್ನು ನಡೆಸಲಾಗಿದೆ. ದೇಶದ ಇತರ ಭಾಗಗಳಲ್ಲಿ ಇನ್ನೂ 9 ಸಮಾಲೋಚನೆಗಳನ್ನು ನಡೆಸಲಾಗುವುದು.ಅದರ ಅಂತಿಮ ಸಮಾವೇಶವು ಡಿಸೆಂಬರ್‌ ೧೧-೧೨ ರಂದು ನ್ಯಾಷನಲ್‌ ಫೋರಂ ನವದೆಹಲಿಯಲ್ಲಿ ಬಾಲ ಕಾರ್ಮಿಕತೆಯ ಮತ್ತು ಮಕ್ಕಳ ಶಿಕ್ಷಣದ ಹಕ್ಕಿನ ಸಾಧನೆಗಾಗಿ ನಡೆಸಲಾಗುವುದು.
          ಈ ವರೆಗೆ ನಡೆದ ಸಮಾಲೋಚನೆಗಳಲ್ಲಿ ಸರಕಾರೇತರ ಸಂಸ್ಥೆಗಳು ಮತ್ತು ಆಸಕ್ತ ನಾಗರೀಕ ಸಂಘಟನೆಗಳ ಪ್ರತಿನಿಧಿಗಳು, ಸಕ್ರಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಬಾಲ ಕಾರ್ಮಿಕತೆಯನ್ನು ನಿಷೇದಿಸಲು ಮತ್ತು ಮಕ್ಕಳ ಶಿಕ್ಷಣ ಹಕ್ಕನ್ನು ನೈಜವಾಗಿಸಲು ಬಯಸಿದರು. ಮಕ್ಕಳೂ ತಾವು ಕಲ್ಲುಗಣಿಗಳಿಂದ, ಸೀರೆ ನೇಯವ ಮಗ್ಗಗಳಿಂದ ಮತ್ತು ಇತರ ಕಠಿನ ಪರಿಶ್ರಮ ಬಯಸುವ ಕೆಲಸಗಳಿಂದ ಹೊರಬಂದ ತರುವಾಯ ತಮಗೆ ದೊರಕಿದ ಅತಿ ಹೆಚ್ಚಿನ ಅವಕಾಶಗಳನ್ನು ಕುರಿತು ಮಾತನಾಡಿದರು. ಹೆತ್ತವರೂ ಕೂಡಾ ತಮ್ಮಮಕ್ಕಳಿಗೆ ದೊರೆತ ಅಪಾರ ಅವಕಾಶಗಳ ಬಗ್ಗೆ ಮಕ್ಕಳ ಅಭಿಪ್ರಾಯವನ್ನು ಅನುಮೋದಿಸಿದರು.. ವ್ಯಾಪಕವಾಗಿ ನಡೆಸಿದ ಸತತ ಸಾಮಾಜಿಕ ಕ್ರೋಢೀಕರಣದ ಪರಿಣಾಮವಾಗಿ ಬಾಲ ಕಾರ್ಮಿಕತೆಯನ್ನು ಭಾರತದಲ್ಲಿ ನಿಷೇದಿಸುವ ಅಭಿಯಾನವು ಮೊದಲಾಗಿದೆ. ಈ ಉಪಕ್ರಮಗಳು ಶಿಕ್ಷಣ ಕೇಂದ್ರಿಕೃತವಾಗಿರುವುದೆ ಮಕ್ಕಳನ್ನು ದುಡಿಮೆಯಿಂದ ದೂರವಿಡುವ ಅತಿ ಪರಿಣಾಮಕಾರಿ ತಂತ್ರವಾಗಿದೆ ಮತ್ತು ಇದು ಮಕ್ಕಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶೋಷಿಸುವುದನ್ನು ನಿವಾರಿಸುವುದು. ಶಿಕ್ಷಣವು ಅನೇಕರಿಗೆ ದೌರ್ಜನ್ಯದಿಂದ ಬಿಡುಗಡೆ ಮಾಡಿ ಅವರಿಗೆ ಆತ್ಮಗೌರವವನ್ನು ನೀಡಿದೆ.
          2001 ರಲ್ಲಿ ನಡೆದ ಜನಗಣತಿಯ ಪ್ರಕಾರ ಐದು ವರ್ಷದ ಒಳಗಿನ 500,000 ಕ್ಕೂ ಹೆಚ್ಚು ಮಕ್ಕಳು ಮನೆಗೆಲಸಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬಂದಿದೆ. ಬಡಜನರಿಂದ ಬಂದ ಶಿಕ್ಷಣದ ಸಲುವಾಗಿನ ಅಭೂತ ಪೂರ್ವ ಬೇಡಿಕೆಯ ಹೊರತಾಗಿಯೂ, ಲಕ್ಷಾಂತರ ಮಕ್ಕಳು ಹೊಲಗದ್ದೆಗಳಲ್ಲಿ , ಸಿರಿವಂತರ ಮನೆಗಳಲ್ಲಿ, ಹೋಟೆಲುಗಳಲ್ಲಿ , ಖಾನಾವಳಿ ಮೊದಲಾದ ಕಡೆ ಕೆಲಸದಲ್ಲಿ ತೊಡಗಿದ್ದಾರೆ.
            ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಅಧ್ಯಕ್ಷರಾದ ಶಾಂತಾ ಸಿನ್ಹರ ಪ್ರಕಾರ ಮಕ್ಕಳು ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರದಿಂದ ಮತ್ತು ದೇಶದಲ್ಲೆ ಇರುವ ವರ್ಗ ವ್ಯತ್ಯಾಸದಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಮಕ್ಕಳು ಅಭದ್ರತೆ ಮತ್ತು ಹತಾಶೆಯಿಂದ ತುಂಬಿ ತುಳುಕುವ ವಾತಾವರಣದಲ್ಲಿ ಬದುಕುವುದರಿಂದ ಕುಟುಂಬದ ಒಳಗೆ ಮತ್ತು ಹೊರಗೆ ದುರ್ಬಳಕೆಗೆ ಒಳಗಾಗುವ ವರದಿಗಳು ಹೆಚ್ಚುತ್ತಿವೆ. ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಶಾಲೆಯನ್ನು ಬಿಟ್ಟು ಕೆಲಸದಲ್ಲಿ ತೊಡಗಲು ಒತ್ತಡಕ್ಕೆ ಸಿಲುಕುವರು ಮತ್ತು ಅವರಿಗೆ ಬಿಡುವು ಅಥವ ಮನರಂಜನೆಗೆ ಸಮಯ ಇರುವುದೆ ಇಲ್ಲ. ಈ 

    ಕೆಳಗೆ ಕಾಣಿಸಿದವು ಅರಿಯಲೆ ಬೇಕಾದ ಮೂರು ವಿಷಯಗಳಾಗಿವೆ..
    • ಶಾಲೆಬಿಟ್ಟ ಯಾವುದೆ ಮಗುವೂ ಬಾಲ ಕಾರ್ಮಿಕನೆ
    • ಎಲ್ಲ 18 ವರ್ಷದ ವರೆಗಿನ ಮಕ್ಕಳು ಪೂರ್ಣಾವಧಿ ಸಾಂಪ್ರದಾಯಿಕ ಶಾಲೆಗಳಿಗೆ ಹೋಗಬೇಕು.
    • ಎಲ್ಲ ಶಾಲೆಗಳೂ ಕೇಂದ್ರೀಯ ವಿದ್ಯಾಲಯಗಳ ಗುಣಮಟ್ಟದ ಹೊಂದಿರಬೇಕು.
    • ಬಾಲಕಾರ್ಮಿಕತೆಯನ್ನು ಸಂಪೂರ್ಣವಾಗಿ ನಿಷೇದಿಸಬೇಕು.




    ಕೃಪೆ:- http://kn.vikaspedia.in

    ಬಾಲ್ಯವಿವಾಹ ನಿಷೇಧ

    ಬಾಲ್ಯ ವಿವಾಹ ನಿಷೇಧ ಕಾಯ್ದೆ

    ಓದಲು ಈ ಕೆಳಗಿನ ಅಂಶಗಳನ್ನು ಆರಿಸಿ ....

     

    ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳು

    ಮಕ್ಕಳ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಿಸದೆ ಎಲ್ಲಾ ಮಕ್ಕಳಿಗೆ ಆರೈಕೆ ಮತ್ತು ಸುರಕ್ಷೆ:-
    ಒಬ್ಬ ಪರಿಪೂರ್ಣ ಹಾಗೂ ಸಮಗ್ರ ವ್ಯಕ್ತಿಯಾಗಿ ಬೆಳೆಯುವ ಹಕ್ಕು ಇದೆ. ಬಾಲ್ಯ ವಿವಾಹ ಈ ಎಲ್ಲಾ ಹಕ್ಕುಗಳನ್ನು ಅಸಹನೀಯವಾಗಿ ಉಲ್ಲಂಘಿಸುತ್ತದೆ.
    ದೈಹಿಕ ಮತ್ತು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು:-
    1. ವಯಸ್ಸಿಗೆ ಮೀರಿದ ಜವಾಬ್ದಾರಿ ಹೇರಿಸಿದಂತಾಗುತ್ತದೆ.
    2. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಹೆರಿಗೆ ಸಮಯದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವ ಸಾಧ್ಯತೆಯಿರುತ್ತದೆ.
    3. ವಿಕಲಾಂಗ ಮಕ್ಕಳ ಜನನವುಂಟಾಗುತ್ತದೆ.
    4. ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಹಾಗೂ ಬಲತ್ಕಾರಕ್ಕೆ ಒಳಗಾಗುತ್ತಾರೆ.
    5. ಲೈಂಗಿಕ ಖಾಯಿಲೆಗಳಿಂದ ಹೆಚ್.ಐ,ವಿ./ಏಡ್ಸ್ ಗೆ ಗುರಿಯಾಗುವ ಸಾಧ್ಯತೆ ಇರುತ್ತದೆ.
    6. ರಕ್ತ ಹೀನತೆ ಉಂಟಾಗುತ್ತದೆ ಹಾಗೂ ಕಡಿಮೆ ತೂಕದ ಮಗುವಿನ ಜನನದ ಸಾಧ್ಯತೆ ಇರುತ್ತದೆ.
    7. ಶಿಶು ಮರಣ ಹಾಗೂ ಮಕ್ಕಳ ಮರಣ ಹೆಚ್ಚಾಗುತ್ತದೆ.
    8. ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ.
    9. ಗರ್ಭಪಾತ ಹೆಚ್ಚಾಗುತ್ತದೆ.
    10. . ಗರ್ಭ ಚೀಲಕ್ಕೆ ಪೆಟ್ಟು ಬೀಳುತ್ತದೆ.
    11. ಮಾನಸಿಕ ದುಷ್ಪರಿಣಾಮಗಳು

    12. ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಮಾನಸಿಕ ದೌರ್ಬಲ್ಯತೆಗೆ ಒಳಗಾಗುತ್ತಾರೆ.
    13. ಖಿನ್ನತೆ ಕಂಡು ಬರುತ್ತದೆ.
    14. ಭಯಭೀತ ವಾತಾವರಣ ಕಲ್ಪಸಿದಂತಾಗುತ್ತದೆ.
    15. ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವುದು.
    ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಮತ್ತು ನಿಯಾಮವಳಿಗಳು 2008 ಅನುಷ್ಠಾನ:-
    1. ಈ ಕಾಯ್ದೆಯು ಜಮ್ಮು-ಕಾಶ್ಮೀರ ಮತ್ತು ಪಾಂಡಿಚೇರಿ ಹೊರತು ಪಡಿಸಿ ಭಾರತದ ಎಲ್ಲಾ ನಾಗರೀಕರಿಗೆ ಅನ್ವಯಿಸುತ್ತದೆ.
    2. ಈ ಕಾಯ್ದೆಯಡಿ ಬಾಲ್ಯ ವಿವಾಹವು ಜಾಮೀನು ರಹಿತ ಹಾಗೂ ವಿಚಾರಣಾರ್ಹ ಅಪರಾಧವಾಗಿರುತ್ತದೆ.

    ಬಾಲ್ಯ ವಿವಾಹದಲ್ಲಿ ಈ ಕೆಳಗಿನವರು ತಪ್ಪಿತಸ್ಥರಾಗಿರುತ್ತಾರೆ




  • ಮಕ್ಕಳನ್ನು ಮದುವೆಯಾಗುವ ಯಾವುದೇ ವಯಸ್ಕ ವ್ಯಕ್ತಿ.
  • ಬಾಲ್ಯ ವಿವಾಹವನ್ನು ಏರ್ಪಡಿಸುವ, ನಿರ್ದೇಶಿಸುವ, ನೆರವೇರಿಸುವ ಮತ್ತು ಕುಮ್ಮಕ್ಕು ನೀಡುವ ಯಾವುದೇ ವ್ಯಕ್ತಿ/ಸಂಸ್ಥೆ.
  • ಮಗುವನ್ನು ಹೆತ್ತವರು/ಪೋಷಕರು/ಸಂರಕ್ಷಕರು.
  • ಮಗುವಿನ ಜವಾಬ್ದಾರಿಯನ್ನು ಹೊತ್ತ ಯಾವುದೇ ವ್ಯಕ್ತಿ/ಸಂಸ್ಥೆಯ ನಿರ್ಲಕ್ಷ್ಯತೆಯಿಂದ ಬಾಲ್ಯ ವಿವಾಹವನ್ನು ತಡೆಯಲು ವಿಫಲರಾದವರು
  • ಬಾಲ್ಯ ವಿವಾಹದಲ್ಲಿ ಭಾಗವಹಿಸುವವರು/ಭಾಗವಹಿಸಿದವರು/ ಕಾಯ್ದೆಯಡಿ ನೀಡಿದ ತಡೆಯಾಜ್ಞೆಯನ್ನು ಉಲ್ಲಂಘಿಸಿದವರು.
    • ಬಾಲ್ಯ ವಿವಾಹ ಅಪರಾಧಕ್ಕೆ ನಿಗದಿಪಡಿಸಿದ ಶಿಕ್ಷೆ:-
    • ಎರಡು ವರ್ಷಗಳವರೆಗೆ ಕಠಿಣ ಜೈಲುವಾಸ ಅಥವಾ 1 ಲಕ್ಷ ರೂ. ವರೆಗೆ ದಂಡ ಅಥವಾ ಎರಡೂ
    • ಅಪರಾಧಿ ಮಹಿಳೆಯಾದಲ್ಲಿ ಜೈಲು ಶಿಕ್ಷೆ ವಿಧಿಸುವಂತಿಲ್ಲ

    ಬಾಲ್ಯ ವಿವಾಹ ಅನೂರ್ಜಿತ/ಅಸಿಂಧು/ಶೂನ್ಯವಾಗುವ ಸಂದರ್ಭಗಳು




  • ವಿವಾಹ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಕರಾಗಿದ್ದ ಯಾವುದೇ ಕರಾರು ಪಕ್ಷವು ಜಿಲ್ಲಾ ನ್ಯಾಯಾಲಯವನ್ನು ಅಸಿಂಧು ಆಜ್ಞೆಯ ಮೂಲಕ ರದ್ದುಪಡಿಸಬೇಕೆಂದು ಮನವಿ ಮಾಡಿಕೊಂಡಾಗ,(ಅಸಿಂಧು)    ಸೆಕ್ಷನ್-3.
  • ಕಾನೂನು ಬದ್ದ ಪೋಷಕರ ಬಳಿಯಿಂದ ಬಲವಂತವಾಗಿ ಒಯ್ಯಲ್ಪಟ್ಟಿರುತ್ತಾರೋ,
  • ಬಲವಂತದಿಂದ ಅಥವಾ ವಂಚನೆಯಿಂದ ಪ್ರೇರೇಪಿಸಲ್ಪಟ್ಟಿರುತ್ತಾರೋ,
  • ವಿವಾಹ ಉದ್ದೇಶದಿಂದ ಮಾರಾಟ, ವಿವಾಹದ ನಂತರ ಮಾರಾಟ (ಶೂನ್ಯ ಮತ್ತು ಅಸಿಂಧು)ಸೆಕ್ಷನ್-12.

  • ಸೆಕ್ಷನ್-13 ರಡಿಯಲ್ಲಿ ಹೊರಡಿಸಿದ ತಡೆಯಾಜ್ಞೆ ಉಲ್ಲಂಘಿಸಿ ನಡೆಸುವ ಬಾಲ್ಯ ವಿವಾಹ (ಪ್ರಾರಂಬದಿಂದಲೇ ಶೂನ್ಯ)ಸೆಕ್ಷನ್-

    ಬಾಲ್ಯ ವಿವಾಹದಲ್ಲಿ ಹೆಣ್ಣು ಮಗುವಿಗಿರುವ ಅವಕಾಶಗಳು




  • ಮದುವೆ ಸಮಯದಲ್ಲಿ ನೀಡಲಾದ ಹಣ, ಒಡವೆ ಮತ್ತಿತರ ಮೌಲ್ಯದ ವಸ್ತುಗಳನ್ನು ಪರಸ್ಪರ ಹಿಂದಿರುಗಿಸಲು ಜಿಲ್ಲಾ ನ್ಯಾಯಾಲಯವು ಆದೇಶಿಸಬಹುದು. (ಸೆಕ್ಷನ್-3(4)).
  • ಹುಡುಗಿ ಮರುಮದುವೆಯಾಗುವತನಕ ನಿರ್ವಹಣಾ ವೆಚ್ಚವನ್ನು ಗಂಡಿನ ಕಡೆಯವರು ನೀಡುವಂತೆ ಜಿಲ್ಲಾ ನ್ಯಾಯಾಲಯವು ಆದೇಶಿಸಬಹುದು. (ಸೆಕ್ಷನ್-4(1)).
  • ಒಂದು ಪಕ್ಷ ಹೆಣ್ಣು ಮಕ್ಕಳು ಪ್ರಕರಣವನ್ನು ದಾಖಲಿಸಿದ್ದರೆ, ಮರು ಮದುವೆಯಾಗುವ ತನಕ ಆಕೆಯ ವಾಸ್ತವ್ಯದ ಕುರಿತಂತೆ ಜಿಲ್ಲಾ ನ್ಯಾಯಾಲಯವು ಆದೇಶಿಸಬಹುದು. (ಸೆಕ್ಷನ್-4(4)).
  • ಬಾಲ್ಯ ವಿವಾಹದಿಂದ ಜನಿಸುವ ಮಗುವಿನ ನಿರ್ವಹಣಾ ವೆಚ್ಚ ನೀಡಲು ಆದೇಶ. (ಸೆಕ್ಷನ್-5(4)).

  • ಬಾಲ್ಯ ವಿವಾಹದಿಂದ ಜನಿಸಿದ ಮಕ್ಕಳಿಗೆ ಇರುವ ಅವಕಾಶಗಳು




  • ಬಾಲ್ಯ ವಿವಾಹಿತರಿಗೆ ಜನಿಸಿದ ಮಗು ನ್ಯಾಯಸಮ್ಮತ(ಔರಸ) ಎಂದು ಎಲ್ಲಾ ಸಂದರ್ಭಗಳಲ್ಲೂ ಪರಿಗಣಿಸಲ್ಪಡುತ್ತದೆ.ಸೆಕ್ಷನ್-(6)
  • ಜಿಲ್ಲಾ ನ್ಯಾಯಾಲಯವು ಮಗುವಿನ ಜವಾಬ್ದಾರಿ ಕುರಿತು ಆದೇಶ ಹೊರಡಿಸುವಾಗ ಮಗುವಿನ ಹಿತರಕ್ಷಣೆ ಮತ್ತು ಒಳಿತು ಪ್ರಧಾನ ಆಧ್ಯತೆಯಾಗಿರಬೇಕು. ಸೆಕ್ಷನ್-5(2).
  • ಮಗುವಿನ ಸುಪರ್ದಿ ಆಜ್ಞೆಯಲ್ಲಿ ಇನ್ನೊಂದು ಕಡೆಯವರು ಮಗುವನ್ನು ಭೆಟಿಯಾಗುವ ಅವಕಾಶ ನೀಡುವಂತಹ ನಿರ್ದೇಶನ ಒಳಗೊಂಡಿರಬೇಕು. ಸೆಕ್ಷನ್-5(3).
  • ಮದುವೆಯಾದ ವ್ಯಕ್ತಿ ಅಥವಾ ಆ ವ್ಯಕ್ತಿಯು ಅಪ್ರಾಪ್ತ ವಯಸ್ಕರಾಗಿದ್ದಲ್ಲಿ ಅವರ ಪೋಷಕರು ಮಗುವಿನ ನಿರ್ವಹಣೆಯನ್ನು ಭರಿಸುವಂತೆ ಆದೇಶಿಸಬಹುದು. ಸೆಕ್ಷನ್-5(4).

  • ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು


    ಈ ಅಧಿನಿಯಮದ ಸೆಕ್ಷನ್ -16(1) ರನ್ವಯ ನೇಮಕವಾದ ಅಧಿಕಾರಿಗಳು:-
    ರಾಜ್ಯ ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-
    1. ನಿರ್ದೇಶಕರು, ಯೋಜನಾ ನಿರ್ದೇಶಕರು, ಐಸಿಪಿಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
    2. ಡೈರಕ್ಟರ್ ಜನರಲ್ ಆಫ್ ಪೋಲೀಸ್, ಇನ್ ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್.
    3. ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ.
    4. ಸರ್ಕಾರದ ಕಾರ್ಯದರ್ಶಿಗಳು, ಕಂದಾಯ ಇಲಾಖೆ.
    5. ನಿರ್ದೇಶಕರು, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ.
    6. ಆಯುಕ್ತರು, ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ.
    7. ಆಯುಕ್ತರು, ಕಾರ್ಮಿಕ ಇಲಾಖೆ.
    8. ಆಯುಕ್ತರು,  ಸಮಾಜ ಕಲ್ಯಾಣ ಇಲಾಖೆ.
    9. ನಿರ್ದೇಶಕರು, ಟ್ರೈಬಲ್ ವೆಲ್ ಫೇರ್ ಡಿಪಾರ್ಟಮೆಂಟ್.
    ಜಿಲ್ಲಾ ಮಟ್ಟದ  ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-
    1. ಜಿಲ್ಲಾಧಿಕಾರಿಗಳು.
    2. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು.
    3. ಹಿರಿಯ ಮಕ್ಕಳ ಅಭಿವೃದ್ಧಿ  ಅಧಿಕಾರಿ, ಸ್ಪೆಷಲ್ ಜುವೆನೈಲ್ ಪೋಲೀಸ್ ಯೂನಿಟ್, ಪೋಲೀಸ್ ಇಲಾಖೆ.
    4. ಉಪ ನಿರ್ದೇಶಕರು, ನಿರೂಪಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
    5. ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ.
    6. ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ.
    7. ಜಿಲ್ಲಾ ಅಧಿಕಾರಿ, ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ.
    8. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ.
    9. ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ.
    10. ಪ್ರಾಜೆಕ್ಟ್ ಡೆವಲಪ್ ಮೆಂಟ್ ಆಫೀಸರ್ ಟ್ರೈಬಲ್ ವೆಲ್ ಫೇರ್ ಡಿಪಾರ್ಟ ಮೆಂಟ್.
    11. ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ, ಐಸಿಪಿಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

    ತಾಲ್ಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-
    1. ತಹಶಿಲ್ದಾರರು.
    2. ಕಾರ್ಮಿಕಾಧಿಕಾರಿಗಳು, ಕಾರ್ಮಿಕ ಇಲಾಖೆ
    3. ಕ್ಷೇತ್ರ ಶಿಕ್ಷಣಾಧಿಕಾರಿಗಳು
    4. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಂರಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
    5. ತಾಲ್ಲೂಕು ವೈದ್ಯಾಧಿಕಾರಿ,  ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ.
    6. ಸರ್ಕಲ್ ಇನ್ ಸ್ಪೆಕ್ಟರ್, ಪೋಲೀಸ್ ಇಲಾಖೆ.
    7. ಕಾರ್ಯ ನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ.
    8. ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ,
    9. ವಿಸ್ತರಣಾಧಿಕಾರಿ, ಹಿಂದುಳಿದ ವರ್ಗಗಳ ಅಭಿವೃದ್ದಿ ಇಲಾಖೆ.
    ಗ್ರಾಮ ಪಂಚಾಯಿತಿ ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-
    1. ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಪೋಲೀಸ್ ಸಬ್ ಇನ್ ಸ್ಪೆಕ್ಟರ್.

    ಗ್ರಾಮ ಪಂಚಾಯಿತಿ ಮಟ್ಟದ/ನಗರ ಸಭೆ/ಪುರ ಸಭೆ  ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-
    1. ಶಾಲಾ ಮುಖ್ಯೋಪಾಧ್ಯಾಯರು, ಕಂದಾಯ ನಿರೀಕ್ಷಕರು(ರೆವೆನ್ಯೂ ಇನ್ ಸ್ಪೆಕ್ಟರ್), ಹೆಲ್ತ್ ಇನ್ ಸ್ಪೆಕ್ಟರ್, ಕಾರ್ಮಿಕಾಧಿಕಾರಿ, ಗ್ರಾಮ ಲೆಕ್ಕಿಗರ, ಕಂದಾಯಾಧಿಕಾರಿಗಳು.

    ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳ ಪಾತ್ರ




  • ಬಾಲ್ಯ ವಿವಾಹದ ಮುನ್ನ ಪಾಲಕರಿಗೆ ಕಾಯ್ದೆ ಬಗ್ಗೆ ತಿಳುವಳಿಕೆ ನೀಡುವುದು.
  • ಸಾಮೂಹಿಕ ಮದುವೆ ಏರ್ಪಡಿಸುವವರು. ವಿವಾಹಕ್ಕೆ ಒಳಪಟ್ಟವರ ಅಗತ್ಯ ಮಾಹಿತಿಯುಳ್ಳ ವಹಿ ನಿರ್ವಹಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.
  • ವಿವಿಧ ಕಾಯ್ದೆಯಡಿ ನೋಂದಣಿಯಾಗಿರುವ ಸಂಘ-ಸಂಸ್ಥೆಗಳ ಡೈರಿಕ್ಟರಿ ಹೊಂದಿರಬೇಕು.
  • ಬಾಲ್ಯ ವಿವಾಹ ನಡೆದ ಬಗ್ಗೆ ಪ್ರತಿ ತ್ರೈಮಾಸಿಕಕ್ಕೊಮ್ಮೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ನೀಡುವುದು.
  • ಬಾಲ್ಯ ವಿವಾಹದಿಂದ ಜನಿಸಿದ ಮಕ್ಕಳಿಗೆ ನ್ಯಾಯಾಲಯದಿಂದ ಸೂಕ್ತ ಆದೇಶ  ಪಡೆಯಲು ಸಹಕರಿಸಬೇಕು.
  • ಬಾಲ್ಯ ವಿವಾಹವು ನಡೆಯಬಹುದೆಂದು ತಿಳಿದ ಸಮಯದಲ್ಲಿ ಅದನ್ನು ತಡೆಯಲು ಎಲ್ಲಾ ರೀತಿಯ ನೆರವನ್ನು ಒದಗಿಸುವುದು.
  • ಸಮುದಾಯಕ್ಕೆ ಬಾಲ್ಯ ವಿವಾಹ ಕಾಯ್ದೆಯಡಿ ಇರುವ ಅವಕಾಶಗಳ ಬಗ್ಗೆ ಹಾಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು.
  • ಕುಟುಂಬದ ಘನತೆ-ಗೌರವಕ್ಕೆ ಧಕ್ಕೆ ಬಾರದಂತೆ ಬಹಳ ಎಚ್ಚರಿಕೆಯಿಂದ ಕರ್ತವ್ಯವನ್ನು ನಿಭಾಯಿಸುವುದು.
  • ಬಾಲ್ಯ ವಿವಾಹವನ್ನು ತಡೆಗಟ್ಟುವುದು ಪ್ರಥಮ ಗುರಿಯಾಗಿರಬೇಕು. ಬೇರಾವುದೆ ದಾರಿ ಇಲ್ಲದಿದ್ದಾಗ ಮಾತ್ರ ಪ್ರಾಸಿಕ್ಯೂಷನ್ ಗೆ ಪ್ರಯತ್ನಿಸಬೇಕು.
  • ಬಾಲ್ಯ ವಿವಾಹ ನಿಷೇಧ ಅಧಿಕಾರಿಯು ಬಾಲ್ಯ ವಿವಾಹವನ್ನು ತಡೆಗಟ್ಟುವ ಸಲುವಾಗಿ ಸಮಾಜ ಸೇವಾ ದೃಷ್ಠಿಯಿಂದ ತನಗೆ ಸರಿ ಎನಿಸಿದ ಕ್ರಮವನ್ನು ವಹಿಸಬಹುದು. ಹೀಗೆ ಮಾಡುವಾಗ     ಸಮುದಾಯದ     ಗೌರವಾನ್ವಿತ ಸದಸ್ಯರ ಸಹಾಯವನ್ನು ಪಡೆಯಬಹುದು.
  • ಇದಲ್ಲದೆ ಸೆಕ್ಷನ್ 3, 4, 5 ಹಾಗೂ 13 ರ ಅಡಿಯಲ್ಲಿ ಆಜ್ಞೆ ಹೊರಡಿಸಲು ನ್ಯಾಯಾಲಯಕ್ಕೆ ಸಂವೇದನೆಯನ್ನು ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. (ಸೆಕ್ಷನ್-16(5)).
  • ಈ ಅಧಿನಿಯಮವನ್ನು ಅಥವಾ ಅದರಡಿಯಲ್ಲಿ ಮಾಡಿರುವ ನಿಯಮ/ಆದೇಶಗಳನ್ನು ಪಾಲಿಸುವ ಸದುದ್ದೇಶದಿಂದ ಮಾಡಿದ ಕೆಲಸಗಳನ್ನು ಆಧರಿಸಿ, ಬಾಲ್ಯ ವಿವಾಹ ನಿಷೇಧಾಧಿಕಾರಿಯ ಮೇಲೆ  ಯಾವುದೇ ಮೊಕದ್ದಮೆಯಾಗಲೀ/ಕಟ್ಟಳೆಯಾಗಲೀ/ಕಾನೂನು ಕ್ರಮವನ್ನಾಗಲೀ ಜರುಗಿಸುವಂತಿಲ್ಲ. (ಸೆಕ್ಷನ್-18).
  • ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕರ್ನಾಟಕ ಉಚ್ಛನ್ಯಾಯಲಯವು ರಿಟ್ ಅರ್ಜಿ ಸಂಖ್ಯೆ:1154/2006 ರಲ್ಲಿ ನೀಡಿದ ನಿರ್ದೇಶನದಂತೆ ಕ್ರಿಯಾ ಯೋಜನೆಯನ್ನು ತಯಾರಿಸಲು ಸರ್ಕಾರವು ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಮೂರ್ತಿಗಳಾದ ಜಸ್ಟೀಸ್ ಶಿವರಾಜ್ .ವಿ.ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿಯನ್ನು ರಚಿಸಿದ್ದು, ಸದರಿ ಕೋರ್ ಕಮಿಟಿಯು ದಿನಾಂಕ:30-06-2011 ರಂದು ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತದೆ, ಸದರಿ ವರದಿಯಲ್ಲಿನ ಶಿಫಾರಸ್ಸುಗಳನ್ವಯ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ.
    1. ವರದಿಯಲ್ಲಿ ಮಾಡಲಾಗಿರುವ ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರದ ಆದೇಶ ಸಂಖ್ಯೆ:ಮಮಇ 501 ಎಸ್ ಜೆಡಿ 2011 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ    ನಿರ್ದೇಶನಾಲಯದಲ್ಲಿ 1 ಉಪ    ನಿರ್ದೇಶಕರು, 1 ಸಹಾಯಕ ನಿರ್ದೇಶಕರು, 02 ಪ್ರಥಮ ದರ್ಜೆ ಸಹಾಯಕರು, 02 ಗಣಕ ಯಂತ್ರ ಸಹಾಯಕರು ಮತ್ತು 1 ಸೇವಕರನ್ನೊಳಗೊಂಡಂತೆ ಉಸ್ತುವಾರಿ    ಕೋಶವನ್ನು ಸ್ಥಾಪಿಸಲಾಗಿದೆ.
    2. ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಅನುಷ್ಠಾನಕ್ಕಾಗಿ 2012-13ನೇ ಸಾಲಿನಲ್ಲಿ ರೂ.150.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರೂ.110.62 ಲಕ್ಷಗಳನ್ನು ಇದುವರೆಗೆ ವಿವಿಧ    ಕಾರ್ಯಕ್ರಮಗಳಿಗಾಗಿ ವೆಚ್ಚ    ಮಾಡಲಾಗಿದೆ.
    3. ಬಾಲ್ಯ ವಿವಾಹ ನಿಷೇಧ ಕುರಿತಂತೆ ಆಕಾಶವಾಣಿಯಲ್ಲಿ "ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ" ಎಂಬ ಸರಣಿ ಕಾರ್ಯಕ್ರಮವನ್ನು ಪ್ರತಿ ಶುಕ್ರವಾರ ಬೆಳಿಗ್ಗೆ 7-15 ನಿಮಿಷದಿಂದ 7-30 ರವರೆಗೆ ಹಾಗೂ    ಎಫ್.ಎಂ.ರೈನ್    ಬೋದಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 8-45 ರಿಂದ 9-00 ರವರೆಗೆ ಪ್ರಸಾರ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ರೂ.10,80,517/- ಗಳನ್ನು ಬಿಡುಗಡೆ ಮಾಡಲಾಗಿದೆ.
    4. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿರುವ ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ ಕಾರ್ಯಕ್ರಮದಲ್ಲಿ ಪ್ರತಿವಾರ ಕೇಳಲಾಗುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಶೋತೃಗಳಿಗೆ ರೂ.500/- ರಂತೆ ಬಹುಮಾನ  ನೀಡಲಾಗುತ್ತಿದೆ.
    5. 01-04-2012 ರಿಂದ 31-03-2013 ರವರೆಗೆ 147 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ.
    6. 17 ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಬೀದಿ ನಾಟಕ, ಕಲಾ ಜಾಥಾ ಮತ್ತು ಸೈಕಲ್  ಜಾಥಾಗಳ ಮೂಲಕ ಹಮ್ಮಿಕೊಂಡು ಯಶಸ್ವಿಯಾಗಿ  ನಡೆಸಲಾಗಿದೆ. ಈ    ಕಾರ್ಯಕ್ರಮಕ್ಕಾಗಿ ರೂ.7,14,000/- ಗಳನ್ನು ಬಿಡುಗಡೆ ಮಾಡಲಾಗಿದೆ.
    7. ಜಿಲ್ಲಾ/ತಾಲ್ಲೂಕು ಮಟ್ಟದಲ್ಲಿ  ಬಾಲ್ಯ ವಿವಾಹದ ದುಷ್ಪರಿಣಾಮಗಳು ಮತ್ತು ಶಿಕ್ಷೆಗಳು ಕುರಿತು ಗೋಡೆ ಬರಹಗಳನ್ನು ರಾಜ್ಯಾದ್ಯಂತ ಬರೆಯಿಸಲಾಗಿದೆ. ಅನುದಾನ ರೂ.10,75,000/- ಬಿಡುಗಡೆ    ಮಾಡಲಾಗಿದೆ.
    8. ಕೋರ್ ಕಮಿಟಿಯ ವರದಿಯನ್ನು ಕನ್ನಡದಲ್ಲಿ ಭಾಷಾಂತರಿಸಲು ರೂ. 1,15,000/- ವೆಚ್ಚ ಮಾಡಲಾಗಿದೆ. 10,000 ಪ್ರತಿಗಳನ್ನು ಮುದ್ರಿಸಲಾಗಿದೆ. ರೂ. 7,94,885/- ಗಳನ್ನು ವೆಚ್ಚ ಮಾಡಲಾಗಿದೆ.
    9. ಶಾಲಾ/ಕಾಲೇಜುಗಳಲ್ಲಿ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸಲು ಪ್ರೌಢಶಾಲೆಗಳಲ್ಲಿ ಮತ್ತು  ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ರೂ.17,04,900/- ಬಿಡುಗಡೆ        ಮಾಡಲಾಗಿದೆ.
    10. ಬಾಲ್ಯ ವಿವಾಹ ನಿಷೇಧ ಕುರಿತು ಬ್ರೋಷರ್ಗಳು, ಏಫ್ಎಕ್ಯೂಗಳನ್ನು ಮುದ್ರಿಸಿ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ.
    11. ಬಾಲ್ಯ ವಿವಾಹ ನಿಷೇಧ ಕುರಿತು ಸ್ಟಿಕ್ಕರ್ ಗಳ ಮುದ್ರಣಕ್ಕಾಗಿ ರೂ.30,29,920/-ಗಳನ್ನು ಬಿಡುಗಡೆ ಮಾಡಲಾಗಿದೆ.
    12. 30 ಜಿಲ್ಲೆಗಳ  ಜಿಲ್ಲಾ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗಿದೆ.
    13. ಯೂನಿಸೆಫ್ ವತಿಯಿಂದ ಬಾಲ್ಯ ವಿವಾಹ ನಿಷೇಧದ ಬಗ್ಗೆ ಅರಿವು ಮೂಡಿಸಲು 5 ಬಗೆಯ ಪೋಸ್ಟರ್ ಗಳನ್ನು ಮುದ್ರಸಿ, ಜಿಲ್ಲೆಗಳಿಗೆ ವಿತರಿಸಲಾಗಿದೆ.
    14. ಜಿಲ್ಲೆಗಳ ತಾಲ್ಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ತರಬೇತಿಗಳನ್ನು ನಡೆಸಲು ರೂ.2.69 ಲಕ್ಷ ವೆಚ್ಚ ಮಾಡಲಾಗಿದೆ. ಉಳಿದ  ಜಿಲ್ಲೆಗಳಿಗೆ ತರಬೇತಿ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
    15. ಬಾಲ್ಯ ವಿವಾಹ ನಿಷೇಧ ಕುರಿತು ಕಮಲಿ ಎಂಬ ಸಾಕ್ಷ್ಯಚಿತ್ರ ತಯಾರಿಸಿದ್ದು, ಇದಕ್ಕಾಗಿ ರೂ.1.50 ಲಕ್ಷ ವೆಚ್ಚ ಮಾಡಲಾಗಿದೆ.
    16. ರಾಜ್ಯದ ವಾರ್ತಾ ಇಲಾಖೆಯ ವಿವಿಧ ಸ್ಥಳಗಳಲ್ಲಿ 300 ಫಲಕಗಳಲ್ಲಿ (ಹೋರ್ಡಿಂಗ್ಸ್) ಬಾಲ್ಯವಿವಾಹದ ವಿರುದ್ಧ  ಜಾಹೀರಾತು ಪ್ರದರ್ಶಿಸಲಾಗಿದೆ. ಇದಕ್ಕಾಗಿ ರೂ.21,15,000/- ವೆಚ್ಚ ಮಾಡಲಾಗಿದೆ.

    ******* ಮಾಹಿತಿ ಕೃಪೆ : ವಿಕಾಸ್‌ಪೀಡಿಯಾ **********